ಪುಟ:ದಕ್ಷಕನ್ಯಾ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ್ಷ ಕನಾ ೧೯೩ 4 ವಾಸುದೇವರಾವ್‌ ! ಇದೊ, ಇವಳನ್ನು ನಿನಗೊಪ್ಪಿಸಿರುತ್ತೇವೆ. ಇವ ಳನ್ನು ಕರೆದೊಯ್ಯು ಬೇಕಾದಂತೆ ಮಾಡಬಹುದು. ನಾವೂ ನಮ್ಮ ಕೆಲಸ ವನ್ನು ಮುಗಿಸಿಬಿಡುವೆವು.' ವಾಸುದೇವ-ಸಂತೋಷದಿಂದುಬ್ಬಿ- ಗಂಗೆ ! ಇನ್ನು ನಮಗಿಲ್ಲಿ ಕೆಲಸ ವಿಲ್ಲ ; ನಡೆ ಹೋಗುವ.' ಎಂದು ಕೈ ಹಿಡಿಯಹೋದನು. ಗಂಗೆ-ತಿರಸ್ಕಾರದಿಂದ ನಕ್ಕು- ಓಹೋ ! ಜಮಾದಾರರೇ ! ಅಲ್ಲಿಯೇ ನಿಂತರೆ ಸರಿಯಾಗಿದ್ದೀತು ; ನೋಡಿಕೊಳ್ಳಿರಿ ನೀವು ಪರದಾರಾ ಪಹರಣಕ್ಕೆಂದು, ಈ ಘೋರ ಕೃತ್ಯಕ್ಕೆ ಮುಂದಾಳಾಗಿ ನಿಂತಿರು ವಿರಿ ನಿನ್ನ ಮಾನ-ಪ್ರಾಣಾಪಹಾರಕ್ಕೆಂದು, ಬೇರೊಬ್ಬರು ಸಿದ್ದ ರಾಗಿರುವುದನ್ನು ನೀವು ಹೇಗೆ ತಿಳಿಯಬಲ್ಲಿರಿ ? ನನ್ನ ನೆಳಲುಕೂಡ ನಿಮಗೆ ಸಿಕ್ಕುವುದಿಲ್ಲವೆಂದು ನೀವೇಕೆ ತಿಳಿಯಲಾರಿರಿ ? ಬಲವಂತ-ವಾಸುದೇವರಾವ್‌ ! ಇವಳೇ ನಮ್ಮ ಸರ್ವನಾಶಕ್ಕೆ ಮೂಲ. ಇವಳನ್ನು ಪ್ರಾಣದಿಂದ ಬಿಡಬಾರದು. ನೀನೂ, ಸುಪಂಧನೂ ಸೇರಿ, ಇವಳನ್ನು ಸರಿಮಾಡಿಬಿಡಿರಿ, ನಾನೂ, ಯಶವಂತನೂ ಇವಳ ಗಂಡನನ್ನು ಚಿತ್ರವಧೆಮಾಡಿ ಪೂರೈಸುವೆವು. ಎಂದು ಯಶವಂ ತನೊಡನೆ ತಾರಾಪತಿರಾಯನ ಬಳಿಗೆ ಬಂದನು. ಗಂಗೆ-ಉನ್ಮಾದಿನಿಯಂತೆ ಹಾರಿಬಂದು-' ಬೇಡಬೇಡ, ಕೈದುಡಿಕಿದರೆ ಕೆಟ್ಟು ಹೋಗುವೆ.' ಎಂದು ತಡೆದಳು, ಸುಸಂಧನು ಗಂಗೆಯ ಕೈಗಳನ್ನು ಬಿಗಿಯಾಗಿ ಹಿಡಿದನು. ವಾಸುದೇವನು ಅವಳ ಕೊರ ಳನ್ನು ಅಮುಕಿ ಹಿಡಿದನು. ಗಂಗೆಯು ಶ್ವಾಸೋಚ್ಛಾಸಕ್ಕೆ ಅವ ಕಾಶವಿಲ್ಲದೆ ಕಷ್ಟ ಪಡುತ್ತಿದ್ದಳು. ತಾರಾಪತಿಗೆ ಇದೇ ಸ್ಮತಿಯುಂಟಾಗುತ್ತಿದ್ದುದರಿಂದ-ಕೂ ಗನ್ನು ಕೇಳಿ ಕಣ್ಣೆರೆದು ನೋಡಿದನು, ತನ್ನ ವಧೆಗಾಗಿ ಬಲವಂತ-ಯಶ ವಂತರು ಕಾದಿರುವರು. ಇನ್ನೇನು ತನ್ನ ಮೇಲೆ ಕತ್ತಿಯೂ ಬೀಳುವುದು. 13