ಪುಟ:ದಕ್ಷಕನ್ಯಾ .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮ ಸ ತಿ ಹಿ ತ್ಯ ಷಿ ಣಿ ಧರ್ಮಪಾಲನ ಅಪ್ಪಣೆಯಂತೆ ಭಟರಲ್ಲಿ ಕೆಲವರು, ಕಳ್ಳರ ದೊಣ್ಣೆಗಳನ್ನು ಕಿತ್ತೆಸೆಯುತ್ತ ಬಂದಂತೆಲ್ಲಾ ಹಿಂದಿದ್ದ ಮತ್ತೆ ಕೆಲವರು ಬೇಡಿಗಳನ್ನು ತೊಡಿಸುತ್ತ ಬಂದು, ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲರನ್ನೂ ಸೆರೆ ಹಿಡಿದುಬಿಟ್ಟರು. ಧರ್ಮಪಾಲನು ಸಂಭ್ರಮದಿಂದ ಭಟರನ್ನು ಕುರಿತು * ಆಪ್ತರೇ ನಿಮ್ಮಲ್ಲಿ ಮೂರುಪಾಲು ದಳವು, ಇವರನ್ನು ಜಾಗರೂಕತೆ ಯಿಂದ ಕರೆದೊಯ್ಯಬೇಕು ; ಉಳಿದವರು ನಮ್ಮ ಜತೆಯಲ್ಲಿ ಬರಬೇಕು. ಇನ್ನು ಪಯಣಕ್ಕೆ ಸಿದ್ಧತೆಯಾಗಲಿ.' ಎಂದು ಕಟ್ಟು ಮಾಡಿದನು.

  • ಧರ್ಮಪಾಲನ” ದಳದಲ್ಲಿ ಮುಕ್ಕಾಲುಪಾಲು ಕೈಸೆರೆಯಾದವ ರನ್ನು ಕರೆದುಕೊಂಡು ಮುಂದೆ ಹೊರಟಿತು, ಉಳಿದವರು ಪ್ರಯಾಣಕ್ಕೆ ತಕ್ಕ ಬಂಡಿಗಳನ್ನೂ, ಸಾಮಗ್ರಿಗಳಿಗೆ ಬೇಕಾಗುವ ಬಂಡಿಗಳನ್ನೂ ತಂದು, ಸತ್ರದ ಮುಂದೆ ನಿಲ್ಲಿಸಿದರು. ಧರ್ಮಪಾಲನು ಬಲವಂತಾದ್ಯರನ್ನು ಬೆದ ರಿಸಿ, ಕಳುವಿನ ಪದಾರ್ಥಗಳೆಲ್ಲವನ್ನೂ ಹುಡುಕಿತರಿಸಿ, ಬಂಡಿಗಳಲ್ಲಿ ತುಂಬಿಸಿ ದನು. ಬಳಿಕ ವಾಸುದೇವಾದಿ ನಾಲ್ಕರೂ ಒಂದು ಬಂಡಿಯಲ್ಲಿ ಕೂಡಲ್ಪ ಟೈರು, ಅವರ ಕಾವಲಿಗಾಗಿ ಸುತ್ತಲೂ ಭಟರನ್ನು ನಿಯಮಿಸಿ, ಮೇಲ್ವಿ ಚಾರಣೆಗಾಗಿ ಕೃತಾಂತನೇ ಕುದುರೆಯನ್ನೇರಿ ಹೊರಟನು. ತಾರಾಪತಿ ರಾಯನನ್ನು ಮತ್ತೊಂದು ಬಂಡಿಯಲ್ಲಿ ಮೃದುವಾದ ಹಾಸಿಗೆಯ ಮೇಲೆ ಮಲಗಿಸಿ, ಆತನ ಔಷಧೋಪಚಾರಕ್ಕೆ ಡಾಕ್ಟರನ್ನೇ ಕುಳ್ಳಿರಿಸಿದನು. ಗಂಗೆ ಯು ಪ್ರತ್ಯೇಕವಾಗಿ ಇನ್ನೊಂದು ಬಂಡಿಯಲ್ಲಿ ಕುಳಿತಳು. ಬಳಿಕ ಸತ್ರದ ಬಾಗಿಲನ್ನು ಭದ್ರಪಡಿಸಿ, ಧರ್ಮಪಾಲನು, ಗಂಗೆಯ ಮತ್ತು ತಾರಾಪತಿ ರಾಯನ ಬೆಂಗಾವಲಾಗಿ ಅಶ್ವವನ್ನೇರಿ ವಿಜಯೋತ್ಸಾಹದಿಂದ ನಲಿಯುತ್ತ ಶ್ರೀನಗರಾಭಿಮುಖನಾಗಿ ನಡೆದನು. ಇದರಿಂದಲೇ-' ಧರ್ಮೋವರ್ಧ ತಿ-ವರ್ಧತಿ' ಎಂಬ ಸೂಕ್ತಿಯು ಸಾರ್ಧಕತೆಯನ್ನು ಹೊಂದಿರುವು ದೆಂದು ಹೇಳಬಹುದಲ್ಲವೇ, ಸುಹೃದರೇ ! ಇರಲಿ, ಇನ್ನೂ ಮುಂದಿನ ಫಲಿ ತಾಂಶವನ್ನು ತಿಳಿದ ಬಳಿಕ ನಲಿದಾಡುವ.'