ಪುಟ:ದಕ್ಷಕನ್ಯಾ .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ 4 ತಿ ಹಿ – ಷಿ ಣಿ ಕಾವಲಿದ್ದ ಕರಿಯನು ಬಂದು-' ಏನು ಬುದ್ದಿ, ಕರೆದಿರಿ ? " ಎಂದು ಕೇಳಿದನು. ಬಲವಂತ-ಹೊರಗೆ ಯಾರು ಬಂದಿರುವರು ? ಕರಿಯ-ಪಟೇಲ, ತಿಮ್ಮಯ್ಯ ನೊಬ್ಬನೇ ಬಂದಿರುವನು, ಮತ್ತಾರೂ ಬಂದಿಲ್ಲ. ಬಲವಂತ- ಎಚ್ಚರಿಕೆಯಿಂದ ನೋಡುತ್ತಿರು ; ಸತ್ರದ ಸುತ್ತಲೂ ದೃಷ್ಟಿ ಬೀಳುತ್ತಿರಲಿ ; ಹೋಗು. ಕರಿಯನು ಹೊರಟುಹೋದನು, ಬಲವಂತನು ಮತ್ತೆ ಬಂದು“ ವಾಸುದೇವರಾವ್‌ ! ಹೊರಗೆ ಯಾರೂ ಬಂದಿಲ್ಲ ಸಂದೇಹಕ್ಕೆ ಕಾರ ಣವೂ ಇಲ್ಲ, ಕೆಲಸವನ್ನು ಪೂರ್ತಿಮಾಡಬೇಕಷ್ಟೆ ?-ಎಂದು ಕೇಳಿದನು.' ವಾಸುದೇವ-ಮಾಡಬಹುದು. ಹೇಗೂ ವಿಳಂಬಿಸುವದು ಸರಿಯಾಗಿ ಕಾಣುವುದಿಲ್ಲ. ಬಲವಂತ_' ವಿಳಂಬವಿಲ್ಲ.' ಎಂದು ಹೇಳಿ, ತಾರಾಪತಿಯ ಬಳಿಗೆ ಬಂದು- ಕಣ್ಣೆರೆದು ನೋಡು, ಈಗಲಾದರೂ ನಿನ್ನ ಹೆಸರನ್ನು ಇದರಲ್ಲಿ ಬರೆ. ಇಲ್ಲವಾದರೆ ಈಗಲೇ ನಿನಗೆ ಮೃತ್ಯು.' ತಾರಾಪತಿ-ಖತಿಗೊಂಡು ಕರೆದು ಕ್ಷೀಣಸ್ವರದಿಂದ-' ದುರಾಗತರೇ ! ಇದರಿಂದ ನೀವು ಯಾವ ಫಲವನ್ನೂ ಹೊಂದಲಾರಿರಿ. ನನ್ನ ಸ್ವತ್ತನ್ನು ನೀವು ಕದ್ದು ಹೊತ್ತು ಹಾಕಬೇಕೆಂದರೆ, ಅದೆಂದಿಗೂ ಆಗದ-ಹೋಗದ ಮಾತು, ನನಗೆ ಸಹಾಯಕನಾಗಿ ದೇವರಿಲ್ಲವೆ ? ಸರ್ಕಾರದವರಿಲ್ಲವೆ ? ಅಥವಾ ಧರ್ಮಕರ್ಮಗಳಾದರೂ, ಬೆಂಗಾ ವಲಾಗಿ ನಿಲ್ಲಲಾರವೆ ? ಈ ಒಣಬೆದರಿಕೆಗೆ ನನ್ನ ಆತ್ಮನು ಹೇಡಿ ಯಾಗುವಂತಿಲ್ಲ ? ಯಶವಂತ-ಹಾಗೋ ? ಚಿತ್ರವಧೆಯಿಂದ ಸಾಯಬೇಕೆಂಬುದೇ ಇಷ್ಟವೋ ?