ಪುಟ:ದಕ್ಷಕನ್ಯಾ .djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀತುರೀ ಯ ಭಾಗ. ೪ ಪ್ರಥಮಪರಿಚ್ಛೇದ. (ನ್ಯಾಯವಿಮರ್ಶೆ-ಕೃತಾಂತನ ವಾಬ್ರಲ) &ಾಂಕದು, ಶ್ರೀನಗರದ ನ್ಯಾಯಾಸ್ಥಾನದಲ್ಲಿ ವಿಚಾರಣೆ, ನ್ಯಾಯಾ ಸ್ಥಾನವು, ಸಕಲ ಸನ್ನಾ ಹದೊಡನೆ, ಪರಿಶೋಭಿಸುತ್ತಿದೆ' ನ್ಯಾಯವಾದಿಗಳೂ, ಪಂಚಾಯಿತರೂ, ಇತರ ಕಾರ್ ನಿರ್ವಾಹಕರೂ ತಂತಮ್ಮ ನಿಯತಸ್ಥಾನದಲ್ಲಿ ಕುಳಿತಿರು ವರು, ಜಮೀನ್ದಾರ್ ತಾರಾಪತಿರಾಯ, ಕೃತಾಂತರಿ - ಬ್ಬರೂ ಬಿರುದುಗಳನ್ನು ಧರಿಸಿ ಕುಳಿತಿದ್ದ ಧರ್ಮಪಾಲನ ಬಳಿಯಲ್ಲಿ ಕುಳಿತಿದ್ದರು. ರಾವ್ ಬಹದೂರ್ ರಾಧಾನಾಧರಾಯನು ನ್ಯಾ ಯಾಸ್ಥಾನದ ವಿಚಾರಣಾಕರ್ತನಾಗಿಯೂ, ಪೊಲೀಸ್ ಇ೯ ಸ್ಪೆಕ್ಟರ್ ದಳ ವಾಯಿಸಿಂಗನು ಸೂಚನಾಕರ್ತನಾಗಿಯೂ ನಿಯಮಿತರಾಗಿದ್ದರು, ನ್ಯಾಯ ತೀರ್ಮಾನಕಾರನು (ದಂಡಾಧಿಕಾರಿ) ಬಂದು ಕುಳಿತಿದ್ದನು. ತಾರಾ ಪತಿರಾಯನು ಕುಳಿತಿದ್ದ ಸ್ಥಳಕ್ಕೆ ಹಿಂಗಡೆಯ ತೆರೆಯೊಳಗೆ ಸುನಂದಾ ಗಂಗೆ-ಯಮುನೆಯರು ಕುಳಿತಿದ್ದರು. ಉಳಿದ ವಿಷಕಂಠಾದಿಗಳೂ, ಬಲ ವಂತಾದಿಗಳೂ ನ್ಯಾಯಸ್ಥಾನದ ಹೊರಗೆ ನಿಲ್ಲಿಸಲ್ಪಟ್ಟಿದ್ದರು, ವಿಚಾರ ಣೆಗೆ ಗೊತ್ತಾದ ವೇಳೆಯೂ ಬಂದಿತು ; ದಂಡಾಧಿಕಾರಿಯ ಆಜ್ಞೆಯ ಆಯಿತು. ಯಶವಂತ, ವಾಸುದೇವ, ಬಲವಂತ, ಸುಸಂಧರೂ ಕರೆಸ ಲ್ಪಟ್ಟು ಕೈಕೋಳಗಳೊಡನೆ ಬಂದು ನಿಂತರು, ತಾರಾಪತಿರಾಯನು, ಕ್ರೋಧಾಂಧನಾಗಿ ಏಳಹೋಗಿ, ಅಷ್ಟರಲ್ಲಿಯೇ ಧರ್ಮಪಾಲರಿಂದ ತಡೆಯ