ಪುಟ:ದಕ್ಷಕನ್ಯಾ .djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ಚತುರ್ಥಪರಿವೆ. ೧ - (ಗಂಗೆಯ ನಿಶ್ಚಿತಾರ್ಥ.) ಇನ್ನು ಈಬಾರಿ ಗಂಗಾಬಾಯಿಯದೆಂದು ಗೊತ್ತಾಯಿತು. <<>” ಗಂಗಾಬಾಯಿಯು ಕರೆಯಲ್ಪಟ್ಟಳು. ಅವಕುಂರನವನ್ನು ಹೊದ್ದು ಬಂದು ತಲೆವಾಗಿ ನಿಂತಳು, ಜಮೀನ್ದಾರನು *** ಕೇಶರೋವಾದಿಗಳಿಂದ ಪರವಶನಾದನು. ಗಂಗೆಯು ಆತನ ಅವಸ್ಥೆಯನ್ನು ನೋಡಿ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಿದ್ದಳು. ರಾಧಾನಾಧ-ತಾಯಿಾ ! ನೀವು ಈ ವ್ಯಾಜ್ಯದ ವಿಷಯವಾಗಿ ಏನು ಹೇಳಬಲ್ಲಿರಿ ? ಗಂಗೆ-ನಾನು ಹೇಳುವುದೆಲ್ಲ ಅಖಂಡವೂ-ಅದ್ಭುತವೂ-ನಿಗೂಢವೂ ಆದ ವಿಚಾರಗಳು, ಅವುಗಳಲ್ಲಿ ಒಂದಾದರೂ ಅನೃತವಿರುವುದಿಲ್ಲ. ರಾಧಾನಾಧ-ಹಾಗಿದ್ದರೆ, ಧೈರ್ಯವಾಗಿ ಹೇಳಿರಿ, ತಾಯಿ ! ಗಂಗೆ-ಹೇಳಹೋದಳು; ಆದರೆ ಮೊದಲು ಕೊರಳುಕಟ್ಟಿದಂತಾಗಿ ಕಣ್ಣು ಗಳಲ್ಲಿ ನೀರುತುಂಬಿ, ಹೃದಯವು ಕಂಪಿಸಿತು, ಆದರೂ ಗಂಗೆಯು ಕಷ್ಟದಿಂದ ಮನೋನಿಗ್ರಹಮಾಡಿ, ಪತಿಯನ್ನು ನಿಂತಲ್ಲಿಯೇ ವಂ ದಿಸಿ, ಮೇಲೆನೋಡಿ-'ಸರ್ವೆಶ್ವರ ! ಸರ್ವಸಾಕ್ಷಿಮಂತ !! ಪ್ರಸನ್ನ ನಾಗು, ನನ್ನ ನಿಶ್ಚಿತಾರ್ಥವನ್ನು ತಿಳಿಯಹೇಳಿ, ಪ್ರಾಯಶ್ಚಿತ್ತಮಾ ಡಿಕೊಳ್ಳುವವರೆಗೂ, ನನ್ನೀ ಚೈತನ್ಯವನ್ನು ಕುಂದಿಸದಿರು, ನನ್ನ ನ್ನು ಪಾಪನಿರುಕ್ತಳನ್ನಾಗಿ ಮಾಡು.' ಎಂದು ಪ್ರಾರ್ಥಿಸಿದಬಳಿಕ ಸ್ಥಿರಳಾಗಿ ನಿಂತು ಹೇಳಲಾರಂಭಿಸಿದಳು.