ಪುಟ:ದಕ್ಷಕನ್ಯಾ .djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿನಗಳಲ್ಲಿಯೇ ಹೊರಟು, ಇಲ್ಲಿಗೆ ಬಂದು, ಮಾತೃಮಂದಿರವನ್ನು ಸೇರಿ, ಆತುರದಿಂದ ಕಾರವನ್ನು ನಿರ್ವಹಿಸಲು ಪ್ರಾರಂಭಿಸಿದ್ದಾಯಿತು ಆದರೂ ನಡನಡುವೆ ಗೃಹರಾಜ್ಯ ಸಂಬಂಧವಾದ ತಾಪತ್ರಯಗಳು ಮುಂದಿದ್ದು, ಕೈತಪ್ಪಿರುವ ಮಾತೃಕೆಯನ್ನು ಹುಡುಕಲು, ಈ ವರೆಗೂ ಅವಕಾಶವೇ ದೊರೆಯದಂತಾಯಿತು. ಹೀಗೆ ನನ್ನ ಅಜಾಗರೂಕತೆ ಅಧವಾ ಪ್ರಮಾ ದವಶದಿಂದ ನಂದಿನಿಯ ಉತ್ತರಾರ್ಧವು ಕೈತಪ್ಪಿ, ಅದರಿಂದ ಕಾರವು ಮಧ್ಯದಲ್ಲಿ ನಿಂತು, ಕಷ್ಟ ನಷ್ಟಗಳುಂಟಾದರೂ ಅವೆಲ್ಲವನ್ನೂ ಕ್ಷಮಿಸಿ, ದೇಶಮಾತೃ ಸೇವೆಯಲ್ಲಿ ತಕ್ಕಂತೆ ಉತ್ಸಾಹವುಂಟಾಗುವ ರೀತಿಯಿಂದ ಸಮಾಧಾನವನ್ನು ಕಲ್ಪಿಸಿರುವ, ನಮ್ಮ ಭಾತೃಶ್ರೇಷ್ಠರಾದ ಶ್ರೀಕೃಷ್ಣ ಮುದ್ರಾಲಯಾಧ್ಯಕ್ಷರ ಅನಿಮಿತ್ತಭಾತೃವಾತ್ಸಲ್ಯಕ್ಕಾಗಿ, ಚಿರಕೃತಜ್ಞ ರಾಗಿರುವುದಲ್ಲದೆ, ಅವರ ಶ್ರೇಯೋಭಿವೃದ್ಧಿಯನ್ನು ಕೋರುವುದು ನಮ್ಮ ಮು ಕರ್ತವ್ಯಕ್ಕೆ ಸೇರಿರುವುದು | ಇಷ್ಟಾಗಿ ಇನ್ನೂ ಹೀಗೆಯೇ ಕುಳಿತಿದ್ದರೆ, ದೇಶಬಾಂಧವರಲ್ಲಿ ಮಹಾಪಚಾರ ಪಟ್ಟಂತಾದೀತೆಂದೂ, ಇದಕ್ಕಾಗಿ ದಕ್ಷಕನೆಯನ್ನೇ ಐದ ನೆಯ ಗ್ರಂಧವಾಗಿ ಪ್ರಚಾರಕ್ಕೆ ತಂದು, ಕ್ಷಮಾಪಣೆಯನ್ನು ಕೇಳು ವುದು ಯುಕ್ತವೆಂದೂ ನಿರ್ಧರಿಸಿ, ದಕ್ಷ ಕನ್ವಯನ್ನು ಮುದ್ರಣಕ್ಕೆ ಕಳು ಹಿದುದಾಯಿತು, ಸರ್ವಮಂಗಳೆಯ ಅನುಗ್ರಹದಿಂದ ದಕ್ಷ ಕನೈ ಯು ಬಹು ವಿಸ್ತ್ರತ ಗ್ರಂಧವಾಗಿದ್ದರೂ, ಅತ್ಯಲ್ಪ ಕಾಲಾವಧಿಯಲ್ಲಿಯೇ ಪ್ರಕ ಟವಾಗಬೇಕೆಂಬ ಉತ್ಸಾಹವು, ಮುದ್ರಾಪಕರ ಮನಸ್ಸನ್ನು ಮುಟ್ಟಿದುದ ರಿಂದ, ಶ್ರಮವನ್ನು ಕೂಡ ಗಣಿಸದೆ, ಮುದ್ರಣಕಾರವನ್ನು ತೃಪ್ತಿಕರವಾಗಿ ಯ, ಚಾಗ್ರತೆಯಿಂದಲೂ ನೆರವೇರಿಸಿ ಕೊಟ್ಟದಕ್ಕಾಗಿ, ಮೈಸೂರು ರ್ಕೌ ಮುದ್ರಾಲಯಾಧಿಕಾರಿಗಳು, ನಮ್ಮ ನಿರಂತರದ ಧನ್ಯವಾದಕ್ಕೆ ಪಾತ್ರರಾಗಿರುವರು. ಇನ್ನು ನಮ್ಮ ಪ್ರವಾಸಕಾಲದಲ್ಲಿ, ಪ್ರತ್ಯಕ್ಷವಾಗಿ ನಮ್ಮನ್ನು ಕುರಿತು ಬಹು ವಿಧದಿಂದ- ವಿದ್ಯುಲ್ಲತೆಯ ಮುಂದಿರ ವಿವರವನ್ನು ಹೇಳದೆ