ಪುಟ:ದಕ್ಷಕನ್ಯಾ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮ ಸ ತಿ ಹಿ ತ ಷಿ ಣಿ ನಮ್ಮ ಕಿರುತಾಯಿಯು, ಮಲಗುವ ಮನೆಯಬಳಿಗೆ ಹೋಗಿ ನಿದ್ದೆಯ ಇದ್ದವಳ ಮೇಲೆ ಪತ್ರವನ್ನೆ ಸೆದು, ಕಾದಿದ್ದು, ಬಳಿಕ ಕಾಣಿಸಿಕೊಂಡು ಳಿಗೆ ಧರ್ಮಪಾಲರ ಅಪ್ಪಣೆಯನ್ನೂ, ಮುಂದೆ ಮಾಡಬೇಕಾದ ಕೆಲಸ ವನ್ನೂ ಸೂಚಿಸಿ, ದಳವಾಯಿಸಿಂಗರ ಬಳಿಗೆ ಹೊರಟೆನು. ನಾನು ಅಲ್ಲಿಂದ ಕಾರವನ್ನು ಮುಗಿಯಿಸಿಕೊಂಡು ಬರುವಷ್ಟರಲ್ಲಿ, ನಮ್ಮ ಮಲತಾಯಿ ಹೊರಡಲನುವಾಗಿದ್ದಳು. ಅವಳನ್ನು ಬಂಡಿಯಲ್ಲಿ ಕುಳ್ಳಿರಿಸಿ ಗೊಲ್ಲರಪಾ ಕ್ಯಕ್ಕೆ ಕಳಿಸಿದ ಬಳಿಕ, ಅಮ್ಮಾಯಿಯವರನ್ನೂ ಅವರ ಸಾಮಗ್ರಿಗ ಳೊಡನೆ ಮತ್ತೊಂದು ಬಂಡಿಯ ಮೇಲೇರಿಸಿ, ಮನೆಯಲ್ಲಿದ್ದವರನ್ನು ಹಿಡಿದು, ಮನೆಬಾಗಿಲುಗಳಿಗೆ ಬೀಗಮುದ್ರೆಗಳನ್ನು ಹಾಕಿ, ಕಾವಲಿರಿಸಿದ ಬಳಿಕ ನಾನು, ಅಮ್ಮಾಯಿಯವರನ್ನು ಸುಕನ್ಯಾ ದೇವಿಯ ಬಳಿಯಲ್ಲಿ ಬಿಟ್ಟು, ಅಡಿಗೆಯವರೇ ಮೊದಲಾದವರನ್ನು ದಳವಾಯಿಸಿಂಗರ ವಿಚಾರಣೆ ಗೊಪ್ಪಿಸಿ, ನಾನು ಅದೇ ಕ್ಷಣವೇ ಗೊಲ್ಲರಪಾಳ್ಯಕ್ಕೆ ಹೊರಟೆನು. ಇಷ್ಟನ್ನೂ ಕಾಲನಿಶ್ಚಯದಿಂದ ಮೊದಲೇ ಗೊತ್ತು ಮಾಡಿದ್ದ ಪಟ್ಟಿ ಯ ಪ್ರಕಾರ ಲೇಶಮಾತ್ರವೂ ನ್ಯೂನಾತಿರಿಕ್ತವಾಗದಂತೆ ನಡೆಯಿಸಿ, ನಾನು ಗೊಲ್ಲರಪಾಳ್ಯವನ್ನು ಸೇರುವುದರೊಳಗಾಗಿ ನಮ್ಮ ಮಲತಾಯಿಯು ಧರ ಪಾಲರ ಸಮ್ಮುಖವನ್ನು ಸೇರಿ, ಮುಂದಿನ ಕೆಲಸಗಳೇನೆಂಬುದನ್ನು ಕೇಳಿ ತಿಳಿದು, ಸಿದ್ದವಾಗಿದ್ದಳು, ಅಲ್ಲಿಗೆ ನಾನು ಹೋಗಿ ಸೇರಿದ ಕೂಡಲೇ ಸತ್ರದ ಕಾವಲಿನ ಕರಿಯನನ್ನು ದಾನದಂಡೋಪಾಯಗಳಿಂದ ವಶಪಡಿಸಿ ಕೊಂಡು, ಅವನ ಮುಖದಿಂದ ಗೊಲ್ಲರಪಾಳ್ಯದ ಪಟೇಲ-ಕರಣಿಕರಿಗೆ ಬಲ ವಂತನೇ ಹೇಳಿ ಕಳಿಸಿದಂತೆ ಈ ರಾತ್ರಿಯೊಂದು ವಿಶೇಷವು ನಡೆಯುವಂ ತಿದೆ ; ಕ್ಷಣಮಾತ್ರದಲ್ಲಿ ಬಹು ಸುಲಭರೀತಿಯಿಂದ ನಮ್ಮ ಕಾರಸಿದ್ದಿಯಾ ಗುವಂತಿದೆ. ಹಾಗಾದರೆ, ನಿಮ್ಮ ತಲೆಯಮೇಲೆ ಹೊನ್ನಿನ ಮಳೆಯನ್ನೇ ಸುರಿಸಿಬಿಡುತ್ತೇನೆ. ಇದಕ್ಕಾಗಿ ನೀವು ಈ ರಾತ್ರಿಯೇ-ಈಗಲೇ ನಮ್ಮವ ರೆಲ್ಲರನ್ನೂ ಒಟ್ಟುಗೂಡಿಸಿ ಕರೆತಂದು ಸತ್ರದ ಬಳಿಯಲ್ಲಿರಬೇಕಲ್ಲದೆ,