ಪುಟ:ದಕ್ಷಕನ್ಯಾ .djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೨೩೫ ಲಿಲ್ಲ. ಮತ್ತೆ ನನಗೆ ತಿಳಿಸದೆಯೇ ಜಮೀನ್ದಾರರನ್ನು ಬರಮಾಡಿ ಕೊಂಡು, ದಾರಿಯಲ್ಲಿ ಅವರನ್ನು ಗಾಯಪಡಿಸಿಟ್ಟು ಕೊಂಡಿರು ವುದು ತಿಳಿದುಬಂದ ಬಳಿಕ, ಯಶವಂತನು ನನ್ನನ್ನು ಅಲ್ಲಿಗೆ ಕರೆ ದೊಯ್ದನು. ಅಲ್ಲಿ ನಡೆದುದೆಲ್ಲವೂ ಮೊದಲೇ ಕೃತಾಂತ-ಗಂಗಾ ಬಾಯಿಯವರಿಂದ ಹೇಳಲ್ಪಟ್ಟಿದೆ. ಇನ್ನು ನಾನು ಹೇಳುವುದೇನು ? ರಾಧಾನಾಧ-ಯಶವಂತನನ್ನು ನೋಡಿ-“ ಏನಯ್ಯಾ, ಯಶವಂತರಾಯ! ಒಳ್ಳೆ ಶಾಶ್ವತವಾದ ಯಶಸ್ಟೇ ನಿನಗಾಗಿ ಕಾದಿರುವುದಲ್ಲವೇ ? ಸಂತೋಷ ನಿಮ್ಮ ವಾಸುದೇವರಾಯನ ಹೇಳಿಕೆಯೆಲ್ಲವನ್ನೂ ಕಿವಿಗೊಟ್ಟು ಕೇಳಿದೆಯಷ್ಟೆ, ಇನ್ನೂ ತಪ್ಪಿಸಿಕೊಳ್ಳುವಂತೆ ಏನಾ ದರೂ ಉಪಾಯಗಳನ್ನು ಯೋಚಿಸಿದ್ದರೆ ಹೇಳು. ಯಶವಂತನ ಬಾಯಿಂದ ಈಗ ಎಂತಹ ಭಾಷಣವು ಹೊರಡ ಬೇಕು ? ಅನೃತವೇ ಹೊರಡಬೇಕು. ಆದರೆ, ಅವೃತಾಲಾಪಕ್ಕೆ ಇಲ್ಲಿ ಸ್ಥಳ ವಿಲ್ಲ, ಎಲ್ಲವೂ ಅಂಗೈನೆಲ್ಲಿಯ ಕಾಯಾಗಿ ತೋರುವಂತೆ, ಧರ್ಮಪಾಲನು ಪ್ರತಿಕಾರ-ಸ್ಥಿತಿ-ಗತಿ-ಸ್ವರೂಪವನ್ನೂ ಪ್ರದರ್ಶನಕ್ಕೆ ತರುವುದರಲ್ಲಿರುವನು. ಇನ್ನು ಒಪ್ಪದೆ ವಾದಿಸುವುದರಿಂದ ಫಲವೇನು ? ಬಹುಕಾಲದಿಂದ ಬಂದ ಗುಣವನ್ನು ಒಂದೇತಡವೆಗೆ ಬಿಡುವುದೆಂದರೆ ಸಾಧ್ಯವಲ್ಲ, ಆದರೂ, ಅನಿ ರ್ವಾಹ ಪಕ್ಷಕ್ಕಾಗಿ ಯಶವಂತನು ನಿಜವನ್ನೇ ಹೇಳಬೇಕಾಗಿ ಬಂದಿತು. ಕಡೆಗೆ ವಿವರ್ಣಮುಖದಿಂದ-ವಿಕೃತಸ್ವರದಿಂದ ಹೇಳಲಾರಂಭಿಸಿದನು. ' ಲೋಕದಲ್ಲಿ, ತಾಯ್ತಂದೆಗಳಂತೆ ಮಕ್ಕಳೂ ಆಗುವರೆಂಬುದು ನಿಜವಾದ ಮಾತು, ನಮ್ಮ ತಾಯಿಯ ಸೌಶೀಲ್ಯವನ್ನು ಗಂಗಾಬಾಯಿ ಯು ತಕ್ಕಮಟ್ಟಿ ಗೂ ಅನುಸರಿಸಿದಳು. ನಾನು ನನ್ನ ತಂದೆಯನ್ನೇ ಹೋಲುತ್ತಿರುವೆನೆಂದು ಹೇಳಬಹುದು, ನನ್ನ ಚರಿತ್ರೆಯು ಕೇವಲ ಕು ತವಾದುದು, ಅದನ್ನು ಕೇಳುವುದೆಂದರೂ ಅಸಹ್ಯವಾಗಿಯೇ ತೋರು ಇದು, ಆದರೂ, ಈಗ ಹೇಳಲೇಬೇಕಾಗಿ ಬಂದಿರುವುದರಿಂದ ಮೊದಲೇ ಕ್ಷಮೆಯನ್ನು ಕೇಳಬೇಕಾಗಿದೆ ?