ಪುಟ:ದಕ್ಷಕನ್ಯಾ .djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೯ ದ ಕ ಕ ನ್ಯಾ ಆಗಲೇ ಉಂಟಾಗುತ್ತಿದ್ದಿತು. ಆದರೆ, ಅದು ಕಡೆಯಲ್ಲಿ ಯಾದರೂ ತನ್ನ ಶಕ್ತತೆಯನ್ನು ಪ್ರದರ್ಶಿಸದೆ ಬಿಡಲಿಲ್ಲವಾದುದರಿಂದ, ಕಷ್ಟ ನಿವಾರಣೆಗೆ ಸಾಧನವಾದರೂ ಗಂಗಾಬಾಯಿಯ ಸ್ಥಿರಪ್ರಜ್ಞೆಯೆಂಬುದು ನಿರ್ಧರವಾ ಯಿತು. ಗಂಗಾಬಾಯಿಯಲ್ಲಿ ಕರ್ತವ್ಯ ಜ್ಞಾನವು ಜಾಗೃತವಾಗುವವರೆಗೂ, ಗೋಪಾಲನ ಸ್ವಾಮಿದ್ರೋಹ, ಯಶವಂತನ ಕುತವ್ಯಾಪಾರ, ಉಳಿದ ವರ ಮಾಯಾಜಾಲಗಳು ಅಷ್ಟಿಷ್ಟಾಗಿ ಬಾಧಿಸುತ್ತಿದ್ದುವು. ಅಲ್ಲಿಂದ ಮುಂದೆ ಅದರ ಹುಟ್ಟಿ ಅಡಗುವಂತಾಗಿ ಹೋಯಿತು, ಇದಕ್ಕೂ ಹೆಚ್ಚಿದ. ನಿದರ್ಶನವಿನ್ನೇಕೆ ? ಇಷ್ಟು ಹೇಳಿದರೆ ಸಾಕು. ಈ ಮಕ್ಕಳಿಗೆ ಬಾಲ್ಯದಿಂದಲೂ ಕರ್ತವ್ಯಜ್ಞಾನವಂಕುರಿಸುವಂತೆ ಶಿಕ್ಷೆ ಣೆಯು ದೊರೆಯುತ್ತಿರಬೇಕು, ಇಂತಹ ಉತ್ತಮ ಶಿಕ್ಷಣೆಯಿಂದಲೇ ನಮ್ಮ ಮಕ್ಕಳು ಮಂದಿಗಳೆನ್ನಿಸಿ, ಮಾನ-ಧನ-ಕೀರ್ತಿಗಳನ್ನು ಊರ್ಜಿತ ಪಡಿಸಿ, ದೇಶಕ್ಕೂ, ದೇಶೀಯರಿಗೂ ಮೇಲ್ಕೆಯನ್ನುಂಟುಮಾಡುವವರಾಗು ತಾರೆ, ಇದಕ್ಕೆ ಎಂದೆಯ ಬಾಲ್ಯ ಚರಿತೆಯೇ ನಿದರ್ಶನಕ್ಕೆ ಸಾಕಾಗಿ ತೋರುತ್ತದೆ. ಎಂದೆಯಲ್ಲಿರುವ ದಕ್ಷತೆಯೇ ನಮ್ಮ ಮಹಿಳಾವರ್ಗದಲ್ಲೆಲ್ಲಾ ವ್ಯಾಪಿಸುವ ಪಕ್ಷದಲ್ಲಿ, ವಾಸುದೇವ-ಯಶವಂತ-ಗೋಪಾಲರಂತವರ ಸ್ವಾ ಮಿದ್ರೋಹಕ್ಕೂ, ಬಲವಂತ-ಸುಸಂಧರಂತವರ ಧನದಾಹದ ಪಾಪಾಚರ ಣೆಗೂ ಗಂಡುಮದ್ದಾಗಿ ತಿರುಗಿ, ನಮ್ಮ ಭಾರತಮಾತೆಯ ಯಶಶ್ಚಂದ್ರಿ ಕೆಯು ಮತ್ತೆ ಪ್ರಕಾಶಕ್ಕೆ ಬರುವುದರಲ್ಲಿ ಏನೂ ಸಂಶಯವಿಲ್ಲ, ಇನ್ನು ಈ ವ್ಯಾಜ್ಯದ ವಿಷಯವಾಗಿ ನ್ಯಾಯಪೀಠಕ್ಕೆ ಸರಿತೋರುವಂತೆ ಇತ್ಯರ್ಧ ವನ್ನು ನಿರೂಪಿಸಬಹುದೆಂದು ಸೂಚಿಸಿ ವಿರಮಿಸುವೆನು. ಸರದಾರ್ ಧರ್ಮಪಾಲ (ಶ್ರೀದತ್ತಕುಮಾರ) ನು ಸ್ವಾಭಿಮಾನ ಪೂರ್ವಕವಾಗಿ ಹೇಳಿ ತೋರಿಸಿದ ನ್ಯಾಯಸ್ಥಾಪನೆಯು, ಅಲ್ಲಿದ್ದವರೆಲ್ಲರ.