ಪುಟ:ದಕ್ಷಕನ್ಯಾ .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪o ಸ ತಿ ಹಿ ತೃ ಷಿ ಣಿ ಕ್ಯಾಗಿ ದುರ್ಗಾಪುರದಿಂದ ಕಳುಹಿದಂತೆ ಕಾಗದವನ್ನು ಬರೆದು ಆಳಿನ ಕೈಯ್ಯಲ್ಲಿರಿಸಿ, ಅವನ ಮತ್ತೊಂದು ಕಾಗದದಲ್ಲಿ ತಮ್ಮ ಉದ್ದೇಶವನ್ನೂ ಸೂಚಿಸಿ, ಅದನ್ನು ನನಗೇ ಕೊಡುವಂತೆ ಅಟ್ಟಿ ದರು. ನಾನದನ್ನು ನೋಡಿದ ಬಳಿಕ, ಗಾಳಿಸಂಚಾರಕ್ಕಾಗಿ ತೋ ಟದಕಡೆಗೆ ಹೋಗಿದ್ದ ಒಮಾನ್ದಾರರ ಬಳಿಗೆ ಆಳನ್ನು ಕಳಿಸಿದೆನು. ಅವರದನ್ನು ನೋಡಿ ಭೀತರಾಗಿ ಹಾಗೆಯೇ ಅಲ್ಲಿಂದ ಗಂಗಾಬಾ ಯಿಗೆ ಕಾಗದವನ್ನು ಬರೆದು, ಅದೇ ಆಳಿನ ಕೈಯಲ್ಲಿತ್ತು ಕಳುಹಿ, ತಾವು ಹಾಗೆಯೇ ದುರ್ಗಾಪುರಕ್ಕೆ ತೆರಳಿದರು. ಅದೇ ಆಳಿನ ಮೂಲಕವೇ ಜಮೀನ್ದಾರರ ವಧೆಗೆ, ಮೊದಲು ಮಾಡಬೇಕಾದ ಕ್ರಮಗಳನ್ನು ಸೂಚಿಸಿ ಕಳಿಸಿ, ಆ ರಾತ್ರಿಯೇ ವಾಸುದೇವರಾಯನನ್ನು ಜತೆಗೊಂಡು ನಾನೂ ತೆರಳಿದೆನು. ಅಲ್ಲಿಗೆ ಹೋಗಿ ಸೇರುವುದರೊಳಗಾಗಿ ಎಲ್ಲವೂ ಸಿದ್ಧವಾಗಿದ್ದಿತು. ಅಲ್ಲಿ ನಡೆದ ವಿಚಾರಗಳೇನೆಂಬುದನ್ನು ಮಾತ್ರ ನಾನು ಹೇಳಲಾರೆನು. ಕೃತಾಂತನ ವಾಲ್ಯೂಲವು ಸತ್ಯವಾದುದೆಂಬುದನ್ನು ಮನಸ್ಸಾ ಕ್ಷಿಯಾಗಿ ಒಪ್ಪಿಕೊಳ್ಳುವೆನು, ಅವೆಲ್ಲವೂ ನಿಜವಾಗಿಯೂ ನಡೆದ ವಗಳಾಗಿವೆ. ರಾಧಾನಾಧ- ಸ್ವಾರಸ್ಯವಾಗಿದೆ. ನಿನ್ನ ಜೀವಿತವೃತ್ತಾಂತವು ಬಹ ಸ್ವಾರಸ್ಯವಾಗಿದೆ. ಇದರ ಸವಿಯು, ಮುಂದೆ ತಿಳಿಯುವುದು. ಆಗಲಿ, ಇನ್ನು ಬಲವಂತರಾಯರ ಚರಿತ್ರೆಯೊಂದೇ ಉಳಿದ ತಿದೆ, ಅದೂ ಆಗಲಿ. ಯಶವಂತ-ವಾಸುದೇವರಿಬ್ಬರೂ ಮರುಮಾತಿಲ್ಲದೆ ಸುಮ್ಮ ನಾಗಿ, ಸರಿದುನಿಂತರು. ಆಗಲೀಗ ಅವರ ಗರ್ವಭಂಗವಾಯಿತೆಂದು ನಿರ್ಧ ರವಾಗಿ ಹೇಳಬಹುದು.