ಪುಟ:ದಕ್ಷಕನ್ಯಾ .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܬܘ ಸ ತಿ & ಷಿ ಣಿ ನಮ್ಮ ತಾಯಿಯನ್ನು ಮೋಹನನೊಡನೆ ಶ್ರೀನಗರದಲ್ಲಿರಬೇಕೆಂದು ಸೂಚಿ ಸಿ, ದಳವಾಯಿಸಿಂಗರಿಗೆ ಅವರನ್ನು ಸುಖವಾಗಿ ಕರೆತಂದಿಲ್ಲಿಗೆ ಬಿಡುವಂತೆ ನಿಯಮಿಸಿ, ತಾವೇ ಸ್ವತಂದೆಯಂತೆಯೂ, ನನ್ನನ್ನೇ ಮೋಹನನಂತೆಯೂ ತಮ್ಮ ನಟನೆಯಿಂದ ಭ್ರಾಂತಿ ಹುಟ್ಟಿಸಿ, ನನ್ನೊಡನೆ ಬಂಡಿಯನ್ನು ಹತ್ತಿ ದರು. ಮುಂದೆ ಬೇಕಾದ ಸಾಧನಗಳನ್ನೊಳಗೊಂಡಿದ್ದ ಪೆಟ್ಟಿಗೆಯನ್ನೂ ಬಂಡಿಯಲ್ಲಸಿಕೊಂಡು ಹೊರಟೆವು. ಬಂಡಿಯ ಗೊಲ್ಲರಪಾಳ್ಯದ ಕಳ್ಳರ ಚೌಕಕ್ಕೆ ಬಂದಿತು. ಅಲ್ಲಿಯವರೆಗೂ ಸುನಂದೆಯಂತೆಯೇ ನಟಿಸುತ್ತಿದ್ದ ಧರ್ಮಪಾಲರ ಮಾಟವನ್ನರಿಯದೆ, ಗೋಪಾಲನು ಅಲ್ಲಿ ಬಂಡಿಯನ್ನು ನಿಲ್ಲಿಸಿ, ನಮ್ಮನ್ನು ಬೆದರಿಸಲು ಶಿಳ್ಳೆ ಹಾಕಿದನು. ಕೂಡಲೇ ಮೆಳೆಯಲ್ಲಿ ಅಡಗಿದ್ದ ಕಲ್ಲು ಬರಿದು ಬಂಡಿಯನ್ನು ಮುತ್ತಿದರು. ಈ ಸಂದರ್ಭದ ಲ್ಲಿಯೇ ನಾವು ಜಡಿಯ ಕದಗಳನ್ನು ಭದ್ರವಾಗಿ ಹಾಕಿ, ಒಳಗೆ ಆಯು ಧಗಳಜ್ಯೋ, ಯಂತ್ರಗಳನ್ನೂ , ಬೆಳಕುಗಳನ್ನೂ ಕ್ರಮಪಡಿಸಿಟ್ಟು ಕೊಂ ಡಿದ್ದೆವು. - ಹೀಗೆ ಗುಪ್ತ ಸಂಧಾನದಲ್ಲಿರುವ ನಮ್ಮ ಒಳಗುಟ್ಟನ್ನರಿಯದೆ ಗೋಪಾಲನೇ ಮೊದಲಾದವರೆಲ್ಲರೂ ಕೋಲಾಹಲದಿಂದ ಸುತ್ತಿ ಮುತ್ತಿ ಬಂಡಿಯ ಬಾಗಿಲನ್ನು ತೆರೆದರು, ಒಡನೆಯೇ ನಾವು ತೋರಿಸಿದ ಬೆಳಕಿಗೆ ಎಲ್ಲರೂ ಭ್ರಾಂತರಾಗಿ, ನಿಂತಂತೆಯೇ ಕಣ್ಣುಗಳನ್ನು ಮುಚ್ಚಿಕೊಂಡರು. ಧರ್ಮಪಾಲರು ಕೆಳಗಿಳಿದರು ; ಯಂತ್ರಕ್ಕೆ ಅವರ ಆಗಿನ ಭಾವನಾಸ್ವರೂ ಪಗಳನ್ನು ಆಕರ್ಷಿಸಿಕೊಳ್ಳುತ್ತಾ ಬಂದರು. ನಾನೂ ಅವರ ಅಭಿಪ್ರಾಯ ದಂತೆ ಪಿಸ್ತೂಲನ್ನು ಹಿಡಿದು ಕಳ್ಳರು ಮೇಲೆಬೀಳದಂತೆ ತಡೆಯುತ್ತಿದ್ದನು. ಧರ್ಮಪಾಲರು ಅಷ್ಟರಲ್ಲಿ ತಮ್ಮ ಕೆಲಸವನ್ನು ಮುಗಿಸಿ, ಶಂಖವ ನ್ಯೂದಿದರು. ಮೊದಲೇ ಗೊತ್ತಾಗಿದ್ದಂತೆ ಮರದಮೇಲೆ ಅಡಗಿದ್ದ ಧರ ಪಾಲರ ಕಡೆಯ ಭಟರು ಆ ಕ್ಷಣವೇ ಬಂದು ಸೇರಿ ಎಲ್ಲರನ್ನೂ ಸೆರೆಹಿಡಿ ದರು. ಆಗಲೇ ಪ್ರತಿಷ್ಠೆಯನ್ನು ತೋರಿಸಿದ ಗೋಪಾಲನ ಬಲದತೋಳು