ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶ್ರೀ || ಪ್ರಪ್ತ ಪರಿಚ್ಛೇದ. • Y೧. «೨y GGP೪೨••••° ••••• 65 ಇ-೦•••• •••• oooo. - • obook •••••• ) •••1 •• (ದಿಗ್ವಿಜಯ.) ಎಲ್ಲ ಬೆಳಕು ಕಡಿಮೆಯಾಯಿತು. ಅದು ಕಡಿಮೆಯಾದಂತೆಲ್ಲಾ G++++) ಬಲವಂತಾದ್ಯರ ಮುಚ್ಚಿ ಹೋಗಿದ್ದ ಕಣ್ಣುಗಳೂ ಮೆಲ್ಲ ಮೆಲ್ಲನೆ ತೆರೆಯಲಾರಂಭಿಸಿದುವು. ಕಡೆಗೆ ದೀಪವು ಮರೆ ಯಾಯಿತು ; ಕಿರುಮನೆಯು ಮೊದಲಿದ್ದಂತೆ, ಸೊಡರ ಬೆಳಕಿಂದ ಮಿನುಗುತ್ತಿದ್ದಂತೆ ಕಂಡುಬಂದಿತು. ಕೆಳಗೆ ಬಿದ್ದಿದ್ದ ವಾಸುದೇವನ ಬೆನ್ನಿ೦ದ ರಕ್ತವು ಸುರಿಯುತ್ತಿದ್ದುದಲ್ಲದೆ, ಅವನ ಯಾತನಾಸ್ವರದಿಂದ ಕಿರುಮನೆಯೇ ಚದರುವಂತಾಯಿತು. ಪಾಪ ! ಬಲ ವಂತನಿಗೆ ಈಗೀಗ ಬುದ್ಧಿಯುಂಟಾಗುತ್ತಿದೆ, ಏನುಮಾಡುವುದು ? ತಮ್ಮ ದುರ್ಬೋಧನೆಯಿಂದ ಕೆಟ್ಟು ಬಿದ್ದಿದ್ದ ವಾಸುದೇವನನ್ನು ಸುಸಂಧನ ಸಹಾಯದಿಂದೆತ್ತಿ ಹಿಡಿದು ನಿಲ್ಲಿಸಿ, ಬೆನ್ನಿಗೆ ಬಟ್ಟೆಯನ್ನು ಕಟ್ಟಿ, ತನ್ನ ಭುಜದಮೇಲೆ ಆನಿಸಿಕೊಂಡು ನಿಂತನು. ಯಶವಂತನಿಗೆ ಇದು ಸಹನಾ ತೀತವಾಗಿ ತೋರಿತು, ತಾರಾಪತಿಯ ವಧೆಗಾಗಿ ಎತ್ತಿದ ಕೈ, ಗಂಗೆಯ ಕಡೆಗೆ ತಿರುಗಿತು. ಗಂಗೆಯಿಂದ ಯಾವ ಮಾತೂ ಹೊರಡಲಿಲ್ಲ. ಆದರೆ, ಆಗಲೂ ಅವನ ಪ್ರಯತ್ನವು ಸಾಗಲಿಲ್ಲ.-' ವಿದ್ರೋಹಿ ! ಪಾಮರ !! ಎತ್ತಿದ ಕೈ ಕೆಳಗೆ ಬಿಡುವುದಾಗಲೀ,-ಮುಂದೆ ಬರುವುದಾಗಲೀ ಕಂಡರೆ, ಈ ಬೆಂಕಿಯಿಂದ ಸುಟ್ಟು ಹೋಗುವೆ. ಎಚ್ಚರಿಕೆ !” ಎಂಬ ಘನನಿರೋಧ ದಿಂದ ಆಶೆಯ ತಿರೋಧಾನವಾಯಿತು, ಮತ್ತೆ ಎಲ್ಲರೂ ತಿರುಗಿನೋಡಿ ದರು, ವಾಸುದೇವನಿದ್ದೆಡೆಯಲ್ಲಿ ಪಿಸ್ತೂಲನ್ನು ಹಿಡಿದು ಕೃತಾಂತನೇ ನಿಂತಿ ರುವನು. ಅಬ್ಬ, ಹದಿಮೂರು ವರ್ಷದ ಹುಡುಗನಿಗೆ ಎಂತಹ ಕೆಚ್ಚೆದೆ