ಪುಟ:ದಕ್ಷಕನ್ಯಾ .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಸ ತಿ ಹಿ ತ್ಯ ಷಿ ಣೀ ತಾರಾಪತಿ-ಆಗುವುದೇನು ? ಕಳ್ಳರ ಕೈಸೆಟ್ಟುಗಳನ್ನು ತಿಂದು ಸಾಯು ತಿರುವುದೇ. ಯಶವಂತ-ಪ್ರಾಣಾಪಾಯವಾಗಿ ತೋರುವಂತಹ ಗಾಯಗಳಲ್ಲವಷ್ಟೆ ? ತಾರಾಪತಿ - ಪ್ರಾಣವು ಎಷ್ಟರಲ್ಲಿದೆ ? ಹೋಗಲಿ; ಅದಾವುದಕ್ಕೂ ನಾನು ಅಳುವುದಿಲ್ಲ. ಆದರೆ, ಬರುವಾಗ ಅಮ್ಮಾಯಿಯವರ ಅನುಮತಿ ಯಿಲ್ಲದೆ, ಮತ್ತು ಗಂಗೆಗೂ ಹೇಳದೆ ಬಂದೆನು, ಮತ್ತೆ ಅವರನ್ನು ಕಂಡು ಸಾಯಬೇಕೆಂಬುದು ನ ವಾಸುದೇವ-ನೀವೇನೂ ಚಿಂತಿಸಬೇಕಾಗಿಲ್ಲ, ನಿಮ್ಮನ್ನು ಕರೆದುಕೊಂಡು ಹೋಗುವುದಕ್ಕಾಗಿಯೇ ನಾವು ಬಂದಿರುವೆವು, ಆದರೆ, ಆಹಾರ ವಿಲ್ಲದೆ ಹೊರಡುವುದು ಹೇಗೆ ? ತಾರಾ ಪತಿ-ಊಟಕ್ಕೇನು ಮಾಡುವಿರಿ ? ವಾಸುದೇವ- ಈ ಸತ್ರಾಧಿಕಾರಿಯು ನಮಗೆ ಬೇಕಾದವನು. ಊಟಕ್ಕೆ ತೊಂದರೆಯಿಲ್ಲ ತಮ್ಮ ಆಹಾರಕ್ಕೂ ಚಿಂತಿಸಬೇಕಾಗಿಲ್ಲ. ಎಲ್ಲವೂ ಇಷ್ಟರಲ್ಲಿ ಸಿದ್ಧವಾಗಬಹುದು, ನೋಡಿ ಬರುವೆನು ; ಸ್ವಲ್ಪ ಮಲಗಿ, ಎಂದು ಹೇಳಿ, ಯಶವಂತನೊಡನೆ ಅಲ್ಲಿಂದ ಮತ್ತೊಂದು ಕಿರುಮನೆಯ ಕಡೆಗೆ ನಡೆದನು. ಅದೇ ವೇಳೆಯ ಲ್ಲಿಯೇ ಬಟ್ಟೆಯಿಂದ ದೇಹವೆಲ್ಲವನ್ನೂ ಮರೆಮಾಡಿ ಕೊಂಡಿದ್ದ ವ್ಯಕ್ತಿಯೊಂದು ಕಾಲುಸಪ್ಪಳವಾಗದಂತೆ ಮೆಲ್ಲಮೆಲ್ಲನೆ ನಡೆತಂದು, ಮಂಚದ ಕೆಳಗೆ ಅಡಗಿಕೊಂಡಿತು. ಅದಾರೆಂಬುದು ಈಗಲೇ ಹೇಗೆ ಗೊತ್ತಾಗಬೇಕು ? ಇದಿರಿಗೆ ಬಂದು ನಿಂತಾಗಲೇ ಹೇಳ ಬೇಕು, ಹೊರಗೆ ಹೋಗಿದ್ದ ವಾಸುದೇವ-ಯಶವಂತರಿಬ್ಬರೂ ನಾಲ್ಕಾರು ನಿಮಿಷಗಳಲ್ಲಿ ಮೂರುನಾಲ್ಕು ಬಾಳೆಯಹಣ್ಣುಗ ಇನ್ನೂ ಒಂದು ಪಾತ್ರೆಯಲ್ಲಿ ಹಾಲನ್ನೂ ತಂದರು. ತಾರಾಪತಿ ರಾಯನು ಕುತೂಹಲದಿಂದ ಕಣ್ಣೆರೆದು ' ವಿಚಾರವೇನು ??