ಪುಟ:ದಕ್ಷಕನ್ಯಾ .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಸ ತಿ ಹಿ ' ಷಿ ಕೃತಾಂತಾದಿಗಳ ವಾನ್ಮೂಲಗಳೆಲ್ಲವೂ, ತಮ್ಮ ಅಪರಾಧವು ಸ್ಥಿರಪಡುವು ದಕ್ಕೆ ಮಾತ್ರ ಸಹಕಾರಿಗಳಾಗಿರುತ್ತವೆ. " ಇನ್ನು ಮುಂದೆ ಯಾವ ಮಾರ್ಗ ವನ್ನು ಹಿಡಿಯಬೇಕು ? ಇನ್ನು ಮುಂದೆಯಾದರೂ ಯಾವುದರಿಂದ, ಇದ್ದು ದರಲ್ಲಿ ತಮಗೆ ಸುಖವಾಗಬಹುದು ?” ಇವೆರಡೇ ಚಿಂತೆಗಳು ಅವರ ಮುಖ ವನ್ನು ವಿಕಾರಪಡಿಸಲಿಕ್ಕೆ ಸಾಕಲ್ಲವೇ ? ಇರಲಿ ; “ ಅವಶ್ಮನು ಭೋಕ್ತವ್ಯಂ ಕೃತಂಕರ್ಮ ಶುಭಾಶುಭಂ.' ದಳವಾಯಿಸಿಂಗ್-ಇನ್ನು ಜಮಾದಾರರ ವಿಚಾರವಾಗಬಹುದು, ಅವರು ಕಳ್ಳರೆಲ್ಲರನ್ನೂ ಬಹು ಸಾಹಸಪಟ್ಟು ಹಿಡಿದು ತಂದಿರುವರಷ್ಟೆ ; ಇನ್ನೂ ವಿಳಂಬವೇಕೆ ? ವಾಸುದೇವನು ನಿಟ್ಟುಸಿರಿಡುತ್ತ ತಲೆಬಾಗಿ ನಿಂತನು. ಧರ್ಮಪಾಲ-ಗಂಗಾಬಾಯಿಯವರ ವಾಲ್ಯೂಲದಿಂದ ಜಮಾದಾರರು ವಿರಕ್ತರಾದಂತೆ ತೋರುತ್ತಿದೆ, ಆದರೂ ಯತ್ನ ವಿಲ್ಲ ; ಹೇಳಲೇ ಬೇಕು. ರಾಧಾನಾಧ-ಜಮಾದಾರನ ಕಡೆಗೆ ತಿರುಗಿ- ಏನಯ್ಯಾ, ವಾಸುದೇವ ರಾಯ ! ಈಗ ನೀನು ಹೇಳುವುದೇನಾದರೂ ಉಂಟೇ ? ? ವಾಸುದೇವ-ನಿಟ್ಟುಸಿರಿಟ್ಟು ಹೇಳುವುದೇನು ? ಕಂಡಂತೆಯೇ ಇದೆ.

  • ವಿನಾಶಕಾಲೇ ವಿಪರೀತ ಬುದ್ದಿ 8' ಎಂಬುದು ನನಗೆ ಅನ್ವ

ಯಿಸಿತು.' ರಾಧಾನಾಧ- ತಲೆದೂಗಿ- ನಿಜ ! ಅದನ್ನು ನೂರುಬಾರಿ ಹೇಳಿದರೂ ಸಮ್ಮತವು ಮಾಡಿದ ಕಾಠ್ಯಕ್ಕೆ ಅನುಭವವು ತಪ್ಪಿದುದಲ್ಲವಾ ದರೂ, ಮಾಡಿದ ತಪ್ಪನ್ನು ಮನಸ್ಸಾಕ್ಷಿಯಾಗಿ ಹೇಳಿ-ಪಶ್ಚಾತ್ತಾ ಪಹೊಂದುವುದರಿಂದ, ಮುಂದೆಯಾದರೂ ಶಾಂತಿಸುಖಕ್ಕೆ ಅವ ಕಾಶವುಂಟು, ನಿನ್ನ ಕೃತ್ಯಾ-ಕೃತ್ಯ ವೆಲ್ಲವನ್ನೂ ಇಲ್ಲಿಯವರೆಲ್ಲರೂ ಕೇಳುವಂತೆ ಸ್ಪಷ್ಟವಾಗಿ ಹೇಳು.