ಪುಟ:ದಕ್ಷಕನ್ಯಾ .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ್ಷ ಕ ನ್ಯಾ ೨೧೧ ಇತರ ವಿಕಾರಚಿಹ್ನೆಗಳಿಗೆ ಅವಕಾಶವೇ ಕಾಣುತ್ತಿಲ್ಲ. ಇದಲ್ಲವೇ ಧೈ ರ್ಯಕ್ಕೆ ಅಕ್ಷಣವು ?

  • ದಕ್ಷ ಕನ್ಯ' ಎಂದರೆ ಮತ್ತಾರೂ ಅಲ್ಲ, ಕೃತಾಂತವೇಷದಲ್ಲಿದ್ದು, ನಿಜರೂಪದಿಂದ ಪ್ರತ್ಯಕ್ಷಳಾಗಿರುವ ಸುನಂದಾನಂದನೆಯಾದ ವಿಂದೆ !

ವಿಂದೆಯು ರಾಧಾನಾಧರಾವಬಹದೂರನ ಸಮಕ್ಷದಲ್ಲಿ ತಲೆಬಾಗಿ ನಿಂತವಳು, ಒಮ್ಮೆ ಧರ್ಮಪಾಲನ ಮುಖವನ್ನು ನೋಡಿದಳು. ಹಿಂದೆ ಎಷ್ಟೋಬಾರಿ, ಅದೇ ಮುಖವನ್ನು ನೋಡಿದ್ದರೂ, ಬಹುಕಾಲ ಆತನ ಸಹಚರೈಯಲ್ಲಿದ್ದರೂ ತೋರಬರದಿದ್ದ ಲಜ್ಞಾಭಾವವು, ಇಂದು, ಒಮ್ಮೆ ನೋಡಿದಮಾತ್ರದಿಂದ ಹಠಾತ್ ಉಂಟಾಯಿತು. ಹೀಗಾಗಲು ಕಾರಣ ವೇನೆಂಬುದು ಅವಳ ಮನಸ್ಸಿಗೆ ಧಟ್ಟನೆ ಹೊಳೆಯಲಿಲ್ಲ. ಆದರೂ, ಸೂಕ್ಷ್ಯ ಬುದ್ದಿಯ ಬಾಲಿಕೆಯು ಇದೆಲ್ಲಕ್ಕೂ, ವೇಷ-ಭಾಷಾವರ್ತನೆಗಳೇ ಕಾರಣ ವೆಂಬುದನ್ನು ತಿಳಿಯದೆ ಬಿಡಲಿಲ್ಲ. ಚಾಣಾಕ್ಷನಾದ ಧರ್ಮಪಾಲನು, ಲಜ್ಞಾವನತಮುಖಿಯಾದ ವಿಂ ದೆಗೆ ಅಧಿಕಶ್ರಮವಾಗದಿರಲೆಂದು, ವ್ಯಾಜಾಂತರದಿಂದ ದಳವಾಯಿಸಿಂಗನ ಕಡೆಗೆ ತಿರುಗಿ ಕುಳಿತನು. ಅದು ಹೇಗೂ ಇರಲಿ. ರಾಧಾನಾಧ-ತಾರಾಪತಿರಾಯನಕಡೆಗೆ ತಿರುಗಿ-ಜಾನ್ಮಾರ್ ಲೋ ಕಬಂಧುಗಳೇ ! ಈ ಸುಕುಮಾರಿಯು ನಿಮ್ಮ ಪುತ್ರಿಯೇ ನಿಜ ವೆಂದು ನಿರ್ಧರವಾಗಿ ಹೇಳಬಲ್ಲಿರೋ ?' ಜಮಾನ್ದಾರ್‌- ಸ್ವಾಮಿ ! ಮರುವರ್ಷದ ಮಗುವಾಗಿದ್ದಾಗ ನೋ ಡಿದ್ದ ನೆಪ್ಪಿನಮೇಲೆ, ಈಗ ಹೀಗೆಯೇ ಸರಿಯೆಂದು ನಿರ್ಧರಿಸುವ ಶಕ್ತಿಯಿಲ್ಲದಿದ್ದರೂ, ಅವಳಲ್ಲಿ ತೋರಿಬರುತ್ತಿದ್ದ ಲಕ್ಷಣಗಳೆಲ್ಲವೂ ಇವಳಲ್ಲಿ ಮತ್ತೂ ಪುಷ್ಟಿ ಹೊಂದಿರುವುದೆಂದುಮಾತ್ರ ಹೇಳಬಲ್ಲೆನು. ದಳವಾಯಿ-ಹಾಗಾದರೆ, ಈಕೆಯ ಪರಿಚಯವು ದೃಢಪಡುವಂತೆ ಮಾ ಡುವುದು ಸುನಂದಾದೇವಿಯನ್ನೇ ಸೇರಿರುವುದು. ಜಾ