ಪುಟ:ದಕ್ಷಕನ್ಯಾ .djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ووو “ ನ್ಯಾಯಕರ್ತರೇ ! ವಿದ್ಯಾಭ್ಯಾಸವು ಪುರುಷರಿಗೆ ಅವಶ್ಯಕವಾದಷ್ಟೇ ಸ್ತ್ರೀಯರಿಗೂ ಇರಬೇಕೆಂಬುದು ನಿಜವಾದ ಮಾತು. ಆದರೆ, ವಿದ್ಯೆಯು ಕೇವಲ ಶಿಕ್ಷೆಅಧ್ಯಯನಪೂರೈಕವಾಗಿ ಭಗವರೂಪ-ಸಂಬಂಧ-ಕರ್ತವ್ಯಗಳನ್ನು ಬೋ ಧಿಸುವ ಜ್ಞಾನವಾಗಿದ್ದು, ಅದೇ ಸ್ತ್ರೀಯರಿಂದ ಸಂಪಾದಿಸಲ್ಪಡಬೇಕಲ್ಲದೆ, ಬರಿಯ ಭಾಷಾಪರಿಚಯವಾಗಲೀ, ಇತರ ಪ್ರೌಢಕಲಾಪರಿಶ್ರಮವಾಗಲೀ ಸ್ತ್ರೀಯರಿಗೆ ಮುಖ್ಯವೆನಿಸಲಾರದು. ವಿದ್ಯೆಯಿಲ್ಲದೆ ಕಲಾಭಿಜ್ಞತೆಯುಂಟಾ ದರೆ, ಅದು ಸ್ತ್ರೀಯರಲ್ಲಿ ಅಭಿಮಾನ-ಆಲಸ್ಯ-ಉದಾಸೀನ-ಅಸೂಯೆ, ಸಂ ಶಯ, ಇತ್ಯಾದಿ ದೋಷಗಳಿಗೆ ಗುರಿಯಾಗಿ, ಅನರ್ಧವನ್ನೇ ಉಂಟುಮಾಡು ವಂತಾಗುವುದಲ್ಲದೆ, ಸಹವಾಸದೋಷಕ್ಕೆ ಗುರಿಯಾಗುವಪಕ್ಷದಲ್ಲಿ ಸ್ವರೂ ಪನಾಶಕ್ಕೆ ಕಾರಣವಾದೀತೆಂದೂ ಹೇಳಬೇಕಾಗಿದೆ. ಅದು ಹಾಗಿರಲಿ. ನಾನು ಇತರ ಕುಶಲ ಕಲೆಗಳಲ್ಲಿ ಪರಿಶ್ರಮವುಳ್ಳವಳಾಗಿದ್ದು, ತಕ್ಕ ಮಟ್ಟಿಗೂ ಭಾವಾಪರಿಜ್ಞಾನವನ್ನು ಹೊಂದಿದ್ದರೂ, ನನಗೆ ಮೇಲಿನ ಶಿಕ್ಷಾ ರೂಪವಾದ ವಿದ್ಯೆಯು ಅಷ್ಟಾಗಿ ದೊರೆಯಲಿಲ್ಲ. ಸಾದ್ವಿಮಣಿಯಾದ ನನ್ನ ತಾಯಿಯ ಸುಬೋಧ-ಶಿಕ್ಷಣೆಯೂ ನನಗೆ ಕೇವಲ ನನ್ನ ಬಾಲ್ಯದಲ್ಲಿ ಮಾತ್ರವೇ ದೊರೆದಿತ್ತಾದರೂ, ಅತ್ಯಲ್ಪ ಕಾಲದಲ್ಲಿಯೇ ಹೊಂದಿದ ಮಾತೃ ವಿಯೋಗದುಃಖದಿಂದ ಅದು ಪ್ರಸಾರಕ್ಕೆ ಬರದೆ, ಅಂತರಂಗದಲ್ಲಿಯೇ ಅಡ ಗಿರಬೇಕಾಯಿತು ಮಾತೃವಿಯೋಗಹೊಂದಿದ ಒಂದೆರಡು ವರ್ಷಗಳಲ್ಲಿಯೇ ಯಶವಂ ತನು, ಜಮೀನ್ದಾರರ ದಿವಾನನಾಗಿ ನೇಮಿಸಲ್ಪಟ್ಟಿದ್ದುದರಿಂದ, ಒಬ್ಬ ದಾದಿಯೊಡನೆ ನನ್ನನ್ನು ವಿಷಹರಪುರದಲ್ಲಿಯೇ ಇರಿಸಿ, ನನಗೆ ಅಲ್ಲಿ ವ್ಯಾಸಂ ಗವನ್ನು ರೂಢಿಗೆ ತರುವಂತೆ ಮಾಡಿದರು, ಯಶವಂತನು, ನನ್ನ ಮತ್ತು ನನ್ನ ಪೋಷಕಳ ವಿಚಾರದಲ್ಲಿ ಅಧಿಕ ಶ್ರದ್ಧೆಯಿಂದ ತೃಪ್ತಿಕರವಾದ ಪಿರಾ ಟುಮಾಡಿ, ಅಡಿಗಡಿಗೆ ಬಂದು, ನಮ್ಮನ್ನು ವಿಚಾರಿಸಿಕೊಳ್ಳುತ್ತಿದ್ದನು.