ಪುಟ:ದಕ್ಷಕನ್ಯಾ .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೨೩೭ ರಾಧಾನಾಧ- ಪತ್ರವ್ಯವಹಾರವೇನೋ ನಿನ್ನ ಮೂಲಕವೇ ನಡೆಯುತ್ತಿ ದ್ವಿತು ; ಅದರಿಂದ ತಿಳಿಯಲಿಲ್ಲ. ಆದರೆ, ದುರ್ಗಾಪುರದಿಂದ ಯಾರೂ ಬಂದು ನೋಡಿ -ಹೇಳಿ, ಹೋಗುತ್ತಿರಲಿಲ್ಲವೇ ? ಅವರಿಂ ದಲಾದರೂ ನಿಜಾಂಶವು ತಿಳಿಯದಿದ್ದಿತೇ ? ಯಶವಂತ - ಯಜಮಾನರ ಸ್ವಭಾವವು ಕೇವಲ ವಿರಕ್ತವೃತ್ತಿಯಲ್ಲಿದ್ದು ದರಿಂದಲೂ, ಅವರು ನನ್ನಲ್ಲಿ ಪೂರ್ಣವಾದ ಭರವಸೆಯಿಟ್ಟು, ಯಾವ ಕೆಲಸವನ್ನಾಗಲೀ, ಯಾರೊಡನೆ ಮಾತನಾಡುವುದನ್ನಾ ಗಲೀ-ಮೊದಲು ನನಗೆ ಬಂದು, ಆ ಬಳಿಕ ತಮಗೆ ಬರುವಂತೆ ಕಟ್ಟು ಮಾಡಿದ್ದುದರಿಂದಲೂ ನನ್ನ ಉದ್ದೇಶಕ್ಕೆ ಆ ನಡುವೆ ವಿಘ್ನ ವೇನೂ ಒದಗಲಿಲ್ಲವಾಯಿತು. ರಾಧಾನಾಧ– ಹೋಗಲಿ, ಮೊದಲು ಜಮೀನ್ದಾರರ ಪೆಟ್ಟಿಗೆಯನ್ನೂ, ಭಾವಚಿತ್ರವನ್ನೂ ಕದ್ದುದು ನಿನ್ನ ಕೆಲಸವಷ್ಟೆ ; ಹೇಗೆ ? ಕಿರುಮ ನೆಯ ಬಾಗಿಲನ್ನು ತೆರೆದುಹಾಕಿದ್ದವರಾರು ? ಯಶವಂತ-ಜಮಾನ್ದಾರರ ಮನೆಗೆ ಸಂಬಂಧಪಟ್ಟ ಪ್ರತಿಯೊಂದು ಕಳು ವೂ ನನ್ನಿಂದಲೇ ನಡೆಯಿಸಲ್ಪಟ್ಟುದು, ವಾಸುದೇವರಾಯನಿಗೆ ವಾಗ್ದಾನವಿತ್ತ ಬಳಿಕ, ಅವರ ಕೈಕೆಳಗಿನವರನ್ನು ನನ್ನ ಕೈವಶ ಪಡಿಸಿಕೊಂಡೆನು, ಆ ರಾತ್ರಿ, ಜಮೀಾನ್ಮಾರರು ಮಲಗುವ ಕಿರು ಮನೆಯ ಕಿಟಕಿಯ ಕದವನ್ನೂ, ಹೊರಗಡೆಯ ಬಾಗಿಲನ್ನೂ ನಾನೇ ತೆಗೆದವನು. ಆ ತಂತ್ರವು ನನಗೆ ತಿಳಿದಿದ್ದ ವಿಚಾರವು ಯಾರಿಗೂ ತಿಳಿಯದು. ಅವರ ಬಳಿಯಲ್ಲಿದ್ದ ಭಾವಚಿತ್ರವನ್ನೂ, ಮತ್ತು ಇತರ ಪೆಟ್ಟಿಗೆಯ ಬೀಗದಕೈಗಳನ್ನೂ, ಕಾಗದಪತ್ರಗ ಇನ್ನೂ ನಾನೇ ಕದ್ದೆನು, ನನ್ನ ಹೇಳಿಕೆಯಂತೆಯೇ ಗೋಪಾಲನೂ, ಮತ್ತೊಬ್ಬನೂ ಮುಸಲ್ಮಾನರ ವೇಷವನ್ನು ಧರಿಸಿಬಂದರು. ಅವ ರನ್ನು ನಾನು ಒಳಗೆ ಕರೆದುಕೊಂಡು, ಅಷ್ಟರಲ್ಲಿಯೇ ಸಿದ್ಧ ಪಡಿ