ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೮೫ ಹಾಗೆಂದರೇನು ? ಅಹುದು, ತಾರಾಪತಿರಾಯನೇ ಮಲಗಿರುವನು. ದುರ್ಗಾಪುರಕ್ಕೆಂದು ಹೊರಟವನು ಇಲ್ಲಿ ಒಬ್ಬನೇ ಮಲಗಿರುವನೇಕೆ ? ಇಲ್ಲಿ ಇವನ ಸಂಗಡಿಗರಿನ್ನಾರಿರುವರು ? ಹೋ ! ಇದೇನೋ ವಿಪರೀತವಾ ಗಿದೆ. ತಾರಾಪತಿಯ ಬೆನ್ನು-ಹಣೆ-ಕಾಲುಗಳಿಗೆಲ್ಲಕ್ಕೂ ಬಟ್ಟೆಗಳನ್ನು ಇಟ್ಟಿರುವುದೇಕೆ ? ಅಡಿಗಡಿಗೂ ಈ ಯಾತನಾಸ್ವರವು ಹೊರಡುತ್ತಿರುವು ದೇತರಿಂದ ? ಕಳ್ಳರ ಕೈಸೆರೆಯಾಗಿರಬೇಕಲ್ಲವೇ ?

  • ಆತುರಪಡಬೇಡಿ, ಸುಹೃದರೇ ! ಆತುರಪಟ್ಟು, ರಸಾ ಭಾಸಕ್ಕೆ ಕಾರಣರಾಗಬೇಡಿರಿ, ತಾಳ್ಮೆಯಿಂದ ನೋಡುತ್ತಿದ್ದರೆ, ತಾನಾಗಿ ತಿಳಿದುಬರುವುದು, ದುಡುಕಿ, ಕೆಡಿಸುವುದೇಕೆ? ಇದೋ ಬರುತ್ತಿರುವವರು, ನೋಡಿರಿ ವಾಸುದೇವ-ಯಶವಂತರನ್ನು ! ಅವರಿತ್ತ ಬರುತ್ತಿರುವ ಬಗೆ ಯೆಂತಹದಾಗಿರಬೇಕೆಂಬುದನ್ನು ಊಹಿಸಿರಿ, ನೋಡುವ ! ಕೊಲೆಪಾತಕದ ಹೊಲಸು ಕೆಲಸಕ್ಕೆಂದು ಬಗೆದು ಬರುತ್ತಿರುವರಲ್ಲವೇನು ? ಸಂದೇಹವೇಕ ? ವಾಸುದೇವ-ಯಶವಂತರಿಬ್ಬರೂ ಬಂದು, ಮಲಗಿದ್ದ ತಾರಾಪತಿರಾಯನ ಬಳಿಯಲ್ಲಿ ನಿಂತರು. ಯಾತನಾ ವೇಗದಿಂದ ಕಣ್ಣುಗಳನ್ನು ಮುಚ್ಚಿ, ನರಲು ತಿದ್ದ ಜಮಾನ್ದಾರನು, ಮೆಲ್ಲನೆ ಕಣೋರೆದು ಕ್ಷೀಣಸ್ವರದಿಂದ ಕೇಳಿದನು “ ಯಾರು ಬಂದಿರುವವರು ?' ವಾಸುದೇವ-ನಾನು ಜಮಾದಾರ ವಾಸುದೇವರಾಯ. ತಾರಾಪತಿ-ಮತ್ತಾರೂ ಇಲ್ಲವೇ ? ವಾಸುದೇವ-ತಮ್ಮ ದಿವಾನ ಯಶವಂತರಾಯರೂ ಬಂದಿರುವರು. ತಾರಾಪತಿ.-ಎಲ್ಲಿರುವನು ? ವಾಸುದೇವ- ತಮ್ಮ ದುರವಸ್ಥೆಗಾಗಿ ವಿಷಾದಪಡುತ್ತ ಇಲ್ಲಿಯೇ ನಿಂತಿ

ರುವರು. ಯಶವಂತ ಮುಂದೆಬಂದು ಜಮೀನ್ದಾರನ ಕೈಹಿಡಿದು-' ಸಂಗತಿಯೇ ನಾಗಿದೆ ?'