ಪುಟ:ದಕ್ಷಕನ್ಯಾ .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಸ ತಿ ಹಿ ತ ಷಿ ಣಿ ದ-ಮೊದಲುಸಾರಿ, ಯಜಮಾನರಲ್ಲಿ ಹೇಳಿಯೂ ಅದು ಫಲಕಾ ರಿಯಾಗದಿದ್ದುದು ಅಸಮಾಧಾನವುಂಟುಮಾಡುತ್ತಿದ್ದುದರಿಂದಲೂ, ನಾನು ಅದನ್ನು ತಂದು ಯಮುನೆಯ ಸೀರೆಯ ಕೊನೆಗೆ ಕಟ್ಟಿ, ಹೊರಟುಹೋಗಿ ಮಲಗಿದೆನು. ಉಳಿದ ಕೆಲಸವೆಲ್ಲವೂ ಯಶ ವಂತನ ಕುಮಂತ್ರಕ್ಕೆ ಸೇರಿರಬೇಕು. ರಾಧಾನಾಧ- ಹೋಗಲಿ ; ನಿಮ್ಮ ಸಪತ್ನಿ ಯ ಮತ್ತು ಸಸತೀಪುತ್ರರ ವಿಷಯವಾಗಿ ನಿಮಗೆ ದ್ವೇಷವಿದ್ದಿತೋ ? ಅವರ ಕೊಲೆಗೆ ನೀವೇ ನಾದರೂ ಪ್ರೇರಕರಾಗಿರುವಿರೋ ? ಗಂಗೆ-ಗದ್ದ ದಸ್ವರದಿಂದ-' ನನ್ನ ಜೀವನದಲ್ಲಿಯಾದರೂ ನನಗೆ ದ್ವೇಷವುಂ ಟಾದೀತಲ್ಲದೆ,-ಕುಮಾರನ ವಿಷಯದಲ್ಲಿಯಾಗಲೀ, ಸುನಂದಾಬಾ ಯಿಯಲ್ಲಿಯಾಗಲೀ ನನಗೆ ದ್ವೇಷವುಂಟಾಗಲು ಕಾರಣವಿರುವು ದಿಲ್ಲ, ಸ್ವಾಮಿಯ ಅಪ್ರಸನ್ನ ತೆಗೆ ಕಾರಣಳಾಗಿ, ಅಭಿಮಾನಾದಿ ಗಳಿ೦ದ ಬೀಗಿದ್ದ ನನಗೆ ಜ್ಞಾನವನ್ನು ೦ಟುಮಾಡಿ, ಪುತ್ರನನ್ನೂ ನನ್ನ ಕೈಗೊಪ್ಪಿಸಿ, ಪತಿಯ ವಿಶ್ವಾಸವು ನನ್ನಲ್ಲಿ ಪೂರ್ಣವಾಗಿರು ವಂತೆ ಮಾಡಿದ ಸುನಂದಾದೇವಿಯನ್ನು ನಾನೆಂದಿಗೂ ಸಪತ್ನಿ ಯೆಂದು ತಿಳಿಯಲಾರೆನು ! ಆಕೆಯನ್ನು ನನ್ನ ಭಾಗ್ಯದೇವತೆಯೆಂ ದೇ ಹೇಳಬಲ್ಲೆನು. ಅಷ್ಟೇಅಲ್ಲ ! ಯಾವ ದಿನದಲ್ಲಿ-ಅವರು ಲಕ್ಷ್ಮೀಭವನಕ್ಕೆ ಕಾಲಿಟ್ಟರೋ, ಆ ದಿನದ ಮೊದಲು, ನನಗೆ ಸತೀಕರ್ತವ್ಯವು ಜಾಗ್ರತವಾಗುತ್ತ ಬಂದಿತಲ್ಲದೆ, ಯಶವಂತಾದಿ ಗಳ ಕೂಡ ಸಂಭಾಷಣವೂ ನಿಷಿದ್ಧವೆಂದು ತಿಳಿದುಬಂದಿತು. ಅದ ಸ್ನಾಗಿ ನಾನು, ಯಾವಾಗಲೂ ಅವರ ಬಳಿಯಲ್ಲಿಯೇ ಇದ್ದು, ವಿವಿಧ ಪ್ರಸಂಗದಿಂದ ಆತ್ಮಸಮಾಧಾನವನ್ನು ಕಲ್ಪಿಸಿಕೊಳ್ಳುತ್ರಿ ದೈನು. ಆದರೆ, ನನ್ನ ದುರ್ದೈವದಿಂದ ಅತ್ಯಲ್ಪ ಕಾಲದಲ್ಲಿಯೇ ಅವರನ್ನು ಅಗಲುವ ಪ್ರಸಂಗವುಂಟಾಯಿತು, ಅವರು ಮತ್ತೆ