ಪುಟ:ದಕ್ಷಕನ್ಯಾ .djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ೮ ಸ ತಿ ಹಿ ಷಿ ಣಿ ತವೃತ್ತಾಂತವು ತಿಳಿದುಬಂದಿತು. ಅದನ್ನು ಕೇಳಿ ಸಂತೋಷದಿಂದ ನಾನು, ಮನೆಗೆ ಬರುವಷ್ಟರಲ್ಲಿಯೇ ಸಾಯಂಕಾಲವಾಗಿದ್ದುದರಿಂದ ಬಿಸಿಲ್ಯಾಳಿಗೆಯನ್ನೇರಿ ನೋಡಿದೆನು, ನಾನು ಹೋಗುವುದರೊ ಆಗಾಗಿ ಅಲ್ಲಿಂದ ಆಗಲೇ ಹಿಂತಿರುಗಿದ ಗಂಗಾಬಾಯಿಯನ್ನೂ, ಬೀದಿಯಲ್ಲಿ ನೆಲದಮೇಲೆ ನಿಂತು, ವಿಕಾರಚೇಷ್ಟೆಗಳಿಂದ ನೋಡು ತಿದ್ದ ಈ ವಾಸುದೇವರಾಯನನ್ನೂ ಕಂಡು, ನನಗೆ ಸಂಶಯವಾ ಯಿತು. ಪರೀಕ್ಷಿಸಬೇಕೆಂದು ಕೆಳಗಿಳಿದುಬರುವಷ್ಟರಲ್ಲಿ ಗೋವಾ ಲನೂ ಅಲ್ಲಿಗೆ ಬಂದಿದ್ದನು. ಅವನ ನಡೆ-ನುಡಿಗಳು ನನ್ನ ಸಂಶ ಯವನ್ನು ಮತ್ತೂ ಹೆಚ್ಚಿಸಿದುದರಿಂದ, ಅವನಿಗೆ ಸುಳ್ಳು ಹೇಳಿ, ಮೋಸಮಾಡಿ, ಅವನ ಜಾಡೆಯನ್ನು ಕಂಡುಹಿಡಿಯಲು ಪ್ರಯತ್ನಿ ಸಿದೆನು ಆ ನನ್ನ ಪ್ರಯತ್ನದಿಂದ ಯಶವಂತ-ಗೋಪಾಲರ ಅಭಿ ಸಂಧಾನವು, ಬಹುದಿನಗಳಿಂದ ನಡೆದುಬರುತ್ತಿರುವುದೆಂದು ತಿಳಿಯ ಲಾಯಿತು; ಗಂಗೆಯ ಮನೋಗತವೆಂತಹುದೆಂಬುದನ್ನು ಪರೀ ಕ್ಷಿಸಿದ್ದರಲ್ಲಿ ಸಕಾರಣವಾದ ಸಮಾಧಾನಗಳು ದೊರೆಯದೆ ಸಂದೇಹಾಂಶಗಳೇ ಕಂಡುಬಂದುವು. ಬಳಿಕ ನಾನು ಜಮೀನ್ದಾರರ ತಾಯಿಯನ್ನು ಕಾಲೋಚಿತವಾಗಿ, ಹಿತಸೂಚನೆಗಳಿಂದ ಎಚ್ಚರಿಸಿ, ಆವರೆಗೆ ನಾನು ಕೇಳಿ-ನೋಡಿ-ತಿಳಿದುದೆಲ್ಲವನ್ನೂ ಶ್ರೀದತ್ತ ಕುಮಾ ರರಿಗೆ ತಿಳಿಸಿದೆನು. ಮತ್ತೆ ಅವರ ಸೂಚನೆಯಂತೆ ವೇಷಾಂತರ ದಿಂದ ಬಂದು, ಜಮೀನ್ದಾರರ ಮನೆಯ ಪ್ರಾಕಾರದ ಬಳಿಯಲ್ಲಿ ಮರದಹಿಂದೆ ಮರೆಯಾಗಿ ಮಲಗಿದ್ದೆನು. ನನ್ನ ಈ ಸಂಚನ್ನು ತಿಳಿಯದೆ ಗೋಪಾಲಸೊ, ವಾಸುದೇವನ ಕಡೆಯವನಾಗಿ ಮತ್ತೊಬ್ಬನೂ ಮುಸಲ್ಮಾನರಂತೆ ವೇಷವನ್ನು ಧರಿಸಿ, ಬಾಗಿಲಮೇಲೇರಿ ಕೆಳಗೆ ದುಮ್ಮಿಕ್ಕಿ, ಮನೆಯ ಬಾಗಿಲ ಬಳಿಗೆ ಹೋದರು. ಅವರು ಅಲ್ಲಿಗೆ ಹೋಗುವವರೆಗೂ ನೋಡು