ಪುಟ:ದಕ್ಷಕನ್ಯಾ .djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ہوو ಸ ತಿ ಹಿ ತ ಷಿ ಣಿ ಸುನಂದಾದೇವಿಯು ಬಂದ ಬಳಿಕಂತೂ, ಮನೆಯಲ್ಲಿ ಪ್ರತಿ ಯೊಂದು ಕಾರ್ಯವೂ ನನ್ನ ವಿಚಾರಣೆಗೇ ಸೇರುತ್ತಿದ್ದಿತು. ಆ ಗಲೇ ನಾನು ಅಡಿಗೆ ಪರಿಚಾರಕರಲ್ಲಿ ಒಬ್ಬೊಬ್ಬರ ಹುಳುಕನ್ನೂ ಕಂಡುಹಿಡಿದು ಯಜಮಾನರಿಗೆ ಒಪ್ಪಿಸುತ್ತಿದ್ದುದರಿಂದ, ಅವರಲ್ಲಿ ಒಬ್ಬೊಬ್ಬರಾಗಿ ಓಡಿಸಲ್ಪಟ್ಟರು. ಹೀಗಿರುವಾಗಲೇ ಸುನಂದಾದೇವಿಯ ತಂದೆಯಿಂದ ಬಂದ ಕಾಗದದಲ್ಲಿ ಅವರ ತಾಯಿ ಮೃತ್ಯು ಶಖ್ಯೆಯಲ್ಲಿರುವಂತೆ ತಿಳಿದು, ತಾಯಿಯನ್ನು ನೋಡುವ ಉದ್ದಿಶ್ಯವಾಗಿ ಮೋಹನನೊಡನೆ ಸುನಂ ದಾದೇವಿಯು ದುರ್ಗಾಪುರಕ್ಕೆ ಪ್ರಯಾಣಮಾಡಿದರು. ಅವರು ಹೊರಟುಹೋದ ಹದಿನೈದು ದಿನಗಳೊಳಗಾಗಿಯೇ ಜಮಾನ್ದಾರರ ಮನೆಯಲ್ಲಿ ಮತ್ತೊಂದು ಕಳವು ನಡೆದಂತೆಯೂ, ಅದಕ್ಕೆ ನಾವೇ ಕಾರ್ಯಕಾರಿಗಳೆಂದೂ ನಿರ್ಧರಿಸಲ್ಪಟ್ಟಿತು. ರಾಧಾನಾಧ-ನಿಮ್ಮ ಮೇಲೆ ಅಪರಾಧವು ನಿರ್ಧರವಾದುದು ಹೇಗೆ ? ಆಗ ನೀವಿದ್ದುದೆಲ್ಲಿ? ಯಮುನೆ--ಆರಾತ್ರಿ ನಾನು ಅರ್ಧರಾತ್ರಿಯವರೆಗೂ ಜಮಾನ್ದಾರರ ತಾಯಿಯ ಬಳಿಯಲ್ಲಿ ಮಾತನಾಡುತ್ತಿದ್ದು, ಆಮೇಲೆ ನನ್ನ ಸ್ಥಳ ದಲ್ಲಿ ಹೋಗಿ ಮಲಗಿದೆನು, ನಿತ್ಯದಂತೆಯೇ ಬೆಳಗಿನಜಾಮದ ನಾಲ್ಕು ಘಂಟೆಯಲ್ಲಿ ಎದ್ದು, ಹಿತ್ತಲಕಡೆಯ ಪುಷ್ಕರಣಿಯ ಬಳಿಗೆ ಹೋಗಿ, ಅಲ್ಲಿಂದ ಹಿಂತಿರುಗಿ ಬರುವಷ್ಟರಲ್ಲಿ, ಹಿತ್ತಲ ಬಾಗಿಲನ್ನು ಯಾರೋ ಹಾಕಿದ್ದರು. ಎಷ್ಟು ಸಾರಿ ಕೂಗಿದರೂ ಬಾಗಿಲು ತೆರೆ ಯಲ್ಪಡಲಿಲ್ಲವಾಗಿ ಹಿತ್ತಲನ್ನು ದಾಟಿ, ಬೀದಿಯ ಕಡೆಯಿಂದ ಬಂ ದೆನು. ಅಷ್ಟರಲ್ಲಿಯೇ ಜಮಾನ್ದಾರರೂ ಬೀದಿಯಬಾಗಿಲನ್ನು ತೆರೆ ದರು. ಒಳಗೆ ಏನು ನಡೆದಿದ್ದಿತೋ ನನಗೆ ತಿಳಿಯದು, ಹೇಗೂ ಜಮಾನ್ದಾರರೂ ಅವರ ತಾಯಿ ಮತ್ತು ಪತ್ನಿ ಗಂಗಾಬಾಯಿಯ