ಪುಟ:ದಕ್ಷಕನ್ಯಾ .djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಸ ತಿ ಹಿ ತ್ಯ ಷಿ ಣಿ ಮೋಡಿ ಕೈಬರೆವಣಿಗೆಯನ್ನು ಕೊಟ್ಟರೂ ಧಾರಾಳವಾಗಿ ಓದಬಲ್ಲವಳಾ ಗಿದ್ದೆನು, ಇದರಿಂದ ನಾನು ನಮ್ಮ ತಂದೆಗೆ ಕಾಗದವನ್ನು ಬರೆಯಬೇಕೆಂ ದರೆ ಉತ್ಸಾಹವನ್ನೇ ಹೊಂದುತ್ತಿದ್ದೆನಾದುದರಿಂದ, ಅದು ಮೊದಲು, ನಾನೇ ನಮ್ಮ ತಂದೆಗೆ ಕಾಗದವನ್ನು ಬರೆಯುತ್ತಿದ್ದೆನು. ಅದು ಹಾಗಿರಲಿ. ನನ್ನ ಕಾಗದವು ಸೇರಿದ ಒಂದೆರಡು ವಾರಗಳಲ್ಲಿಯೇ ನಮ್ಮ ತಂದೆ ಯಕಡೆಯಿಂದ ನನ್ನ ಹೆಸರಿಗೆ ಬಂದ ಉತ್ತರಪತ್ರದಲ್ಲಿ ಬ್ರಹ್ಮ ಸಂಕಲ್ಪವು ಹೀಗಿತ್ತಾದುದರಿಂದ, ದ್ವಿತೀಯಸಂಬಂಧಕ್ಕೆ ಗುರಿಯಾಗಬೇಕಾಯಿತು. ಇದಕ್ಕಾಗಿ ಯಾರೂ ಹೇಗೂ ಯೋಚಿಸಬೇಕಾಗಿಲ್ಲ, ನಿಮ್ಮಲ್ಲಿಯಾಗಲೀ, ನಿಮ್ಮ ತಾಯಿಯ ವಿಷಯದಲ್ಲಾಗಲೀ ನನಗೆ ತಿರಸ್ಕಾರಬುದ್ದಿಯಿರುವು ದಿಲ್ಲ. ಆದರೆ ಈಗಲೇ ನಾನು ನಿಮ್ಮನ್ನು ಕರೆಯಿಸುವಂತಿಲ್ಲ, ಏಕೆಂದರೆಪ್ರಬಲವ್ಯಾಜ್ಯಕ್ಕೆ ಸಿಕ್ಕಿ ನರಳುತ್ತಿರುವ ನಾನು, ಸದ್ಯಸ್ಥಿತಿಯಲ್ಲಿ ಊರೂರು ಸತ್ಯಬೇಕಾಗಿ ಬಂದಿದೆ ಸಾಲದುದಕ್ಕೆ ಮಾತೃವಾಕ್ಯವೂ ತಡೆಮಾಡು ತಿದೆ. ಈ ಹಲವು ಕಾರಣಗಳಿಂದ ಪ್ರತ್ಯೇಕಭವನವನ್ನು ನಿರ್ಮಿಸಿ, ಆ ಒಳಿಕ ನಿಮ್ಮನ್ನು ಕರೆಯಿಸಿಕೊಳ್ಳುವೆನು, ಆವರೆಗೂ ನೀವು ನನಗೆ ತೊಂದ ರೆಯನ್ನು ಕೊಡದೆ, ಅಲ್ಲಿಯೇ ಇರಬೇಕೆಂದು ಕೇಳುತ್ತಿರುವೆನು.' ಹೀಗೆಂದು ಬರೆದಿದ್ದರು. ಅಷ್ಟಕ್ಕೆ ನಾವು ಸುಮ್ಮನಿರದೆ, ಮತ್ತೆ ಪ್ರಾರ್ಥಿಸಿಕೊಂಡು ದಕ್ಕೆ ನಮ್ಮ ತಾತನಮೇಲೆಯ, ನಮ್ಮ ತಾಯಿಯ ವಿಷಯದಲ್ಲಿಯೂ ಕೆಲವು ನಿಷ್ಟುರವಾದ ಮಾತುಗಳನ್ನು ಬರೆದು, ಇನ್ನು ಮುಂದೆ ನಾನು ಬರ ಹೇಳುವವರೆಗೆ, ಈ ಪ್ರಸ್ತಾಪವಾಗಿ ಬರೆದು ಬರುವ ಪತ್ರಕ್ಕೆ ಉತ್ತರವು ದೊರೆಯದೆಂದೂ, ದುಡುಕಿ ಬಂದರೆ ಆಗಲೇ ತ್ಯಾಗಮಾಡುವೆನೆಂದೂ ಉತ್ತರವನ್ನು ಬರೆದಟ್ಟಿ ದರು. ಹೀಗಾದಬಳಿಕ, ನಮ್ಮ ತಾತನು ನಮ್ಮ ತಾಯಿಗೆ ಬಹುವಿಧವಾಗಿ ಸಮಾಧಾನ ಹೇಳಿದುದಲ್ಲದೆ, ನಮ್ಮನ್ನು ಕಳು ಹುವ ಮಾತನ್ನೇ ಬಿಟ್ಟು ಬಿಟ್ಟರು.