ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭ ದ ಕ ಕ ನ್ಯಾ ನನ್ನ ಕೈ ಕೋವಿಯಿಂದ ಭೇದಿಸಲ್ಪಟ್ಟಿತು. ಅದಿರಲಿ, ಇಷ್ಟೆಲ್ಲಾ ಮುಗಿದು ನಾವು ಜಯವನ್ನು ಹೊಂದಿ, ಶ್ರೀನಗರಕ್ಕೆ ಬಂದು ಸೇರುವುದರೊಳಗಾ ಗಿಯೇ ದಳವಾಯಿಸಿಂಗರ ಸಹಾಯದಿಂದ ನಮ್ಮ ತಾಯಿಯು ಮೋಹನ ನೊಡನೆ ಬಂದು ಸೇರಿದಳು. ಹೀಗೂ ಒಂದು ಪಕ್ಷವಾಗಿರಬಹುದು. ಅಷ್ಟರಲ್ಲಿಯೇ ಗೊಲ್ಲರ ಪಾಳ್ಯಕ್ಕೆ ಹೋಗಿದ್ದ ಧರ ಪಾಲರು, ಯಾರಿಗೂ ತಿಳಿಯದಂತೆಯೇ ನಮ್ಮ ತಂದೆಯು, ಅಹಿತರ ವಂಚನೆಗೆ ಗುರಿಯಾಗಿ ಪ್ರಾಣಾಪಾಯದಲ್ಲಿರುವ ಸಂಗತಿಯನ್ನು ತಿಳಿದುಬಂದು, ನನ್ನಲ್ಲಿ ಹೇಳಿ, ನನ್ನನ್ನೂ ಜತೆಗೊಂಡು, ಮತ್ತೆ ಗೊಲ್ಲರಪಾಳ್ಯಕ್ಕೆ ಹೋದರು. ಅಲ್ಲಿ ಉಪಾಯ-ಚಾಕಚಕ್ಯಗಳಿಂದ ವರ್ತಮಾನವಿಂತಹುದೆಂದು ತಿಳಿಯಲಾಯಿತು. ಬಳಿಕ ಧರ್ಮಪಾಲರು, ನನ್ನನ್ನು ಮುಂದಿನ ಕಾರ್ಯಗಳಲ್ಲಿ ನಿಯಮಿಸಿ, ನಮ್ಮ ಕಿರುತಾಯಿಗೆ ಹಿತ ಸೂಚನಾಪತ್ರವೊಂದನ್ನು ಬರೆದು, ನನ್ನ ಕೈಯಲ್ಲಿತ್ತು ಕಳುಹಿದರು. ಹೀಗೆ ಬಲವತ್ತರವಾದ ಕಾಠ್ಯದಲ್ಲಿ ನಿಯೋಜಿತಳಾದ ನಾನು, ಬೈಸಿ ಕಲ್ ಸಹಾಯದಿಂದ ಶ್ರೀನಗರಕ್ಕೆ ಬಂದು, ಡಾಕ್ಟರರನ್ನು ಗೊಲ್ಲರಪಾಳ್ಯ ಕ್ಕೆ ಹೋಗುವಂತೆ ಹೇಳಿ, ದಳಪತಿಯನ್ನು ಕರೆದು- ನಮ್ಮ ಭಟರುಗಳೆ ಲ್ಲರೂ ಸಾಯುಧರಾಗಿ ಗೊಲ್ಲರಪಾಳ್ಯಕ್ಕೆ ಹೋಗಿ ಸತ್ರದ ಸುತ್ತುಮುತ್ತಲ ಮರಗಳಮೇಲೆ ಕಾದಿದ್ದು ತುತೂರಿಯಶವು ಕೇಳಿಬಂದಕೂಡಲೆ ಎಲ್ಲರೂ ಸತ್ರವನ್ನು ಮುತ್ತಬೇಕಲ್ಲದೆ, ಮುಖಂಡರೊಡನೆ ಕೆಲವರು ಕೈಬೇಡಿ-ಹಗ್ಗ. ಗಳನ್ನೂ ತೆಗೆದುಕೊಂಡು ಸತ್ರದೊಳಕ್ಕೆ ಬರಬೇಕು. ಇದಲ್ಲದೆ ಸ್ವಾರಿಗೆ ಯೋಗ್ಯವಾದ ಮತ್ತು ಇತರ ಸಾಮಗ್ರಿಗಳನ್ನಿಡಬೇಕಾದ ಬಂಡಿಗಳೂ ಹೋಗಿರಬೇಕು.' ಹೀಗೆಂದು ಕಟ್ಟುಮಾಡಿ ಅವರನ್ನು ಕಳುಹಿದ ಬಳಿಕ, ಅಲ್ಲಿ ನಿಲ್ಲದೆ ವಿಷಹರಪುರಕ್ಕೆ ಹೋಗಿ ಸೇರಿದೆನು, ನಾನು ನಮ್ಮ ತಂದೆಯ ಮನೆಯ ಬಳಿಗೆ ಹೋಗುವಷ್ಟರಲ್ಲಿಯೇ ಯಶವಂತನು, ವಾಸುದೇವನೊ ಡನೆ ಕಳ್ಳತನದಿಂದ ಹೊರಬಿದ್ದು ಓಡಿಹೋದುದನ್ನು ಕಂಡು, ಆಗಲೇ