ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

او د ಸ - ಹಿತ್ಯ ಷಿ ಣಿ ರಾಧಾನಾಧ-ಹೇಳು, ಹೇಳು ನಿನ್ನ ನಡೆ-ನುಡಿ-ವಿಚಾರಗಳೂ, ಅವಕ್ಕಾ ಗುವ ಪರಿಣಾಮಗಳೂ ನಮ್ಮ ಮುಂದಿನ ಸೊಕ್ಕಿನಮಕ್ಕಳಿಗೆ ಎಚ್ಚರಿಕೆಯನ್ನುಂಟುಮಾಡುವುವೆಂದು ನಂಬುವೆನು. ಯಶವಂತನು ಇದ್ದುದರಲ್ಲಿ ತಕ್ಕಮಟ್ಟಿಗೆ ಧೈರ್ಯಹೊಂದಿ, ಹೇಳಲು ಮೊದಲು ಮಾಡಿದನು. “ ಈ ಬಲವಂತನೇ ನನ್ನ ತಂದೆ, ಸುಪಂಧನು ನನ್ನ ತಮ್ಮನು. ಗಂಗೆಯೇ ನನ್ನ ಒಡಹುಟ್ಟಿದ ತಂಗಿಯಾಗಬೇಕು, ನಾನು ಈ ವರೆಗೂ ನಮ್ಮ ಈ ಸಂಬಂಧವನ್ನು ಯಾರಿಗೂ ಹೇಳಬಾರದೆಂದು ಸಂಕಲ್ಪಿಸಿದ್ದೆನು. ಜಮಾನ್ದಾರರ ಸ್ವತ್ತೆಲ್ಲವನ್ನೂ ಹೊತ್ತು ಹಾಕಬೇಕೆಂಬುದೇ ನಮ್ಮ ಮು ಜ್ಯೋದ್ದೇಶವಾಗಿದ್ದಿತು. ಇದಕ್ಕಾಗಿಯೇ ಮೊದಲು, ತಂದೆಯಿಂದ ಪ್ರೇರಿತನಾಗಿ ನಾನೊಬ್ಬನೇ ಬಂದು, ಜಮಾನ್ದಾರರಲ್ಲಿ ಆಶ್ರಯಿಸಿ, ನಾಲ್ಕಾರು ತಿಂಗಳಲ್ಲಿಯೇ, ನನ್ನ ಚಟುವಟಿಕೆಯಿಂದ ಇವರನ್ನು ತೃಪ್ತಿ ಪಡಿಸಿ, ಸರ್ವಾಧಿಕಾರವನ್ನೂ ವಹಿಸಿ ನಿಂತೆನು, ಆ ಬಳಿಕ ಅಡಿಗೆ ಪರಿಚಾ ರಕರು ಮೊದಲಾಗಿ, ಕರಣಿಕ-ಗೊಲ್ಲರವರೆಗೂ ನಮ್ಮವರನ್ನೇ ಕರೆಯಿಸಿ ಕೊಂಡು, ಮನೆಯಾಡಳಿತವೆಲ್ಲವನ್ನೂ ನಾನೇ ನೋಡಿಕೊಳ್ಳುತ್ತ ಬಂದೆನು. ಇಷ್ಟರಲ್ಲಿ ಸುನಂದಾಬಾಯಿಯು, ಪ್ರಸುವಕ್ಕಾಗಿ ತವರ್ಮನೆಗೆ ಹೋದು ದರಿಂದ, ನಮ್ಮ ಕಾಠ್ಯಕ್ಕೆ ಮತ್ತೂ ಅನುಕೂಲವೇ ಆಯಿತು. ಆ ಸಂದ ರ್ಭದಲ್ಲಿಯೇ ಗಂಗೆಯನ್ನೂ ವಿಷಹರಪುರಕ್ಕೆ ಕರೆಯಿಸಿ, ನಮ್ಮ ಮನೆಯ ಳಿಗದವಳೊಬ್ಬಳ ಜತೆಯಲ್ಲಿ ಬೇರೆಯಾಗಿರಿಸಿ, ಅವರ ಪೋಷಣೆಗೆ ನಾನೇ ನಿಂತೆನು. ಅಷ್ಟರಲ್ಲಿಯೇ ಸುನಂದಾಬಾಯಿ ಮತ್ತು ಅವಳ ಮಗನು ಸತ್ತ ರೆಂಬ ವರ್ತಮಾನವೂ ನಮ್ಮ ತಂದೆಯಿಂದ ಕೊಡಲ್ಪಟ್ಟಿತು. ಅದುಮೊ ದಲು ದುರ್ಗಾಪುರಕ್ಕೆ ಹೋಗುತ್ತಿದ್ದ ಪ್ರತಿಯೊಂದು ಪತ್ರಗಳನ್ನೂ ನಾನೇ ಬರೆಯುತ್ತಿದ್ದೆನು, ಅಲ್ಲಿಂದ ಬರುತ್ತಿದ್ದ ಪತ್ರಗಳು ನನ್ನ ಕೈಬಿಟ್ಟು ಅನ್ಯರ ಬಳಿಗೆ ಹೋಗದಂತೆ ಬಹು ಜಾಗರೂಕತೆಯಿಂದ ತಕ್ಕ ಏರ್ಪಾಟು ಮಾಡಿದ್ದೆನು.