ಪುಟ:ದಕ್ಷಕನ್ಯಾ .djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೫. ದ ಕ ಕ ನ್ಯಾ ರಾತ್ರಿಯ ನನಗೆ ಅಂಗಸಾಧನೆ, ಕೈಗಾರಿಕೆ, ಕುದುರೆ ಸವಾರಿ, ಬೈಸಿ ಕಲ್ ಸವಾರಿ, ಪಿಸ್ತೂಲ್ ಪ್ರಯೋಗ, ಯಂತ್ರಕ್ಕೆ ವಸ್ತು ಸ್ವರೂಪವನ್ನು ಆಕರ್ಷಿಸುವ ರೀತಿ ಇವೇ ಮೊದಲಾದ ಹಲವು ಬಗೆಯ ಕುಶಲ ಕಲೆಗೆ ಳನ್ನೂ, ನಮ್ಮ ಆರನೀತಿಗೆ ಒಳಪಟ್ಟ ಧರ್ಮರಹಸ್ಯ-ದಂಡನೀತಿ ಕ್ರಮಗ ಳನ್ನೂ ಬೋಧಿಸುತ್ತ ಬಂದರು. ನನಗೂ ಅವೆಲ್ಲವನ್ನೂ ಕಲಿಯಬೇಕೆಂಬ ಶ್ರದ್ಧೆಯ, ತಕ್ಕಷ್ಟು ಮೇಧಾಶಕ್ತಿಯೂ ಹೆಚ್ಚುತ್ತಲೇ ಇದ್ದಿತು. ಹೀಗೆ ನನ್ನ ವ್ಯಾಸಂಗ ಅಭ್ಯಾಸಗಳು ನಡೆಯುತ್ತಿರುವಾಗಲೇ ಧರ್ಮಪಾಲರು, ಅಹಿತರ ಕುಹಕವನ್ನು ತಿಳಿದು, ನಮ್ಮ ತಾಯಿಯ ಪ್ರಾಣರಕ್ಷಣೆಗಾಗಿ ಶ್ರೀನಗರದಿಂದ ನಮ್ಮ ತಾತನು ಬರೆದಂತೆ ನಮ್ಮ ತಂದೆಗೆ ಸತೀಪುತ್ರರನ್ನು ದುರ್ಗಾಪುರಕ್ಕೆ ಕಳುಹಿಸಿಕೊಡಬೇಕೆಂಬ ಅಭಿ ಪ್ರಾಯವುಳ್ಳ ಪತ್ರವನ್ನು ಬರೆದು ದೂತನ ಕೈಯಿಂದ ಮುಟ್ಟಿಸಿದರು. ಪತ್ರವು ಸ್ವಲ್ಪ ವ್ಯಾಕುಲವನ್ನುಂಟುಮಾಡುವಂತಹ ಕಾರಣಗಳನ್ನು ಸೂಚಿ ಸಿದ್ದುದರಿಂದ ನಮ್ಮ ತಂದೆಯು, ಪತ್ನಿಯನ್ನು ಪುತ್ರನೊಡನೆ ನಾಳೆಯೇ ಕಳುಹುವೆನೆಂದು ಉತ್ತರವನ್ನು ಕಳಿಸಿದರು. ಇಷ್ಟರಲ್ಲಿ ಅಹಿತರ ಒಳಸಂಚನ್ನು ತಿಳಿದ ಧರ್ಮಪಾಲರು, ಗೊಲ್ಲ ರಪಾಳ್ಯಕ್ಕೆ ಹೋಗುವ ದಾರಿಯಲ್ಲಿ ಗುಡಾರವನ್ನು ಹೊಡೆಯಿಸಿ, ದಳ ವಾಯಿಸಿಂಗರು ನಮ್ಮ ತಾತನ ವೇಷದಿಂದ ಗುಡಾರದ ಬಾಗಿಲಲ್ಲಿ ಸೇವಕ ನೊಡನೆ ಕಾದಿದ್ದು, ದಾರಿಯಲ್ಲಿ ಬರುವ ನಮ್ಮ ತಾಯಿಯನ್ನು ಬಳಕ್ಕೆ ಬರಮಾಡಿಕೊಳ್ಳಬೇಕೆಂದು ಕಟ್ಟು ಮಾಡಿ, ತಾವು ನನ್ನೊಡನೆ ಒಳಗೆ ಮರೆ ಯಾಗಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ನಿರೀಕ್ಷೆಗೆ ತಕ್ಕಂತೆ ನಮ್ಮ ತಾಯಿ ಕುಳಿತಿದ್ದ ಬಂಡಿಯ ಬಂದಿತು, ಬಾಗಲಲ್ಲಿದ್ದವರಿಂದ ತಾಯಿಯು ನನ್ನ ತಮ್ಮನೊಡನೆ ಬಂಡಿಯಿಂದಿಳಿಸಲ್ಪಟ್ಟು ಕರೆಯಿಸಲ್ಪಟ್ಟಳು. ಒಳಗೆ ಬಂದ ಬಳಿಕ, ಧರ್ಮಪಾಲರು ಸಂಗತಿಯನ್ನು ಸಂಗ್ರಹವಾಗಿ ತಿಳಿಯಹೇಳಿ,