ಪುಟ:ದಕ್ಷಕನ್ಯಾ .djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಸ ತಿ ಹಿ ತ ಷಿ ಣಿ ಸಿದ್ದ ಪದಾರ್ಥಗಳನ್ನು ತಲೆಯಮೇಲೆ ಹೊರಿಸಿ, ಅಡಿಗೆಯವ ರನ್ನೂ , ಪರಿಚಾರಕರನ್ನೂ ಕಿರುಮನೆಯಲ್ಲಿ ಕೂಡಿ, ನನ್ನನ್ನೂ ಮಂಚಕ್ಕೆ ಕಟ್ಟಿ ಹಾಕಿ, ಹಿತ್ತಲ ಗೋಡೆಯನ್ನು ಹಾದುಹೋಗು ವಂತೆ ಹೇಳಿದೆನು, ಅವರು ಹಾಗೆಯೇಮಾಡಿದರು. ಜಮಾದಾರರ ಕೈಕೆಳಗಿನ ನಾಲ್ವರು ಜವಾನರಿಂದ ಮುಸಲ್ಮಾನ ಪ್ರಕರಿಗಳನ್ನು ಹಿಡಿಯಿಸಿ, ಗುಡ್ಡಕ್ಕೆ ಕಳುಹಿದೆನು. ರಾಧಾನಾಧ- ತಲೆದೂಗುತ್ತ- ಸುನಂದಾಬಾಯಿಯು, ಮಕ್ಕಳೊಡನೆ ಬರುತ್ತಿದ್ದ ದಾರಿಯಲ್ಲಿ ನಡೆದ ದರೋಡೆಯ ನಿನ್ನ ಹೇಳಿಕೆಯಿಂ ದಲ್ಲವೇ ? ಜಮೀನ್ದಾರರ ಮಗಳನ್ನು ಮಾತ್ರ ಹೊತ್ತು ಹಾಕಿ, ಮಗನನ್ನು ಕೊಲ್ಲುತ್ತಿದ್ದುದಕ್ಕೂ, ಅವರ ಪತ್ನಿಯನ್ನು ಬಿಗಿದು ಕಟ್ಟಿ ಹಾಕಿದ್ದು ದಕ್ಕೂ ಕಾರಣವೇನು ? ಯಶವಂತ-ಸುನಂದಾಬಾಯಿಯು ಜೀವಿಸಿರುವ ಸಂಗತಿಯನ್ನು ಇವರು ತಿಳಿದಮೇಲೆ, ಶ್ರೀದತ್ತ ಕುಮಾರರ ಸಹಾಯದಿಂದ ಅವರನ್ನು ಕರೆಯಿಸಿಕೊಳ್ಳುವ ಪ್ರಯತ್ನ ಮಾಡಿದರು. ಅವರು ಬಂದರೆ, ನಮ್ಮ ಉದ್ದೇಶವೂ, ಇಷ್ಟು ದೀರ್ಘಕಾಲ ಪಟ್ಟ ಪ್ರಯಾಸವೂ, ನಿಷ್ಪಲ ವಾಗುವುದಲ್ಲದೆ, ನಮ್ಮ ಅಭಿಸಂಧಿಯ ಹೊರಬೀಳುವುದೆಂದು ಶಂಕಿಸಿ, ಅವರನ್ನು ನಡುದಾರಿಯಲ್ಲಿಯೇ ಪೂರೈಸಿಬಿಡುವಂತೆ ಗೊಲ್ಲರಪಾಳ್ಯಕ್ಕೆ ವರ್ತಮಾನವನ್ನು ಕಳುಹಿದೆನು. ಎಂದೆಯ ರೂಪು-ಗುಣ-ವಿದ್ಯಾ-ಬುದ್ಧಿ ಶಕ್ತಿಗಳನ್ನು ನೋಡಿ ಅವಳನ್ನು ಕೊಲ್ಲಲಿಕ್ಕೆ ಮನವೊಪ್ಪದೆ, ನನ್ನ ತಮ್ಮನಿಗೆ ಮದುವೆ ಮಾಡಬೇಕೆಂದು ಸಂಕಲ್ಪಿಸಿ ಕದ್ದೊಯಲಾಗಿದ್ದಿತು. ಮೋಹನ ಕುಮಾರನನ್ನು ಕೊಲ್ಲಬೇಕೆಂದಿದ್ದುದು, ಜಮೀನ್ದಾರರ ಸ್ವತ್ತಿಗೆ ಮತ್ತಾವ ಹಕ್ಕುದಾರರೂ ಇರದಂತೆ ಮಾಡಬೇಕೆಂಬ ಉದ್ದೇಶ ದಿಂದಲೇ ! ಸುನಂದಾದೇವಿಯನ್ನು ಬಿಗಿದುಕಟ್ಟಿದ್ದು ದಕ್ಕೆ ಕಾರ