ಪುಟ:ದಕ್ಷಕನ್ಯಾ .djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೯೭ ದ ಕ ಕ ನ್ಯಾ ಇದೆಲ್ಲವೂ ಮುಗಿಯುವಷ್ಟರಲ್ಲಿಯೇ ಸತ್ರದ ಹೊರಬಾಗಿಲಲ್ಲಿ ಕೊಳಲೂದಿದ ಶಬ್ದವು ಕೇಳಿಸಿತು. ನೋಡುತ್ತಿದ್ದಂತೆಯೇ, ನಾಲ್ಕಾರು ನಿಮಿಷಗಳಲ್ಲಿ, ದೊಣ್ಣೆಗಳನ್ನು ಹಿಡಿದಿದ್ದ ಇನ್ನೂರುಮಂದಿ ಕಳ್ಳರಿಂದ ಸತ್ರವು ಕಿಕ್ಕಿರಿವಂತಾಯಿತು. ಹೀಗೆ ಬಂದವರನ್ನು ನೋಡಿ ಬಲವಂತನಿಗೆ ಸ್ವಲ್ಪ ಚೈತನ್ಯವುಂಟಾದಂತೆ ತೋರಿ ಮೆಲ್ಲನೆ- ಕಾಪಾಡಿರಿ, ಆಪ್ತರೇ ನಮ್ಮನ್ನು ಬಿಟ್ಟು ಕೊಡಬೇಡಿರಿ !” ಎಂದು ಮೊರೆಯಿಟ್ಟನು. ದಂಗೆಕೋರರು ಕ್ರೋಧಾವೇಶದಿಂದ ಕಿರುಮನೆಗೆ ನುಗ್ಗಲು ಪ್ರಯತ್ನ ಪಟ್ಟರು. ಆದರೆ, ಧಯ್ಯ ಪಾಲನು ಬಾಗಿಲಿಗಡ್ಡಲಾಗಿ ಕೈಕೋವಿಯನ್ನು ಗುರಿಹಿಡಿದು, ಎಡಗೈ ಯಿಂದ ಅಂಗಿಯ ಕಿಸೆಯಲ್ಲಿದ್ದ ತುತೂರಿಯನ್ನು ಹಿಡಿದು, ಬಲವಾಗಿ ಪೂರಿ ಸಿದನು, ಅದರ ಬಲವನ್ನಿ ನಾದದಿಂದ ಆ ಪ್ರಾಂತವೇ ನರ್ತಿಸುವಂತಾ ಯಿತು, ನಿಂತಿದ್ದವರೆಲ್ಲರೂ ಭವಿಷ್ಯವೇನೆಂಬುದನ್ನರಿಯಲಾರದೆ ಕಿವಿಗಳನ್ನು ಮುಚ್ಚಿಕೊಂಡು ನಿಂತರು. ತುತ್ತೂರಿಯ ಶಬ್ದವಡಗುವುದರಲ್ಲಿಯೇ ಸತ್ರದ ಸುತ್ತಲೂ ಭಲ್ಲೆಗಳನ್ನು ಹಿಡಿದ ಭಟರು ಮುತ್ತಿದರು. ಅವರಲ್ಲಿ ಮುಖಂಡ ರಾಗಿದ್ದ ನಾಲ್ಕಾರು ಮಂದಿಗಳು, ಗುಂಪಿನೊಳಗೆ ನುಗ್ಗಿ ಬಂದು, ಧರ್ಮ ಪಾಲನ ಮುಂದೆ ನಿಂತು, ಕೈಗಳನ್ನು ಮೇಲಕ್ಕೆತ್ತಿ- ಜಯ ! ವಿಜಯ !! ಸರದಾರ್ ಧರ್ಮಪಾಲರಿಗೆ ದಿಗ್ವಿಜಯ !!! ' ಎಂಬ ಜಯಘೋಷದಿಂದ ಅಹಿತರ ತಲೆಯ ಮಿದುಳನ್ನು ಚದರಿಸಿಬಿಟ್ಟರು. ಸತ್ರದ ಒಳಗೂ, ಹೊರಗೂ, ಸುತ್ತಲೂ ಅದೇ ಜಯಘೋಷವೇ ತುಂಬಿತುಳುಕಾಡುವಂತಾಯಿತು. ಧರ್ಮಪಾಲ--ಕೈಮೇಲಕ್ಕೆತ್ತಿ- ಆಪ್ತರೇ ! ಸಂಚುಗಾರರಲ್ಲಿ ಒಂದು ತಲೆಯಾದರೂ ತಪ್ಪಿಸಿಕೊಳ್ಳದಂತೆ ಎಲ್ಲರನ್ನೂ ಹಿಡಿದು, ಬೇಡಿಗ ಇನ್ನು ತೊಡಿಸಬೇಕು.' ಎಂದು ಹೇಳಿ, ಮತ್ತೆ- ಸಂಚುಗಾರರೆ ಲ್ಲರೂ ಕೇಳತಕ್ಕುದು. ನಿಮ್ಮಲ್ಲಿ ಪ್ರಾಣಾಪೇಕ್ಷೆಯುಳ್ಳವರೆಲ್ಲರೂ, ಭಟರಿಗೆ ವಿಧೇಯರಾಗಿರಬೇಕು, ಹಾಗಿಲ್ಲದೆ, ಪ್ರತಿಕೂಲವಾಗಿ ನಡೆಯಬೇಕೆಂಬವರು, ಅಲ್ಲಿಯೇ ಹತರಾಗಿ ಬೀಳುವರು. ಚನ್ನಾಗಿ ತಿಳಿದಿರಿ.' ಹೀಗೆಂದು ಎರಡಾವತಿ ಕೂಗಿಹೇಳಿದನು.