ಪುಟ:ದಕ್ಷಕನ್ಯಾ .djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ತಿ ಹಿ ತ, ಷಿ ಣಿ ರೂಪ-ಕರ್ತವ್ಯ ನಿಷ್ಠೆಗಳೂ ಕಾರಾಕಾರ ವಿಚಾರಗಳಲ್ಲಿ ಪರಿಜ್ಞಾನ ನ್ನುಂಟುಮಾಡುವಂತಾದುವು. ಹಾಗಾದುದರಿಂದ, ಆ ವರೆಗೆ ನಾನು ನನ್ನ ಸ್ವಾಮಿಯ ವಿಷಯದಲ್ಲಿ ಉಂಟಾಗಿದ್ದ ಸಂಶಯ, ದುರಭಿಮಾನಗಳನ್ನು ಕಳೆದು, ನನ್ನ ಹಿಂದಿನ ಜ್ಞಾನಶೂನ್ಯತೆಗೆ ಪರಿ ತಪಿಸುವಂತಾದೆನು, ಅದು ಮೊದಲು, ನನಗೆ ಕೇವಲ ಹಿತರಂ ತಿದ್ದ ಯಶವಂತಾದಿಗಳೇ ನನ್ನ ಸರ್ವನಾಶಕ್ಕೂ ಕಾರಣರಾಗಿ ಹುಟ್ಟಿದವರೆಂದು ತಿಳಿದು, ದ್ವೇಷಿಸುತ್ತೆ ಬಂದೆನು, ನನ್ನ ಧೂರ್ತ ತೆಗೆ ಪ್ರಾಯಶ್ಚಿತ್ರವನ್ನು ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿದೆನು. ಆ ಸಂಕಲ್ಪದಿಂದಲೇ ನಾನು, ಕೃತಾಂತನ ಸಹಾಯದಿಂದ, ಗೊಲ್ಲ ರಪಾಳ್ಯವನ್ನು ಸೇರಿ, ಅಲ್ಲಿ ಧರ್ಮಪಾಲರು ಕೊಟ್ಟ ಸಲಹೆಗ ೪ಂದ ಯಶವಂತಾದಿಗಳು ಮರೆಯಾಗಿದ್ದ ವೇಳೆಯಲ್ಲಿ ಹೋಗಿ, ಸ್ವಾಮಿಯ ಮಂಚದಡಿಯಲ್ಲಿ ಕಾದಿದ್ದು, ಅವರು ಯಜಮಾನರಿಗೆ ಕುಡಿಯುವಂತೆ ಹೇಳಿ ತಂದಿದ್ದ ಹಾಲನ್ನು ಕುಡಿಯದಂತೆ ಮಾಡ ಲು, ಉಕ್ಕಿನ ಸರಿಗೆಯಿಂದ ಮಲಗಿದ್ದವರ ಕಾಲನ್ನು ಚುಚ್ಚಿ, ಅದರ ಯಾತನೆಯಿಂದ ಅವರದನ್ನು ಕೆಡಹುವಂತೆ ಮಾಡಿದೆನು. ಅದಾದ ಬಳಿಕ, ನಡೆದ ವಿಚಾರವೆಲ್ಲವೂ ಕೃತಾಂತನ ವಾಲ್ಯೂಲ ದಿಂದಲೂ, ಧರ್ಮಪಾಲರ ವಾಕ್ಯದಿಂದಲೂ ತಿಳಿಯಬೇಕಲ್ಲದೆ ನನ್ನಿಂದ ಹೇಳಿ ಮುಗಿಯುವಂತಿಲ್ಲ. - ಮುಖ್ಯವಾಗಿ ಅಭಿಮಾನ-ಆಲಸ್ಯ-ಉದಾಸೀನಗಳುಳ್ಳ ಮಾನಿ ನಿಯರಿಗೆ ಇದೇ ಪ್ರಾಯಶ್ಚಿತ್ರವಿರಬೇಕೆಂದು ನನ್ನ ಅನುಭವದಿಂದ ತಿಳಿಯುತ್ತಿದೆ. ಇನ್ನು ಇದಕ್ಕೂ ಹೆಚ್ಚು ಹೇಳುವುದಕ್ಕೆ ನನಗಳ ವಲ್ಲ, ಅನುತಾಪಾನಲದಿಂದ ಬೆಂದುಹೋಗುತ್ತಿರುವ ನನ್ನ ಮನ ಸ್ಥಿಗೆ, ಭಗವತ್ಸೆಯೊಂದೇ ಇನ್ನು ಪ್ರಾರ್ಧನೀಯವಾಗಿದೆಯಲ್ಲದೆ, ಸ್ಥಾನಗೌರವವಾಗಲೀ ಇತರ ಬಹುಮಾನವಾಗಲೀ ಬೇಕಾಗಿಲ್ಲ.