ಪುಟ:ದಕ್ಷಕನ್ಯಾ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಸ | ಹಿ ತ ಷಿ ಣಿ ಲ್ಪಟ್ಟು, ಖತಿಗೊಂಡು ಕುಳಿತನು. ಬಳಿಕ ಧರ್ಮಪಾಲನ ಸೂಚನೆಯಂತೆ, ಮೊದಲು ಕೃತಾಂತನ ಹೆಸರೇ ಕರೆಯಲ್ಪಟ್ಟಿತು. ಕೃತಾಂತನು ವಿನೀತ ನಾಗಿ ಎದ್ದು ಬಂದು, ವಿಚಾರಣಾಕರ್ತರ ಇದಿರಾಗಿ ನಿಂತು, ತಲೆಬಾಗಿ ವಂದಿಸಿದನು. ವಿಚಾರಣಾಕರ್ತ (ರಾಧಾನಾಧರಾವ್.)-ಕುತೂಹಲದಿಂದ “ ಅಯ್ಯ, ಕೃತಾಂತ ! ನೀನಿನ್ನೂ ಕೋಮಲಬಾಲಕನು, ಈಗಲೇ ನೀನು ಮಾಡಿ-ಮಾಡುತ್ತಿರುವ ಸಾಹಸಕಾರಗಳು ಸ್ತುತ್ಯರ್ಹವಾದುವು ಗಳೇಸರಿ. ಆದರೂ, ನೀನರಿತಿರುವ ವಿಚಾರವೆಲ್ಲವನ್ನೂ ಯಧಾವ ತಾಗಿ ತಿಳಿಸು, ಸತ್ಯವನ್ನು ಮಾತ್ರ ಎಂದಿಗೂ-ಯಾರೂ ಉಲ್ಲಂ ಘಿಸಬಾರದು.' ಕೃತಾಂತನು, ವೃದ್ಧಿ ಹೊಂದುತ್ತಿರುವ ಉತ್ಸಾಹಶಕ್ತಿಯಿಂದ ನಲವೇರಿ, ನ್ಯಾಯಸ್ಥಾನದಲ್ಲಿದ್ದವರೆಲ್ಲರೂ ಕೇಳುವಂತೆ ಸ್ಪುಟವಾಗಿಯ, ಘಟ್ಟಿಯಾಗಿಯ, ಗಂಭೀರವಾಗಿಯೂ, ಅರ್ಥವತ್ತಾಗಿಯೂ ತನ್ನ ಚರಿ ತೆಯೆಲ್ಲವನ್ನೂ ಹೇಳತೊಡಗಿದನು. [ನಮ್ಮ ಸೋದರಿಯರು ಮತ್ತೂ ಅಧಿ ಕಶ್ರದ್ಧೆಯಿಂದ ಇದನ್ನು ಅವಧರಿಸಬೇಕಲ್ಲವೆ ?] ಕೃತಾಂತ-ದಂಡಾಧಿಕಾರಿಯ ಮತ್ತು ವಿಚಾರಣಾಳರ್ತನ ಕಡೆಗೆ ತಿರುಗಿ ಕೈಮುಗಿದು ' ಆಶ್ವರ ಜನಕವಾದ ನನ್ನ ಚರಿತ್ರೆಯನ್ನು ಯಥಾವ ತ್ಯಾಗಿಯೇ ವಿವರಿಸುವೆನು, ನ್ಯಾಯಾಸ್ಥಾನದ ಸಮಸ್ತರೂ ಅವ ಧರಿಸಬಹುದಾಗಿದೆ. ಏನೆಂದರೆ:- ಸುನಂದಾದೇವಿಯೇ ನಮ್ಮ ತಾಯಿ, ನನ್ನ ತಮ್ಮನಾದ ಮೋ ಹನಕುಮಾರನು ಗರ್ಭದಲ್ಲಿರುವಾಗ ನನ್ನ ತಾಯಿಯು, ಪ್ರಸುವಕ್ಕಾಗಿ ಕರೆಯಬಂದಿದ್ದ ತನ್ನ ತಂದೆಯೊಡನೆ, ಮೂರುವರ್ಷದ ಮಗುವಾಗಿದ್ದ ನನ್ನನ್ನು ಕರೆದುಕೊಂಡು, ಪತಿಯಾಜ್ಞೆಯನ್ನು ಹೊಂದಿ, ತೌರೂರಿಗೆ ತೆರಳಿ ದಳು. ಅಲ್ಲಿಗೆ-ಎಂದರೆ ದುರ್ಗಾಪುರಕ್ಕೆ ಹೋಗಿ ಸೇರಿದ ೩-೪ ತಿಂಗಳೊ