ಪುಟ:ದಕ್ಷಕನ್ಯಾ .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ گو و ದುರ್ಗಾಪುರಕ್ಕೆ ತೆರಳಿದ ಬಳಿಕ ಒಕ್ಷ್ಮಿನಿಲಯವು ಮುಚ್ಚಲ್ಪ ೬ುದರಿಂದ, ವಿಲಾಸಭವನದಲ್ಲಿಯೇ ಇರಬೇಕಾಯಿತು. ಇದ ರಿಂದ ನನಗೆ ಈ ಯಶವಂತನ ಹಿಂಸೆಯು, ಮತ್ತೆ ತಲೆಯೆತ್ತುವಂ ತಾಯಿತು. ರಾಧಾನಾಧ-ವಿಂದೆಯ ಅಪಹರಣದ ವಿಚಾರವಾಗಿಯಾಗಲೀ ಮತ್ತಾವ ಕೊಲೆ-ಸುಲಿಗೆಗಳ ವಿಷಯದಲ್ಲಿಯಾಗಲೀ, ಇವರು ನಿಮ್ಮಲ್ಲಿ ಎಂದಾದರೂ ಹೇಳಿದ್ದರೋ ? ಗಂಗೆ-ಸುನಂದಾದೇವಿಯು ಮತ್ತು ಮೋಹನನು ಜೀವಿಸಿರುವ ವರ್ತಮಾ ನವೇ ನನಗೆ ತಿಳಿದಿರಲಿಲ್ಲ. ನಿಂದೆಯನ್ನು ಸುಸಂಧನಿಗೆ ಮದುವೆ ಮಾಡಿ ಕೊಡಬೇಕೆಂದು ಮಾತ್ರವೇ ಇವರು ನನಗೆ ಹೇಳಿದ್ದರು. ಒಡಹುಟ್ಟಿದ ಪ್ರೀತಿಯಿಂದ, ನಾನೂ ಅದಕ್ಕೆ ಸಮ್ಮತಿಸಿದ್ದು, ಒಂದೆರಡು ಬಾರಿ ವಿಂದೆಯ ವಿವಾಹ ವಿಷಯವಾಗಿ ಯಜಮಾ ನರ ಮತ್ತು ಅತ್ತೆಯವರ ಬಳಿಯಲ್ಲಿ ಪ್ರಸ್ತಾಪಿಸಿದ್ದೆನು. ಆದರೆ, ಸುಪಂಧನು ನನ್ನ ಬಂಧುವೆಂದು ಹೇಳಿರಲಿಲ್ಲ, ಸುನಂದಾದೇ ವಿಯು ಪುತ್ರನೊಡನೆ ಜೀವಿಸಿರುವ ಸಂಗತಿಯನ್ನು ಕೇಳಿ, ಮೊದ ಲು ನನಗೆ ಅಸೂಯೆಯಾಗಿತ್ತಾದರೂ, ಆ ಅಸೂಯೆಯು ಅವ ರನ್ನು ನೋಡಿದ ಬಳಿಕ ಉಳಿಯಲಿಲ್ಲ, ಅವರನ್ನು ಕೊಲ್ಲಬೇಕೆಂದು ಇವರು ಹೂಡಿದ್ದ ಮಾಟವನ್ನೂ ನಾನು ಅರಿಯೆನು. ಅವರು ದುರ್ಗಾಪುರಕ್ಕೆ ಹೊರಟುಹೋಗಿ, ಯಮುನೆಯನ್ನೂ ಹೊರ ಹೊರಡಿಸಿದ ಮೇಲೆಯೇ, ನನಗೆ ಇವರ ಅಭಿಸಂಧಿಯು ಹೀಗಿರ ಬಹುದೆಂದು ಸಂಶಯವುಂಟಾಯಿತು. ಆ ಸಂಶಯಕ್ಕೆ ಸರಿಯಾಗಿ ತೋಟದಿಂದ ಹಾಗೆಯೇ ಹೊರಟುಹೋಗುವೆನೆಂದು ಬರೆದಿದ್ದ ಸ್ವಾಮಿಯ ಪತ್ರವೂ, ಆ ಬಳಿಕ ನಾನು ಕಂಡ ಕನಸೂ, ಕನಸಿ ಗನುಸಾರವಾಗಿ ಬಂದ ಧರ್ಮಪಾಲರ ಪತ್ರವೂ ನನಗೆ ಆತ್ಮಸ್ವ