ಪುಟ:ದಕ್ಷಕನ್ಯಾ .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕ್ಷ ಕ ನ್ಯಾ ೨೧೯ ತಿದ್ದ ನಾನು, ಆಗಲೇ ಅವರಿಗೆ ತಿಳಿಯದಂತೆ, ಪ್ರಾಕಾರದ ಗೊಡೆ ಯನ್ನೇರಿ ಒಳಹೊಕ್ಕು, ಅಲ್ಲಿಯೇ ನಿಂತು ನೋಡುತ್ತಿದ್ದನು. ಯಶ ವಂತನು ಬಾಗಿಲನ್ನು ತೆರೆದು ಅವರನ್ನು ಒಳಗೆ ಸೇರಿಸಿ, ಮತ್ತೆ ಬಾಗಿಲನ್ನು ಹಾಕಿದನು. ಇಷ್ಟರಲ್ಲಿ ನಾನು ಹಿತ್ತಿಲಬಾಗಿಲಬಳಿ ಯಲ್ಲಿ ಮರೆಯಾಗಿದ್ದೆನು, ಸುಮಾರು ಒಂದು ಘಂಟೆಯೊಳಗಾ ಗಿಯೇ ಗೋಪಾಲನೂ ಮತ್ತೊಬ್ಬನೂ ದೊಡ್ಡ ದೊಡ್ಡ ಹೊರೆಗಳನ್ನು ಹೊತ್ತು ಹಿತ್ತಿಲ ಗೋಡೆಯನ್ನೇರಿ, ಕೆಳಗೆ ಹಾರಿ ಓಡಿಹೋದರು. ಇದೆಲ್ಲವನ್ನೂ ನೋಡುತ್ತಿದ್ದ ನಾನು ಕುಮಾರರಲ್ಲಿಗೆ ಹೋಗಿ ತಿಳಿಸಿ, ಅವರ ಸೂಚನೆಯಂತೆ ಆರಾತ್ರಿ ಮನೆಗೆ ಬಾರದೆಯೇ ಉಳಿದಿದ್ದೆನು. ರಾಧಾನಾಧ-ಸರಿಯೆ, ನೀವು ಅಪರಾಧಿಯಾಗಿ ಹಿಡಿಯಲ್ಪಟ್ಟು ದೇಕೆ ? ಯಮುನೆ-ಮನೆಯವರ ದ್ವೇಷಸಾಧನೆಯೊಂದೇ ಕಾರಣವಲ್ಲದೆ, ಬೇರೆ - ಯಾವುದೂ ನನಗೆ ತಿಳಿಯದು. ರಾಧಾನಾಧ-ಯಾವ ಆಧಾರದಿಂದ ಈ ಮಾತನ್ನು ಹೇಳುವಿರಿ ? ಯಮುನೆ-ಮನೆಯಲ್ಲಿ ನಾನು ಜಾನ್ಮಾರರ ಮತ್ತು ಅವರ ತಾಯಿಯ ವಿಚಾರದಲ್ಲಿ ದೃಢವಿಶ್ವಾಸದಿಂದ ವರ್ತಿಸುತ್ತಿದ್ದುದೂ, ಅವರು ನನ್ನನ್ನು ಸಹಜವಾತ್ಸಲ್ಯದಿಂದ ಪೋಷಿಸುತ್ತಿದ್ದುದೂ, ಮನೆಯಲ್ಲಿ ನಡೆಯುತ್ತಿದ್ದ ಕುಹುಕಗಳನ್ನು ಹೊರಗೆಡಹಲು ನಾನು ಪ್ರಯತ್ನ ಪಟ್ಟು ಸ್ವಾತಂತ್ರ್ಯದಿಂದ ವರ್ತಿಸಿದುದೂ, ಗಂಗಾಬಾಯಿಗೂ ಮತ್ತೂ ಯಶವಂತಾದಿಗಳಿಗೂ ಅಸೂಯೆಗೆ ಕಾರಣವಾಗಿತ್ತು, ಇದನ್ನು ಬಾಯ್ದೆರೆದು ಹೇಳುವುದಕ್ಕಾಗಲಾರದಿದ್ದುದರಿಂದ, ಮೊ ದಲನೆಯಸಾರಿ ನಡೆದ ಕಳುವಿಗೆ ನಾನೇ ಮೂಲವೆಂಬ ಆರೋಪ ವುಂಟಾಯಿತು, ಆದರೆ ಯಜಮಾನರು ನಂಬದೆ ನನಗೆ ಮತ್ತೂ ಹೆಚ್ಚಿನ ಸ್ವಾತಂತ್ರವನ್ನೇ ಕೊಟ್ಟರು. ಇದರಿಂದ ಅಸೂಯೆಗೆ ಕಸಿಕಟ್ಟಿದಂತಾಯಿತು.