ಪುಟ:ದಕ್ಷಕನ್ಯಾ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಸ ತಿ ಹಿ ತೃ ಷಿ ಣಿ ಮೇಲೆ ಕತ್ತಿ ! ನಿನ್ನ ಹಿಂದೆ ಮೃತ್ಯು !! ನಿಮಿಷಾರ್ಧದಲ್ಲಿ ನಿನಗಾಗು ತಿದೆ ಪ್ರಾಣಾಪತ್ತು !!! ' ಎಂಬ ವಾಕ್ಯರವು ಹೊರಟು, ಯಶವಂತನನ್ನು ನೆಲಕ್ಕುರುಳುವಂತೆ ಮಾಡಿತು. ಬಲವಂತಾದ್ಯರು ದಿಗ್ಟಾಂತಿಯಿಂದ ತಲೆಯೆತ್ತಿ ನೋಡಿದರು. ಖಡ್ಗಧಾರಿಣಿಯಾದ ಗಂಗೆಯೇ ಪ್ರತ್ಯಕ್ಷ ! ಸಾಲದುದಕ್ಕೆ ಅವಳಲ್ಲಿಉಗ್ರಸ್ವರೂಪಿಣಿಯಾದ ಮಹಿಷಮರ್ಧಿನಿಯ ಸಾಕ್ಷಾತ್ಕಾರ !! ಹೇಳಿಕೇಳಬೇಕೇ ಖಳರ ಮನಸ್ಸಿತಿ ಹೇಗಾಯಿತೆಂಬುದನ್ನು ? ನಿಂತಿದ್ದ ಮೂವರೂ ನಡುಗಿದರೆಂದರೆ ಸಾಕು. ಬಲವಂತ-ತತ್ತರಿಸುತ್ತ ಕಷ್ಟದಿಂದ ತೊದಲುನಾಲಿಗೆಯಲ್ಲಿ ' ಗಂಗೆ ! ಇದೇಕೆಒಂದೆ ? ನೀನು ನನ್ನ ಮಗಳಾಗಿಯೂ ನಮಗೆ ಪ್ರತಿಕೂಲ ಳಾಗಬಹುದೇ ? ನಿನ್ನನ್ನು ಕರೆತಂದವರಾರು ? ಹೀಗಾಡಲು ನಿನಗೆ ಹೇಳಿದವರಾರು ?' ಗಂಗೆ-ಒಮ್ಮೆ ಪತಿಯ ಮುಖವನ್ನು ದೃಷ್ಟಿಸಿ ನೋಡಿದಳು, ಮುಖಕ್ಕೆ ಸರಿಯಾಗಿ ಹೊರಗಡೆಯಲ್ಲಿ ಗೋಡೆಯ ಕಂಡಿಯಿಂದ ಅಡಿಗಡಿಗೆ ನೀರು ಚೀರಿಸಲ್ಪಡುತ್ತಿರುವದನ್ನು ಸೂಕ್ಷ್ಮದೃಷ್ಟಿಯಿಂದ ತಿಳಿದು, ಸಮಾಧಾನ ಹೊಂದಿ-ಬಲವಂತನ ಕಡೆಗೆ ತಿರುಗಿ ಗರ್ವದಿಂದ ನಕ್ಕು ಹೇಳಿದಳು-' ಮುದಿಗೂಬೆ ! ಇನ್ನೂ ಎಷ್ಟೆಷ್ಟು ಪಾಪಕಾರಗ ಇನ್ನು ಮಾಡಿದರೆ ತೃಪ್ತನಾದೀಯೆ ? ನಿನಗೇಕೆ ಸಾವಿಲ್ಲ ? ನಾನು ನಿನ್ನ ಮಗಳೂ ಅಲ್ಲ ; ನೀನು ನನ್ನ ತಂದೆಯ ಅಲ್ಲ, ತಿಳಿಯಿತೆ ? ಇನ್ನು ನನ್ನನ್ನು ಕರೆತಂದವರಾರನ್ನು ವೆಯೋ ? ನಿನ್ನ ಕರ್ಮದೇವ ತೆಯೇ ನನಗೆ ಹೇಳಿತು. ನಿನ್ನ ಭಾಗದ ಮೃತ್ಯುವೇ ನನ್ನನ್ನು ಕರೆ ತಂದಿಲ್ಲಿ ನಿಲ್ಲಿಸಿತು. ನಿನಗೆ ದೈವವೇ ಪ್ರತಿಕೂಲವಾಗಿರುವಾಗ ಮಿಕ್ಕವರನ್ನು ಕೇಳುವೆಯಾ ?' ಗಂಗೆಯ ಈ ಮಾತಿಗೆ, ಕೆಳಗೆಬಿದ್ದಿದ್ದ ಯಶವಂತನು, ಆಗ್ರ ಹದಿಂದೆದ್ದು ನಿಂತು ಅವಳ ಕೈಯಲ್ಲಿದ್ದ ಖಡ್ಗವನ್ನು ಕಿತ್ತು ಕೊಂಡು