ಪುಟ:ದಕ್ಷಕನ್ಯಾ .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೮ ಸ ತಿ ಹಿ ತೃ ಷಿ ಣಿ ಯಿಂದ ಎದ್ದು ಬಂದು, ನ್ಯಾಯವಿಚಾರಕರ ಮುಂದಿದ್ದ ಪೆಟ್ಟಿಗೆಯ ಕದ ವನ್ನು ತೆಗೆದು, ಒಳಗಿದ್ದ ಮಾಲುಗಳನ್ನೂ, ಯಂತ್ರ-ಚಿತ್ರ ಮತ್ತು ಪತ್ರಗ ಇನ್ನೂ ಕ್ರಮಕ್ರಮವಾಗಿ ತೆಗೆದು ಮೇಜಿನಮೇಲಿರಿಸಿ, ಘನಘಂಭೀರಸ್ವರ ದಿಂದ ಹೇಳಿದನು, ಈವರೆಗೂ ನ್ಯಾಯಪೀಠಕ್ಕೆ ವಿದಿತವಾಗಿರುವ ವಿಚಾರಗೆ ಳೆಲ್ಲವೂ ಇದರಿಂದ ಪ್ರಮಾಣಿಸಲ್ಪಡಬಹುದು, ಯಶವಂತನು ಜಮೀಾನ್ನಾ ರರ ಹೆಸರಿನಿಂದ ಬರೆಯುತ್ತಿದ್ದ ಸುಳ್ಳು ಕಾಗದಪತ್ರಗಳೂ, ಕೊಲೆ-ಸುಲಿಗೆ ಗಳಿಗಾಗಿ ಮಾಡಬೇಕಾದ ಕಾರ್ಯಗಳಿಗೆ ಕೊಟ್ಟ ಸೂಚನೆಗಳೂ ಇಲ್ಲಿರುವ ಪತ್ರಗಳಲ್ಲಿರುವುವು, ಕದ್ದೊಯ್ದಿದ್ದ ವಸ್ತುಗಳೂ, ಕಳವಿಗಾಗಿ ಮಾಡಿದ್ದ ಸಾಧನಗಳೂ ಇಲ್ಲಿ ಬೇರೆಬೇರೆಯಾಗಿ ಇಡಲ್ಪಟ್ಟಿರುವುವು. ಇವರ ಕುತಂ ತ್ರವು ಭೇದಿಸಲ್ಪಟ್ಟ ಕಾಲದಲ್ಲಿ ನಡೆದ ವಿಧಾನವೂ, ಆಗಿನ ಇವರ ಕುಶ್ಚಿತ ಕಾರ್ಯಗಳೂ ಮತ್ತು ಇವರ ಆಕೃತಿ, ಪ್ರಕೃತಿ, ವೈಚಿತ್ರಗಳೂ ಇವರ ವಾಗ್ತಾರವಾಗಿ ಹೊರಬಿದ್ದ ದುರ್ಭಾಷೆಗಳೂ ಛಾಯಾಗ್ರಾಹಿ ಮತ್ತು ಶಬ್ದ ಗ್ರಾಹಿ ಯಂತ್ರಗಳ ಮೂಲಕವಾಗಿ ಪರಿಶೋಧಿಸಲ್ಪಟ್ಟು ತಿಳಿಯ ಬಹುದು. ಇನ್ನೂ ಹೇಳುವುದೇನೆಂದರೆ-ಸಕಲವಿಧವಾದ ಸುಖದುಃಖಗಳಿಗೂ ಪಾಪಪುಣ್ಯಗಳೇ ಕಾರಣವು, ಸಮಸ್ತವಾದ ಪಾಪಪುಣ್ಯಗಳಿಗೂ ಸ್ತ್ರೀ ಯರ ಸದ್ವರ್ತನ-ದುರ್ವತ್ರನಗಳೇ ಮೂಲವು, ಸದ್ವರ್ತನಕ್ಕೆ ಅವರ ಕರ್ತ ವ್ಯ ಕ್ಷಮತೆಯೇ ಆಧಾರವು, ಕರ್ತವ್ಯ ಕ್ಷಮತೆಗೆ ಆತ್ಮ ಸ್ವರೂಪಜ್ಞಾನವೇ ಶಾಂತಿಪ್ರದವಾದುದು, ಅದಾದರೂ ಸುಶಿಕ್ಷಾ ರೂಪದ ವಿದ್ಯಾ ಧನದಲ್ಲಿಯೇ ನೆಲೆಗೊಂಡಿರತಕ್ಕುದು ಇದರ ಉದಾಹರಣೆಗೆಂದರೆ, ಗಂಗಾಬಾಯಿಯು. ವಿದ್ಯಾವತಿಯೆನ್ನಿಸಿದ್ದ ರೂ-ಸಾಧನಬಲವೂ, ಸ್ಥಿರಪ್ರಜ್ಞೆಯೂ ಇಲ್ಲದಿದ್ದು ದರಿಂದಲೇ ಜಮಾನ್ದಾರರ ಸಂಸಾರಕ್ಕುಂಟಾದ ಇಷ್ಟು ಅನರ್ಧಕ್ಕೂ ಅವಕಾಶವಾಯಿತು. ಅವಳಲ್ಲಿ ಇತಿಕರ್ತವ್ಯತೆಯು ಚೆನ್ನಾಗಿ ಸ್ಪುರಿಸುತ್ತಿ ದ್ದರೆ, ಮನೆಯಲ್ಲಿದ್ದ ಮೃತ್ಯುವನ್ನು ಹೊರಡಿಸುವಷ್ಟರ ದಕ್ಷತೆಯ