ಪುಟ:ದಕ್ಷಕನ್ಯಾ .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

واد ಶ೩ ಹಿ – ಷಿ ಣಿ ನನ್ನ ಯಾವತ್ತವನ್ನೂ ವಿವರಿಸಿ, ಮನಃಕ್ಷೇಶದಿಂದ ಬಿಡುಗಡೆಯಾಗ: ಬೇಕೆಂದು ನಿಶ್ಚಯಿಸಿ ಹೇಳುತ್ತಿರುವೆನು ; ಆಗ್ರಹಿಸದೆ ಅವಧರಿಸಬೇಕೆಂ ಬುದೇ ನನ್ನ ಪ್ರಾರ್ಥನೆ. - ನನ್ನ ಜನ್ಮ ಸ್ಥಳವು ರಾಜಮಹೇಂದ್ರಪುರ, ನನ್ನ ತಾಯಿತಂದೆ. ಗಳು ಸತ್ಕುಲಪ್ರಸೂತರೂ, ಸತ್ಯಾಚಾರ ಸಂಪನ್ನ ರೂ ಆಗಿದ್ದ ಶ್ರೀಮಂ ತರು, ನನ್ನ ಒಡಹುಟ್ಟಿದವರು ನಾಲ್ಕಾರುಮಂದಿಯಿದ್ದರೂ, ಅವರೆಲ್ಲರೂ ತಮ್ಮ ಅಲ್ಪ ವಯಸ್ಸಿನಲ್ಲಿಯೇ ಮಾತಾಪಿತೃಗಳನ್ನ ಗಲಿ, ಮೃತ್ಯುವಶರಾದರು, ಕಡೆಗೆ ನಾನೊಬ್ಬನೇ ಉಳಿದೆನು. ಸಾಮಾನ್ಯವಾಗಿ ಹಣಗಾರರ ಮಕ್ಕಳೇ ಅಭಿಮಾನಪರರಾಗುವ. ರಲ್ಲವೇ ? ಹಾಗೂ ಹೆತ್ತ ಮಕ್ಕಳೆಲ್ಲವನ್ನೂ ಮೃತ್ಯುದೇವತೆಗೆ ಹೊರೆಯಿತ್ತು, ಒಬ್ಬನೇ ಒಬ್ಬನಾಗಿ ನಿಂತ ನನ್ನ ವಿಷಯದಲ್ಲಿ, ಅವರ ಮಮತೆಯೆಂಬು ದನ್ನು ಹೇಳಬೇಕೆ ! ಅವರೇನೋ ಗುಣಸಂಪನ್ನರಾಗಿದ್ದರೂ, ಪುತ್ರ ಸ್ನೇಹ ವೆಂಬ ಮಾಯಾಪಾಶಕ್ಕೆ ಸಿಕ್ಕಿ, ನನ್ನನ್ನು ದಂಡಿಸುವ ಮಾತನ್ನಾದರೂ ಎತ್ತದೆ, ಅತಿಯಾದ ಲಾಲನೆಯಿಂದ ಮನಬಂದಂತೆ ಬಿಟ್ಟರು, ಸಹವಾಸ ವಾದರೂ ಸರಿಯಾಗಿಸೇರಿದ್ದರೆ, ನಾನೂ ಸನ್ಮಾರ್ಗದಲ್ಲಿರುತ್ತಿದ್ದೆನು, ಅದೂ ನನ್ನ ಪಾಲಿಗೆ ದುರ್ಲಭವಾಗಿ, ನನಗೂ ಹೆಚ್ಚಾದ ದುಷ್ಟರೇ ನನ್ನ ಜತೆಗೆ ಸೇರಿದರು. ಮೊದಲೇ ಧನದಮದ; ಜತೆಗೆ ಕುಲೀನತೆಯ ಮದವೂ ಸೇರಿದೆ. ಅವು ಸಾಲದೆಂದು ಪ್ರೋತ್ಸಾಹವೂ, ತಕ್ಕಷ್ಟು ಸಹಾಯಗಳೂ ದೊರೆತರೆ' ಕೇಳತಕ್ಕುದೇ ಇಲ್ಲ. ನನ್ನ ವಿದ್ಯಾವ್ಯಾಸಂಗಕ್ಕಾಗಿ `ತೆ ಹಣವೆಲ್ಲವೂ ಹೆಂಡದಂಗಡಿ, ಜೂಜಿನ ಚಾವಡಿ, ಸೂಳೆಯರ ಮೇಳ, ಹೊಟೇಲಿನ ಸಡ ' ಗರ, ಕ್ಷೌರಕನ ಪೆಟ್ಟಿಗೆ-ಇವುಗಳಿಗೇ ಸಾಲದಂತಾಗಿದ್ದಿತು. ಇದಕ್ಕಾಗಿ, ನಾನು ಮನೆಯಲ್ಲಿದ್ದ, ಕೈಗೆ ಸಿಕ್ಕಿದ ಪಾತ್ರೆ ಪದಾರ್ಥಗಳನ್ನೂ, ಒಡವೆ ವಸ್ತುಗಳನ್ನೂ ಕದ್ದೊಯ್ತು, ನನ್ನ ಅಗಾಗಿನ ದಾಹವನ್ನು ತೀರಿಸಿಕೊ. ಇುತ್ತಿದ್ದೆನು. ಇದನ್ನು ತಿಳಿದು, ನನ್ನ ತಾಯಿತಂದೆಗಳು ನನಗೆ ಬಹುವಿಧು