ಪುಟ:ದಕ್ಷಕನ್ಯಾ .djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೨೪೫ ದ ಕ ಕ ನ್ಯಾ ಹಿಡಿದು, ಯಾವಾಗಲೂ ನನ್ನ ಬಳಿಯಲ್ಲಿಯೇ ಇದ್ದು, ಬೆಳೆದ ಕೆಲವುಮಂದಿ ಆಪ್ತ ಸೇವಕರನ್ನು ಜತೆಗೊಂಡು, ರಾತ್ರಿ ವೇಳೆಯಲ್ಲಿ ಯಾರಿಗೂ ಸೂಚಿಸ ದಂತೆ ನನ್ನಲ್ಲಿದ್ದ ಒಡಕುಪಾತ್ರೆಗಳನ್ನು ಬಂಡಿಯಲ್ಲಿ ತುಂಬಿಸಿ, ಮಕ್ಕ ಳನ್ನೂ ಕರೆದುಕೊಂಡು ದೇಶಸಂಚಾರಕ್ಕೆ ಹೊರಟೆನು. ದೇಶಸಂಚಾರದಲ್ಲಿ ನಾನು ಉದರನಿಮಿತ್ತವಾಗಿ ಅನೇಕ ಹಗಲು ವೇಷಗಳಿಂದ ಜನಗಳನ್ನು ಮರುಳುಮಾಡಿ, ಧನಸಂಗ್ರಹಮಾಡುತ್ತ ಬಂದೆನು. ಇದರಿಂದ ನನಗೆ ಧನಾರ್ಜನೆಯಲ್ಲಿ ಅತಿಯಾದ ದಾಹವುಂಟಾಯಿತು. * ಧನದಾಹವು ಬಹುಪಾಸಿ' ಎಂಬುದನ್ನು ಧನಪಿಶಾಚಗ್ರಸ್ತನಾದ ನಾನು ತಿಳಿಯಲಾರದೆ ಹೋದೆನು. ಅದಕ್ಕಾಗಿಯೇ ನನ್ನ ದೇಹಸೌಖ್ಯ-ಸಂತೋ ಷಕೂಟಗಳನ್ನು ತೊರೆದೆನು ; ಜೋರಮಾರ್ಗವನ್ನು ಅಭ್ಯಾಸಕ್ಕೆ ತಂದೆನು. ಇಷ್ಟು ಸಾಹಸಪ್ರಯತ್ನದಿಂದ, ತಸ್ಕರವಿದ್ಯಾನೈಪುಣ್ಯವನ್ನು ಹೊಂದಿದ ನಾನು, ಕಡೆಗೆ, ಗೊಲ್ಲರಪಾಳ್ಯಕ್ಕೆ ಬಂದು ಸೇರಿದೆನು. ಗೊಲ್ಲರಪಾಳ್ಯಕ್ಕೆ ಬಂದ ಬಳಿಕ ನಾನು ಸುಮ್ಮನಿರಲಿಲ್ಲ, ಪಾಳು ಬಿದ್ದಿದ್ದ ಕಟ್ಟಡವೊಂದನ್ನು ಕೊಂಡುಕೊಂಡು, ಅದನ್ನು ಸತ್ರವೆಂದು ಪ್ರಸಿದ್ದಿ ಪಡಿಸಿ, ಜನರನ್ನು ಸುಲಭವಾಗಿ ನನ್ನ ದಾರಿಗೆ ಸೆಳೆಯುತ್ತ ಬಂದೆನು. ಆ ಊರಿನವರನ್ನು ಕ್ರಮಕ್ರಮವಾಗಿ ಸವಿಮಾತುಗಳಿಂದಲೂ, ಸವಿಭೋ ಜನಗಳಿ೦ದಲೂ, ಉಚಿತ ಸನ್ಮಾನಗಳಿಂದಲೂ ಅಡಿಗಡಿಗೂ ನಲವೇರಿಸುತ್ತ ಎಲ್ಲರೂ ನನ್ನಲ್ಲಿ ಅನುರಕ್ತರಾಗುವಂತೆ ಮಾಡಿಕೊಂಡೆನು. ಇಷ್ಟರಲ್ಲಿಯೇ ನನಗೆ ಜಮಾನ್ದಾರರ ಬಲವದ್ರೇಶ್ವರ ವೃತ್ತಾಂತವೂ ತಿಳಿದು, ಒಂದೇಸಲ ಅದನ್ನು ಅಪಹರಿಸಬೇಕೆಂಬ ದುರ್ಭಾವನೆಯುಂಟಾಯಿತು. - ನಮ್ಮದಾದ ವಸ್ತುಗಳನ್ನು ಉಳಿಸಿಕೊಳ್ಳಬೇಕಾದರೂ, ನಾವು ಬಹು ಪ್ರಯಾಸಪಡಬೇಕು. ಹಾಗಿರುವಲ್ಲಿ, ಅನ್ಯರ ಸ್ವತ್ತನ್ನು,-ಹಾಗೂ ಅಖಂಡವಾದ, ಅಪಾರವಾದ ಭೂಸ್ವತ್ತನ್ನು ಅಪಹರಿಸುವುದೆಂದರೆ, ಸುಮ್ಮ ನಾದೀತೇ ? ಇದಕ್ಕಾಗಿ ನಾನು ಹಲವು ಉಪಾಯಗಳನ್ನು ಹುಡುಕಬೇ