ಪುಟ:ದಕ್ಷಕನ್ಯಾ .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨: ಶ ನೀ ಹಿತ ಷಿ ಣಿ ವನ್ನಾದರೂ ಯಾರಮುಂದೆಯಾಗಲಿ ಹೇಳಿದುದಾದರೆ, ಆ ಕ್ಷಣವೇ ಜಾನ್ದಾರನ ಪ್ರಾಣವನ್ನು ತೆಗೆದು, ನಿನ್ನನ್ನು ಅಂತ್ಯಜರಿಂದ ಕೆಡಿಸಿಹಾ ಕುವೆನೆಂದೂ, ತಮ್ಮ ಕಾರ್ಯಕ್ಕೆ ಪ್ರತಿಕೂಲವನ್ನಾಚರಿಸುವುದಾದರೆ, ನಿನ್ನಲ್ಲಿ ಕಳಂಕವನ್ನು ಹೊರಿಸಿ, ಮನೆಬಿಟ್ಟು ಹೊರಡಿಸುವಂತೆ ಮಾಡುವೆ ವೆಂದೂ ಹೇಳಿ, ನನ್ನನ್ನು ಭಯಸಾಗರದಲ್ಲಿ ಮುಳುಗಿಸಿದನು. ಆಗ ನನಗೆ ಸಾರಾಸಾರ ವಿಚಾರವು ಅಷ್ಟು ದೃಢವಾಗಿ ತಿಳಿದಿರ ಲಿಲ್ಲವಾದುದರಿಂದಲೂ, ವೈಧವ್ಯ, ಅಪವಾದ, ನಿರಂತರಕಷ್ಟ-ಇತ್ಯಾದಿಗಳ ಭಯದಿಂದಲೂ, ಸಾಲದುದಕ್ಕೆ ಭ್ರಾತೃವಾತ್ಸಲ್ಯ ವೆಂಬ ಲೋಭದಿಂದಲೂ ನಾನು, ದುರಾಚಾರಕ್ಕೆಂದಿಗೂ ಗುರಿಯಾಗುವುದಿಲ್ಲವೆಂದು ತಿರಸ್ಕರಿಸಿದೆನಾ ದರೂ, ಅವನ ಕಾರ್ಯಗಳಿಗೆ ಪ್ರತಿಕೂಲವನ್ನು ಮಾಡುವುದಾಗಲೀ, ಹೇಳು ವುದಾಗಲೀ ಇಲ್ಲವೆಂದು ಭಾಷೆಯಿತ್ತು, ಅದರಂತೆ ನಡೆಯಲು ನಿಶ್ಚಯಿಸಿ ದೆನು. ಆ ರಾತ್ರಿಯೇ ನಾನು ಅವನ ಇಷ್ಟದಂತೆ, ನನ್ನ ಆಭರಣ ವಾದಿ ಗಳೆಲ್ಲವನ್ನೂ ತೆಗೆದಿತ್ತು, ಅವನನ್ನು ಕಳುಹಿ, ಪೆಟ್ಟಿಗೆಗಳ ಹಲಗೆಗಳನ್ನೊಡೆ ದೆಸೆದು, ಬಾಗಿಲಿಗೆ ಕೈ ಹಿಡಿವಂತೆ ರಂಧ್ರಮಾಡಿದೆನು, ಈ ಕಾರ್ಯವು ನನಗೆ ತಕ್ಕುದಲ್ಲವೆಂದು ಆತ್ಮನು ಹೇಳುತ್ತಿದ್ದುದರಿಂದ, ನಾನು ಆ ರಾತ್ರಿ ಯಲ್ಲಿ ಹುಚ್ಚಳಂತೆಯೇ ಇದ್ದೆನು, ಈ ಕಾರಣಗಳಿಂದಲೇ, ರಾತ್ರಿ-ಎಂದೂ ಕರೆಯದಿದ್ದ ಪತಿಯು, ಆ ದಿನದಲ್ಲಿ ಎರಡು-ಮೂರು ಬಾರಿ ಹೇಳಿಕಳುಹಿ ದರೂ ಬರಲಾರೆನೆಂದು ಹೇಳಿ, ಅವರ ಮನಸ್ಸನ್ನು ಖತಿಗೊಳಿಸಿಬಿಟ್ಟೆನು. ಇಷ್ಟು ಮಾಡಿಯೂ, ಜಮಾನ್ದಾರರು ಶ್ರೀದತ್ತಕುಮಾರನೊಡನೆ ಪರೀಕ್ಷೆ ಗೆಂದು ಬಂದಾಗ, ನಾನು ಏನನ್ನಾ ತಿಳಿಯದವಳಂತೆ ಮಲಗಿದ್ದೆನು. ಅಷ್ಟ ಇದೆ, ಯಜಮಾನರ ಕಾಗದಪತ್ರಗಳನ್ನೂ ಹೊತ್ತು ಹಾಕಿದವರಾರೆಂಬ ದನ್ನು ನಾನು ನೋಡಿದವಳಲ್ಲ. ಆದರೂ, ಯಶವಂತ-ಗೋಪಾಲರಿಬ್ಬರ ಇದೆ, ಮತ್ತಾರೂ ಬಂದಿರಲಿಲ್ಲವೆಂದು ಹೇಳಬಲ್ಲೆನು. ಧರ್ಮಪಾಲ-ಹಾಗಾದರೆ, ಆ ರಾತ್ರಿ ಯಶವಂತಾದಿಗಳನ್ನು ಕಟ್ಟಿ ಹಾ. ಕಿದ್ದವರಾರು ?