ಪುಟ:ದಕ್ಷಕನ್ಯಾ .djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಸ ತಿ ಹಿ ' ಷಿ ಣಿ ಬಲವಂತ-ನಾನು ನಿನ್ನ ಮಾವ, ಗಂಗೆಯ ತಂದೆ. ಈ ಪತ್ರಕ್ಕೆ ನಿನ್ನ ಹಸ್ತಾಕ್ಷರವನ್ನು ಬರೆದುಕೊಡು, ಲೇಬಿನಿಯನ್ನು ತೆಗೆದುಕೊ. ಕೈನೀಡು, ಬೇಗ ಬರೆ. ತಾರಾಪತಿ-ಮಲಗಿದಂತೆಯೇ ಬೆದರಿ-' ಹಾ, ನನ್ನ ಮಾವ ! ಗಂಗೆಯ ತಂದೆ! ಸುಳ್ಳು-ಎಲ್ಲವೂ ಸುಳ್ಳು.' ಸುಪಂಧ-ಸುಳ್ಳು ನಿಜವೆಂಬುದನ್ನು ಆ ಒಳಿಕ ಹೇಳುವೆ. ಮೊದಲು - ರುಜುವನ್ನು ಮಾಡು. ತಾರಾಪತಿ-ಪತ್ರದಲ್ಲಿ ಏನಿರುವುದೆಂಬುದನ್ನು ತಿಳಿಯದೆ ನಾನೇನನ್ನೂ ಬರೆಯಲಾರೆನು. ಯಶವಂತಹಟಮಾಡಿದರೆ ಜೀವಹಾನಿಯಾದೀತು, ವೃಧಾ ಮುಷ್ಕರ ದಿಂದ ಫಲವಿಲ್ಲ, ಬರೆಯುವುದು ಲೇಸು. ತಾರಾಪತಿ... ನಾನು-ನಾನೆಂದಿಗೂ ಹಾಗೆ ಬರೆಯಲಾರೆನು, ಅಷ್ಟರ ಮೂರ್ಖನಲ್ಲ, ಹುಚ್ಚಿ ನಿನ್ನ ದ್ರೋಹವು ನನ್ನನ್ನೇನು ಮಾಡ ಬಲ್ಲುದು ? ಯಶವಂತ-ಮಾತಿಗೆ ಮಾತನ್ನು ಬೆಳೆಯಿಸುವುದೇಕೆ ? ಸಾಯುವುದೇ ಇಷ್ಟವೋ? ಇದಕ್ಕೆ ರುಜುವನ್ನು ಕೊಟ್ಟು, ಉಳಿದುಕೊಳ್ಳ ಲಿಷ್ಟವೊ ? ತಾರಾಪತಿ-ಜಮಾದಾರರೇ ! ಇದೇನು ? ಅನ್ಯಾಯ : ನೀವಿದ್ದೂ ಈ ಅನ್ಯಾಯವೇ ! ನಿಮಗೂ ಇದರಲ್ಲಿ ಭಾಗವುಂಟೇ ? ಏಕೆ-ಸುಮ್ಮ ನಿರುವಿರಿ ? ಬಲವಂತ-ಜಮಾದಾರರಿಗೆ ಗಂಗೆಯೇ ಸೇರುವಳು, ಇನ್ನೂ ಕೂಗಿ ಸಾಯುವೆಯೇನು ? ತಾರಾಪತಿ-ಗಂಗೆಯೇ ಸೇರುವಳೆಂಬ ಶಬ್ದವನ್ನು ಕೇಳಿ ವಿಕೃತಸ್ವರ ದಿಂದ ಕೂಗುತ್ತ ಮೈಮರೆದನು. ತ =ಅಜ