ಪುಟ:ದಕ್ಷಕನ್ಯಾ .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ್ಷ ಕ ನ್ಯಾ ೨೧೭ ಮತ್ತು ನಮಗೂ ಉಂಟಾದ ಶೋಕವನ್ನು ಇಷ್ಟೇ ಸರಿಯೆಂದು ಹೇಳಲಾಗುವಂತಿಲ್ಲ, ಅದೂ ಸಾಲದೆಂದು, ಪವಿಯೋಗಸಂತ ಪ್ರರಾಗಿದ್ದ ಜಮೀನ್ದಾರರಿಗೆ ಒಂದು ತಿಂಗಳೊಳಗಾಗಿ-' ಮಾತೃ ವಿಯೋಗವನ್ನು ತಡೆಯದೆ ಪುತ್ರನೂ ಪರಲೋಕಕ್ಕೆ ತೆರಳಿದ ' ನೆಂಬ ದುಃಖವಾರ್ತೆಯ ಬಂದುಸೇರಿತು. ಆಗಲಂತೂ ಜಮೀಾ ಸ್ಟಾರರ ಮನಸ್ಸಿನ ಮತ್ತು ಮನೆಯ ಸ್ಥಿತಿಗಳನ್ನು ನೋಡಿ ಸಹಿ ಸುವಂತಿರಲಿಲ್ಲ. ಹೇಗಾದರೂ ಅನುಭವವನ್ನು ಮೀರಲಾಗದಷ್ಟೆ. ಜಾನ್ದಾರರು ಸುನಂದಾವಿಯೋಗವಾರ್ತೆಯನ್ನು ಕೇಳಿದುದು ಮೊದಲು, ವಿನೋದ-ಉತ್ಸಾಹಗಳನ್ನೇ ತೊರೆದುಬಿಟ್ಟರು. ಆದ ರೂ ಮಾತೃವಾಕ್ಯದ ನಿರ್ಬಂಧದ ಮೇಲೆಯ, ಯಶವಂತನೆ ಹೇಳಿಕೆಯ ಮೇಲೆಯೂ ಅನಿರ್ವಾಹಸಕ್ಷ ದಿಂದ ಗಂಗಾಬಾಯಿ ಯನ್ನು ಮದುವೆಯಾದರು. ಇದಾಗಿ ಮೂರು-ನಾಲ್ಕು ವರ್ಷಗಳು ಕಳೆದ ಬಳಿಕ, ತಾಯಿ ಯ ಮಾತಿನಂತೆ ನಿಂದೆಯನ್ನಾದರೂ ಕಳುಹಬೇಕೆಂದು ಇವರು ದುರ್ಗಾಪುರಕ್ಕೆ ಕಾಗದವನ್ನು ಬರೆದಿದ್ದರು. ಅದಕ್ಕೆ ಉತ್ತರ ವಾಗಿ, ಎಂದೆಯ ವಿಚಾರವಾಗಿ ನೀವು ಕೇಳತಕ್ಕುದಿಲ್ಲವೆಂದೂ, ಅವ ಳಿಗೆ ಸರಿಯಾದ ಶಿಕ್ಷಣವನ್ನು ಕೊಟ್ಟು, ಮುಂದಕ್ಕೆ ತರುವ ಕೆಲಸ ವು ತಮಗೆ ಸೇರಿರುವುದೆಂದೂ ಬರೆದ ಪತ್ರವು, ಜಮೀನ್ದಾರರ ಕೈಸೇ ರಿತು, ಅದರ ಮೇಲೆ ಅವರು ಇನ್ನೇನನ್ನೂ ಹೇಳಲಾರದೆ ಸುಮ್ಮ ನಾದರು, ಮಗನೊಡನೆ ಸುನಂದಾದೇವಿಯು ಜೀವಿಸಿರುವ ಸಂಗ ತಿಯೇ ನಮಗಾರಿಗೂ ತಿಳಿದಿರಲಿಲ್ಲ. ಆದರೆ ಈಚೆಗೆ, ಈಗ ಹತ್ತು ತಿಂಗಳ ಕೆಳಗೆ, ಎಂದರೆ- ಮೊದಲ ನೆಯ ಕಳುವಾದ ದಿನವೇ ಜಮಾನ್ದಾರರ ಬಳಿಗೆ, ಈ ಉದ್ದೇಶದಿಂ ದಲೇ ಬಂದ ಶ್ರೀದತ್ತ ಕುಮಾರರಿಂದ ನನಗೆ ಸುನಂದಾದೇವಿಯ ಜೀವಿ