ಪುಟ:ದಕ್ಷಕನ್ಯಾ .djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧8 ದ ಕ ಕ ನ್ಯಾ ರಾಧಾನಾಥ-ಬಳಿಯಲ್ಲಿದ್ದ ಪೆಟ್ಟಿಗೆಯಿಂದ ಸೀಸೆಯೊಂದನ್ನು ಹೊರ ತೆಗೆದು ತೋರಿಸಿ-' ಇದೇ ಸೀಸೆಯೋ-ನಿನ್ನಲ್ಲಿದ್ದುದು ?? ವಿಷಕಂಠ-ಹಾಗೆಯೇ ಕಾಣುತ್ತದೆ. ರಾಧಾನಾಧ- ಇರಲಿ ; ಇದನ್ನು ನೀನು ಎಲ್ಲಿಂದ ತಂದೆ ? ಯಾವ ಕಾರ್ ಕ್ಕೆ ಉಪಯೋಗಿಸಬೇಕೆಂದಿದ್ದೆ ? ವಿಷಕಂಠ--ಮಹಾಸ್ವಾಮಿ ! ನಾನು ಎಲ್ಲಿಂದಲೂ ತಂದವನೂ ಅಲ್ಲ, ಅದು ನನಗೆ ಯಾವುದಕ್ಕೂ ಬೇಕಾಗಿಯೂ ಇರಲಿಲ್ಲ, ನಾನು ನಿಜವಾಗಿಯೂ ನಿರಪರಾಧಿ. ರಾಧಾನಾಧ - ಹಾಗಿದ್ದರೆ, ಇದು ನಿನ್ನಲ್ಲಿದ್ದ ಬಗೆಯೇನು ? ತಂದಿರಿಸಿದವ ರಾರು ? ನಿನಗೆ ತಿಳಿಯದೆ ನಿನ್ನ ಅಂಗಿಯೊಳಗೆ ಸೇರುವುದು ಹೇಗೆ ? ವಿಷಕಂಠ-ನಾನು ರಾತ್ರಿ, ಬೀದಿಯ ಪಡಸಾಲೆಯ ಮೇಲೆ ಮಲಗಿದ್ದೆನು. ಮತ್ತೆ ಕಣ್ಣೆರೆದು ನೋಡುವಾಗ ರಸ್ತೆಯ ಬಳಿಯಲ್ಲಿ, ಚರಂಡಿ ಯೊಳಗೆ ಬಿದ್ದಿದ್ದೆನು. ಹೀಗಾಗಲು ಕಾರಣವೇನೆಂಬುದನ್ನು ತಿಳೆ ಯದೆ ಭಯದಿಂದ ಎದ್ದು ಬಂದು, ಬೀದಿಯ ಬಾಗಿಲಬಳಿಗೆ ಬಂದು, ಕುಳಿತೆನು. ಯಮುನಾಬಾಯಿಯವರೂ ಬಂದು ಸೇರಿದರು. ಅಷ್ಟರಲ್ಲಿಯೇ ಮನೆಯವರೆಲ್ಲರೊಡನೆ ಜಮೀನ್ದಾರರೇ ಬಂದು ನಮ್ಮನ್ನು ವಿಚಾರಿಸಿದರು. ನಾವು ಯಾವುದನ್ನೂ ತಿಳಿಯೆವೆಂದು ಹೇಳಿದರೂ, ಯಶವಂತ ಮತ್ತು ಕಿರಿಯ ಯಜಮಾನಿಯವರ ಹೇಳಿಕೆಯ ಮೇಲೆ- ನಮ್ಮಿಬ್ಬರನ್ನು ತಪ್ಪಿತಸ್ಥರೆಂದೇ ನಿರ್ಧರಿಸಿ, ಪೊಲೀಸರ ವಶಪಡಿಸಿದರು, ಆದರೆ ಸ್ವಲ್ಪ ದಿನಗಳಲ್ಲಿಯೇ ಧರ್ಮಪಾ ಅರು ನನ್ನಲ್ಲಿ ಕೃಪೆಮಾಡಿ, ನನ್ನ ನಡತೆಯ ಮೇಲೆ ಹೊಣೆ ಕೊಟ್ಟು, ನನ್ನನ್ನು ಬಿಡಿಸಿ ಕರೆದುಕೊಂಡುಹೋಗಿ, ಈವರೆಗೂ ಪೋಷಿಸುತ್ತಿ ದ್ದರು. ಇಷ್ಟಲ್ಲದೆ ನನಗಿನ್ನಾವುದೂ ಗೊತ್ತಿಲ್ಲ. ಇಷ್ಟಕ್ಕೆ ಪ್ರಹರಿಗಳ ಸಾಕ್ಷ್ಯವು ಮುಗಿಯಿತು. =="asanne