ಪುಟ:ದಕ್ಷಕನ್ಯಾ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

viin ರಾರ್ಧವನ್ನು ಕಳುಹಬೇಕೆಂದ ತ್ವರೆಪಡಿಸಿದರು, ಆದರೆ ಸುಶೀಲೆಯ ದ್ವಿತೀಯ ಮುದ್ರಣದ ಕಾರವೂ, ಮುಂದಾಗಿ ನಡೆಯಬೇಕಾಗಿ ಬಂದುದ ರಿಂದ ಎರಡಕ್ಕೂ ನಡುವೆ ನಿಲ್ಲಬೇಕಾಯಿತು ಇದರ ನಡುವೆ, ಗೃಹರಾ ಜ್ಯಾಂಗಕ್ಕೊಳಪಟ್ಟ ವಿವಾಹಮಹೋತ್ಸವವೊಂದರ ನಿಮಿತ್ತ, ಗುರುಹಿರಿ ಯರೊಡನೆ ಹೊರಡಬೇಕಾದ ಸಯಣಸಂಗತಿಯೂ ಸೇರಿತು. ಈ ಸಂಭ್ರ ಮದಲ್ಲಿ ಹೊರಡುವ ಗಡಬಡಿಯಿಂದ, ನಮ್ಮ ಅಜಾಗರೂಕತೆಯ ಫಲವಾಗಿ, ನಂದಿನೀಮಾತೃಕೆಯ ಉತ್ತರಾರ್ಧವು ಕಣ್ಮರೆಯಾಗಿ, ಉಳಿದುವು ಪೆಟ್ಟಿ ಗೆಗೆ ಸೇರಿದ್ದುವು, ಸಾಲದುದಕ್ಕೆ ಅನಿರೀಕ್ಷವಾಗಿ ಬಂದೊದಗಿದ ದೃಷ್ಟಿ ಮಾಲಿನ್ಯ ರೋಗದ ದೆಸೆಯಿಂದ, ನೇತ್ರಚಿಕಿತ್ಸೆಗಾಗಿ ಬೆಂಗಳೂರಲ್ಲಿಯೇ ಒಂದು ತಿಂಗಳ ದೀರ್ಘಕಾಲವನ್ನೂ ಕಳೆಯಬೇಕಾಗಿ ಬಂದಿತು ಹೀಗಾದು ದರಿಂದ ನಂದಿನಿಯ ಉತ್ತರಾರ್ಧಕ್ಕೆ ತಗಾದೆಯುಂಟಾಗಿದ್ದರೂ ಕಳುಹಲಿ ಕ್ಕಿಲ್ಲದೆ, ಅನಿರ್ವಾಹಪಕ್ಷದಿಂದ ಸುಮ್ಮನಿರಬೇಕಾಯಿತು. - ಹೀಗೆ ವಚನಭ್ರಷ್ಟತೆಗೆ ಗುರಿಯಾಗಬೇಕಾಯಿತೆಂಬ ವ್ಯಾಕುಲ ದಲ್ಲಿದ್ದಾಗ, ಇದೇ 1915 ನೇ ಜೂ೯ 20ನೆ: ಭಾನುವಾರ ಮಧ್ಯಾಹ್ನ ದಲ್ಲಿ, ಕೇವಲ ಶಬ್ದ ಸ್ಪರ್ಶಗಳ ಮೂಲಕ-ಅದೃಶ್ಯವಾಣಿಯಿಂದ,-' ಸರ್ಕಾರದವರ ಆಜ್ಞಾಪತ್ರವು ಬಂದಿದೆ. ಇನ್ನೂ ಇಲ್ಲೇಕೆ ವಿಳಂಬಿಸುವೆ ; ಏಳು.' ಎಂಬೀ ನಾಗಮ್ಮತವನ್ನು ಸುರಿಸಿ, ನಾ ಜಡಚೇತನಕ್ಕೆ ಜೈತನ್ಯ ವೃದ್ಧಿ ಯುಂಟುಮಾಡಿದ ಮಾತೃಕಟಾಕ್ಷದಿಂದ, ಆ ಕ್ಷಣದ ಮೊದಲು, ನಮ ಗುಂಟಾದ ಆನಂದೋತ್ಸಾಹಗಳೆಷ್ಟೆಂಬುದನ್ನು, ಇಲ್ಲಿ ಹೇಗೂ, ಹೇಳಿ ಮುಗಿಸುವಂತಿಲ್ಲ. ಮಾತೆಯಿಂದ ನಿರೂಪವಾದ ಮರುದಿನವೇ ಇಲ್ಲಿಗೆ ನನ್ನ ಧರ್ಮ ಪ್ರಭು ಸರ್ಕಾರದವರ ಕಡೆಯಿಂದ ವಿರಾಗಿಣಿಯನ್ನು ಕಳುಹಬೇಕೆಂಬ ಆಜ್ಞಾಪತ್ರವು ಬಂದಿದ್ದ ವರ್ತಮಾನವು ನನ್ನ ಕಿವಿಯನ್ನು ಮುಟ್ಟಿತು. ಹೀಗೆ ಅದೃಷ್ಟವು ನಿದರ್ಶನಕ್ಕೆ ಬಂದುದರಿಂದ ತ್ವರೆಪಟ್ಟು ನಾಲ್ಕಾರು