ಪುಟ:ದಕ್ಷಕನ್ಯಾ .djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧ ದ ಕ್ಷ ಕ ನ್ಯಾ ಹೀಗೆ ಹೇಳುತ್ತಿದ್ದಂತೆಯೇ ಗಂಗೆಯ ಮುಖವು, ವಿವರ್ಣವಾ ಯಿತು ; ಕಣ್ಣಾಲೆಗಳು ತಿರುತಿರುಗಿದುವು ; ನಾಲಿಗೆಯ ದ್ರವವೂ ಆರಿತು. ಕಡೆಗೆ ಗಂಗೆಯು ಚೈತನ್ಯವಿಲ್ಲದೆ ಕೆಳಗೆ ಬೀಳುವಂತಾದಳು. ಹೀಗಾಗಬಹುದೆಂದು ಮೊದಲೇ ಸೂಚಿಸಲ್ಪಟ್ಟು ಎಚ್ಚರದಲ್ಲಿದ್ದ ವಿಂದೆಯೂ, ಯಮನೆಯ ತೆರೆಯ ಕಡೆಯಲ್ಲಿ ನಿಂತೇಇದ್ದರು, ಧರ್ಮ ಪಾಲನು ಗಂಗೆಯ ಅವಸ್ಥೆಯನ್ನು ನೋಡಿ, ತೆರೆಯಕಡೆಗೆ ತಿರುಗಿ, ಕೈಸನ್ನೆ ಮಾಡಿದನು. ಧರ್ಮಪಾಲನ ಸೂಚನೆಯೊಡನೆಯೇ ಇಬ್ಬರೂ ಬಂದು, ಗಂಗೆಯನ್ನು ಹಿಡಿದು, ಮೆಲ್ಲನೆ ಕರೆದುಕೊಂಡು ಹೋದರು. ಗಂಗಾಬಾಯಿಯ ಸ್ಥಿತಿಯನ್ನು ನೋಡಿ, ಎಲ್ಲರ ಕಣ್ಣುಗಳಿಂ ದಲೂ ಶೋಕಾಶ್ರುಗಳು ಸಡಲಿದುವು ; ಅನುಕಂಪದಿಂದ ಎಲ್ಲರ ಹೃದಯ ಗಳೂ ಕಂಪಿಸಿದುವು. ಇನ್ನು ತಾರಾಪತಿರಾಯನ ಮನಸ್ಥಿತಿಯನ್ನು ಹೇಳಿ-ಕೇಳುವುದೇನು ? ತಾರ TV ಪಂಚಮ ಪರಿಚ್ಛೇದೆ. (ವಾಸುದೇವಾದಿಗಳ ಗರ್ವಭಂಗ ) ಈಡವೆ, ಜಮಾದಾರ ವಾಸುದೇವರಾಯನ ವಿಚಾರಣೆಯಾ - ಗಬೇಕು. ಗಂಗೆಯ ವಾಕ್ಯವೆಲ್ಲವನ್ನೂ ಕೇಳಿರುವ ವಾಸುದೇವಾದ್ಯರಿಗೆ, ಇನ್ನು ತಪ್ಪಿಸಿಕೊಳ್ಳುವೆವೆಂಬ ಆಶ - ಯೇನಾದರೂ ಉಳಿದಿರುವುದೋ ? ಎಲ್ಲಿ ಬಂತು ! ವಿಚಾ ರಣೆಗೆಂದು ಬಂದು ನಿಂತುದು ಮೊದಲು, ಇಲ್ಲಿಯವರೆಗೂ ತಮಗೆ ಅನು ಕೂಲವಾದ ಒಂದು ಅಕ್ಷರವನ್ನಾದರೂ ಕೇಳಲಿಲ್ಲ, ಆವರೆಗೆ ಹೊರಟ