ದ ಕ ಕ ನ್ಯಾ ೨೧೩ ಉರ್ಸ್ಮಾ-ನಾವು ಜವಿಾನ್ಯಾರರ ಅಪ್ಪಣೆ ಹೊಂದಿ, ವಿಷಕಂಠನನ್ನು ಕಾವಲಿಗಾಗಿ ನಿಲ್ಲಿಸಿ, ಊಟಮಾಡಿಬರಲು ಮನೆಗೆ ಹೋದೆವು. ಮತ್ತೆ ಬರುವಾಗ ದಾರಿಯ ಬಳಿಯಲ್ಲಿದ್ದ ಹಳ್ಳದಲ್ಲಿ ಕಳ್ಳರು ಅಡಗಿದ್ದುದನ್ನು ನಾವು ತಿಳಿಯದೆ, ವಿನೋದವಾಗಿ ಹಾಡುತ್ತಾ ಬರುತ್ತಿದ್ದೆವು. ಹೀಗೆ ಬರುತ್ತಿದ್ದ ನಮಗೆ ತಿಳಿಯದಂತೆ ಹಿಂದಿ ನಿಂದ ಬಂದ ಕಳ್ಳರು, ಒಟ್ಟಿಗೆ ನಮ್ಮ ಮೇಲೆ ಕಂಬಳಿಗಳನ್ನೆಸೆದು ಬಲವಾಗಿ ಕಟ್ಟಿ, ಒಬ್ಬೊಬ್ಬರನ್ನು ಇಬ್ಬಬ್ಬರಂತೆ ಹೊತ್ತು ಕೊಂಡು ಹೋಗಿ, ಗೊಲ್ಲರಪಾಳ್ಯದ ಗುಡ್ಡದಲ್ಲಿದ್ದ-ಇಲ್ಲಿ ನಿಂತಿರುವ ಮುದು ಕನ ಮುಂದೆ ಕೆಡಹಿದರು. ಇವನೂ, ಇವನ ಬಳಿಯಲ್ಲಿರುವವ (ಸುಸಂಧ) ನೂ ನಮ್ಮನ್ನು ಸಾಯುವಂತೆ ಹೊಡೆದು, ಮತ್ತೆ ನಮ್ಮ ಕೈಕಾಲುಗಳಿಗೆ ಬೇಡಿಗಳನ್ನು ತೊಡಿಸಿ, ಒಂದು ಕತ್ತಲೆ ಕೋಣೆಯಲ್ಲಿ ಕೂಡಿದರು. ಅಲ್ಲಿ ನಾವು ಬೆಳಕು-ಗಾಳಿ-ಆಹಾರ ಗಳಿಗೆ ಮಾರ್ಗವಿಲ್ಲದೆ, ಹಗಲೂ-ರಾತ್ರಿಯ ಅಳುತ್ಯ, ಇವರು ದಿನಕ್ಕೊಂದುಬಾರಿ ತಂದುಕೊಡುತ್ತಿದ್ದ ಒಣರೊಟ್ಟಿಗಳಿಂದ ಜೀವ ವನ್ನುಳಿಸಿಕೊಂಡಿದ್ದೆವು. .ರಾಧಾನಾಧ-ನಿಮ್ಮನ್ನು ಬಿಡಿಸಿದವರಾರು? ನೀವೇ ಕದ್ದು ಬಂದಿರೋ, ಹೇಗೆ ? ಉರ್ಸ್ಮಾ-ನಾವು ಕದ್ದು ಬರಲಿಲ್ಲ, ಧರ್ಮಪಾಲರ ಕಡೆಯ ವೀರಭಟ ನೊಬ್ಬನು ಬಂದು, ನಮ್ಮನ್ನು ಬಿಡುಗಡೆಮಾಡಿ ಕರೆದೊಯ್ದನು. ಅದು ಮೊದಲು, ನಾವು ಈವರೆಗೂ ಧರ್ಮಪಾಲರ ಮನೆಯಲ್ಲಿ ಗದಲ್ಲಿ ನಿರತರಾಗಿದ್ದೆವು. ಇಷ್ಟಲ್ಲದೆ ನಮಗಿನ್ನಾವುದೂ ತಿಳಿಯದು. ರಾಧಾನಾಧ-ವಿಷಕಂಠನನ್ನು ಕುರಿತು-' ವಿಷಕಂಠ ! ಮೊದಲನೆಯ ಕಳು ವಿನ ವಿಷಯದಲ್ಲಿ ನೀನು ತಿಳಿದಿರುವುದೇನು ? ನಿಜವಾಗಿಹೇಳು.' ವಿಷಕಂಠ-ನಾನು ಜಮಾನ್ದಾರರ ಅಪ್ಪಣೆಯಂತೆ ಮುಸರ್ಲ್ಮಾ ಪ್ರಹರಿ ಗಳನ್ನು ಊಟಕ್ಕೆ ಕಳಿಸಿ, ನಾನೇ ಕಾವಲಿಗಾಗಿ ಕುಳಿತಿದ್ದೆನು.
ಪುಟ:ದಕ್ಷಕನ್ಯಾ .djvu/೨೨೬
ಗೋಚರ