ಪುಟ:ದಕ್ಷಕನ್ಯಾ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೨೦೯ ಆ ಕೊಳಲೂದಿದ ಕೂಡಲೇ ಎಲ್ಲರೂ ಸತ್ರದೊಳಗೆ ನುಗ್ಗ ಬೇಕು.' ಹೀಗೆ ಹೇಳಿಕಳಿಸಿ ಅವರಿಂದ ಹಾಗೆಯೇ ದಂಗೆಕೋರರನ್ನು ಸೇರಿಸುವಂತೆ ಮಾಡಿಸಿ ಬಂದೆವು. ಇಷ್ಟರಲ್ಲಿ ನಮ್ಮ ತಂದೆಯ ವಧಕಾರಕ್ಕೆಂದು ಇವರೆಲ್ಲರೂ ಸಿದ್ಧ ರಾಗಿ ಸತ್ರದಲ್ಲಿ ಸೇರಿದ್ದರು. ಮೊದಲು, ನಮ್ಮ ತಂದೆಗೆ ವಾಸುದೇವಯಶವಂತರು ಕಾಣಿಸಿಕೊಂಡು, ಆಪ್ತರಂತೆ ನಟಿಸಿ, ಆಹಾರವನ್ನು ತರಲು ಬೇರೆಕಡೆಗೆ ಹೋದರು. ಅದೇ ವೇಳೆಯಲ್ಲಿಯೇ ನಮ್ಮ ಬಲತಾಯಿಯು ಕಿರುಮನೆಯೊಳಹೊಕ್ಕು, ಪತಿಯ ಮಂಚದ ಕೆಳಗೆ ಅಡಗಿದ್ದಳು. ವಾಸು ದೇವಾದಿಗಳು ಮತ್ತೆ ಬಂದು, ವಿಷಪೂರ್ಣ ವಿಶ್ರವಾದ ಹಾಲನ್ನು ನಮ್ಮ ತಂದೆಗೆ ಕೊಟ್ಟು, ಕುಡಿಯ ಹೇಳಿದರು. ಆದರೆ, ನಮ್ಮ ಮಲತಾಯಿಯು ಆ ಹಾಲು ಹೊಟ್ಟೆಗೆ ಹೋಗದೆ ಕೆಳಗೆ ಸುರಿದುಹೋಗುವಂತೆ ಮಾಡಿದಳು. ನಾವು ಇದೆಲ್ಲವನ್ನೂ ಕಿಟಕಿಯ ರಂಧ್ರದಲ್ಲಿ ಜಾಗರೂಕತೆಯಿಂದ ನೋಡುತ್ತ, ನಮ್ಮ ತಂದೆಯು ಚೇತರಿಸಿಕೊಳ್ಳುವಂತೆ ಆತನ ಮುಖಕ್ಕೆ ಗೋಡೆಯ ರಂಧ್ಯಮುಖದಿಂದ ಡಾಕ್ಟರ ಕೈಯಲ್ಲಿ ಅತ್ತರು-ಪನ್ನೀರು ಮೊದಲಾದ ರಸದ್ರವ್ಯಗಳನ್ನು ಚೀರಿಸುತ್ತಿದ್ದೆವು. ಇದನ್ನರಿಯದೆ ಬಲವಂ ತಾದಿಗಳು ನಮ್ಮ ತಂದೆಯನ್ನು ಚಿತ್ರವಧೆಗೆ ಗುರಿಮಾಡ ತೊಡಗಿದುದೂ, ಅದಕ್ಕೆ ನಿಮ್ಮ ಕಾರಿಯಾಗಿ ಬಂದ ಗಂಗೆಯನ್ನು ಕೊಲ್ಲುವುದಕ್ಕು ದ್ಯುಕ್ತ ರಾದುದೂ, ಇನ್ನೂ ಮುಂದೆ ನಡೆದ ವಿಚಾರಗಳೂ ಆಯಾ ಕಾಲದಲ್ಲಿ ತೆಗೆದ ಚಿತ್ರದಿಂದಲೂ, ಯಂತ್ರಮುಖದಿಂದಲೂ ತಿಳಿಯಲ್ಪಡಬಹುದಲ್ಲದೆ, ಇಲ್ಲಿ ಹೇಳಲ್ಪಡುವುದು ಸಾಧ್ಯವಲ್ಲ. - ಕೃತಾಂತನ ವಾಡ್ಯೂಲವನ್ನು ಸಾವಧಾನದಿಂದ ಕೇಳುತ್ತಿದ್ದ ದಂಡಾಧಿಕಾರಿಯ ವದನದಿಂದ- ಭಲೆ ! ದಕ್ಷ ಕನೈ ! ಅಹುದು ; ನೀನೇ ದಕ್ಷಳಾದ ಕನ್ಯ.' ಎಂಬ ಉದ್ದಾರವು ಹೊರಟಿತು. ಅದೇ ಉದ್ದಾರವೇ ಮತ್ತೆ ಮತ್ತೆಯ ನ್ಯಾಯಸ್ಥಾನದಲ್ಲಿದ್ದವರ ಬಾಯಿಂದ ಹೊರಡುವಂತಾ 14