ಪುಟ:ದಕ್ಷಕನ್ಯಾ .djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووو ದ ಕ ಕ ನ್ಯಾ ಬಿಯ ಹೂವು, ಜಾರಿ ಕೆಳಗೆ ಬೀದಿಯ ಮಾರ್ಗದಲ್ಲಿ ಬಿದ್ದಿತು. ಹೂವು ಬಿತ್ತೆಂದು ನಾನು ಆ ಕಡೆ ನೋಡುವಷ್ಟರಲ್ಲಿಯೇ, ಈ ಜಮಾದಾರ ವಾಸು ದೇವನು ಆ ಕಡೆ ಬರುತ್ತಿದ್ದವನು, ಧಟ್ಟನೆ ಹೂವನ್ನು ಕೈಯಿಂದ ಕಣ್ಣಿ ಗೊತ್ತಿಕೊಳ್ಳುತ್ತ, ನಾನು ನಿಂತಿದ್ದ ಕಡೆಯನ್ನೇ ನೋಡುವುದನ್ನು ಕಂಡೆನು, ನನ್ನ ತಲೆಯಲ್ಲಿದ್ದ ಹೂವು ಕೆಳಗೆ ಜಾರಿಬಿದ್ದುದೂ, ಅದು ಅನ್ಯಾ ಕ್ರಾ೦ತವಾದುದೂ, ಸಾಲದುದಕ್ಕೆ ಅವನು, ವಿಕಾರಚೇಷ್ಟೆಗಳಿಂದ ನೋಡುತ್ತಿರುವುದೂ-ಇವೆಲ್ಲಾ ಕಾರಣಗಳಿಂದಲೂ ನನ್ನ ಮನಸ್ಸು ವ್ಯಾಕುಲಿತವಾಯಿತು. ನಾನು ನಿಂತಲ್ಲಿಯೇ ಯೋಚಿಸುತ್ತಿದ್ದು, ನಾಲ್ಕಾರು ನಿಮಿಷಗಳ ಮೇಲೆ ಎಚ್ಚೆತ್ತು ನೋಡಿದೆನು. ಇವನು ಆಗಲೂ ಅಲ್ಲಿಯೇ ಇದ್ದುದರಿಂದ, ನಾನು ಭಯಪಟ್ಟು, ಅಲ್ಲಿ ನಿಲ್ಲದೆ ನನ್ನ ಸ್ಥಾನಕ್ಕೆ ಹೊರಟು ಹೋದೆನು. ಆ ರಾತ್ರಿ ಏಳುಗಂಟೆಯಲ್ಲಿಯೇ ಯಶವಂತನು ನಾನಿದ್ದಲ್ಲಿಗೆ ಬಂದು, ನನ್ನನ್ನು ಬಹುವಿಧವಾಗಿ ಹೊಗಳಿದುದಲ್ಲದೆ, ಜಮಾದಾರನ ವಿದ್ಯಾ ಗುಣಗಳನ್ನೂ ವಿವಿಧವಾಗಿ ವರ್ಣಿಸಿದನು. ನಾನು ಇನ್ನೂ ಸುಸ್ಥಿತಿಗೆ ಬಂದಿರಲಿಲ್ಲವಾದುದರಿಂದ, ಅವನಿಗೆ ಯಾವ ಉತ್ತರವನ್ನೂ ಕೊಡಲಾರದಿ ದೈನು, ಆದರೆ ಅವನು, ಜಮಾದಾರನ ವಿಷಯವೂರ್ತಿಗೆ ನಾನು ಸಮ್ಮತಿ ಸಬೇಕೆಂದೂ, ಮುಂದೆ ಜಮಾನ್ದಾರರ ಸರ್ವಸ್ವವೂ ತನ್ನ ಕೈವಶವಾಗುವು ದರಿಂದ, ಜಮಾದಾರನಿಗೆ ತಾವು ಅರ್ಧಭಾಗವನ್ನು ಕೊಟ್ಟು ಉನ್ನತಿಗೆ ತರುವೆವೆಂದೂ, ಇನ್ನೂ ಹಲವು ದುರ್ಭಾಷೆಗಳಿಂದ ನನ್ನ ಕಿವಿಯನ್ನು ಕಿವು ಡನ್ನಾಗಿಮಾಡಿದರು, ನಾನು ಅದಕ್ಕೆ ಸಮ್ಮತಿಸದೆ ಒಂದೆರಡು ನಿಷ್ಟುರದ ಮಾತುಗಳನ್ನಾಡಿದೆನು. ಇಷ್ಟಕ್ಕೇ ಯಶವಂತನು ಕ್ರೋದಾಂಧನಾಗಿ ನನ್ನನ್ನು ಮನಬಂದಂತೆ ಬೈದು, ಬೆದರಿಸಿದುದಲ್ಲದೆ-ನಿನ್ನನ್ನು ಕಷ್ಟಪಟ್ಟು ಸಾಕಿದುದೂ, ಈ ಮನೆಗೆ ನಿನ್ನನ್ನು ಮದುವೆಮಾಡಿಕೊಟ್ಟು ದೂ, ನಿನ್ನ ಆಗ್ರಹದಂತೆ ನಡೆಯಬೇಕೆಂದಲ್ಲ, ನಮ್ಮ ವಿಚಾರವಾಗಿ ನೀನು ಒಂದಕ್ಷರ 15