ಪುಟ:ದಕ್ಷಕನ್ಯಾ .djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಸ ತಿ ಹಿ ತೈ ಷಿ ಣಿ ಕನ್ಯಾ ನಾಮವು ಪ್ರಸಿದ್ಧವಾಗಲೆಂದೂ ಧಮ್ಮಾಧಿಕಾರಿಗಳ ಆಜ್ಞೆಯಾ ಯಿತು, ಸರದಾರ್ ಧರ ಪಾಲನೆಂಬ ಬಿರುದಾಂಕಿತನಾದ ಶ್ರೀದತ್ತಕುಮಾ ರನಿಗೆ, ಆತನ ಅಸಾಧಾರಣ ಗುಣಗಳಿಗೆ ಪ್ರತಿಫಲವಾಗಿ ಗೊಲ್ಲರಪಾಳ್ಯದ ಜಹಗೀರು ಲಭಿಸಿತು, ಪ್ರಯಾಸದ ಫಲಸ್ವರೂಪವಾಗಿ ದಕ್ಷ ಕನೈಯೇ ಧಾರಾಪೂರ್ವಕವಾಗಿ ಕೊಡಲ್ಪಟ್ಟಳು, ಸಾಲದುದಕ್ಕೆ ಬಲವಂತ -ವಾಸು ದೇವರಾಯರ ಸ್ಥಿರಚರ ಸ್ವತ್ತುಗಳೆಲ್ಲವೂ ಧರ್ಮಪಾಲನ ವಶವಾದುವು. ಇನ್ನೇನಾಗಬೇಕು ? ಭೂ-ವನಿತಾ-ವಿತ್ರಗಳೆಂಬ ತ್ರಿವಿಧ ಸಂಪತ್ತೂ ಲಾಭ ವಾದ ಬಳಿಕ ಅಭ್ಯುದಯಕ್ಕೇನು ಕಡಮೆ ? ಜಹಗೀರಾರ್‌ ಶ್ರೀದತ್ತ ಕುಮಾರನು, ದಕ್ಷ ಕನ್ಯಾ (ವಿಂದಾ). ಸಮೇತನಾಗಿ ಪಾಲಕ-ಮಾತೃಸಹಿತ ಗೊಲ್ಲರಪಾಳ್ಯವನ್ನು ಸೇರಿ, ಅಲ್ಲಿಗೆ * ಧರನಗರ' ವೆಂಬ ಅಭಿಧಾನವಿತ್ತು, ಅಲ್ಲಿಯವರೆಲ್ಲರನ್ನೂ ಕಾಲೋಚಿತ ನೀತಿ-ರೀತಿಗಳಿಂದ ಸ್ವಾಧೀನಪಡಿಸಿಕೊಂಡು, ಅಲ್ಲಿ ಅನೇಕ ವಿಧವಾದ ಕಲ್ಮಾ ಗಾರ, ವಿದ್ಯಾಶಾಲೆ, ಸಾಧನಮಂದಿರಗಳನ್ನು ಸ್ಥಾಪಿಸಿ, ಜನರ ಸೋಮಾರಿತ ನಕ್ಕೂ, ದಾರಿದ್ರರೋಗಕ್ಕೂ, ಹೋರತನಕ್ಕೂ ಗಂಡುಮದ್ದೆನ್ನಿಸಿದನು. ರಮಣೀಯವಾದ ಆರಾಮ, ಚಿತ್ರಶಾಲೆ, ಗೀತಾಮಂದಿರಗಳನ್ನೂ ನಿರ್ಮಿ ಸಿದನು. ಹೆಚ್ಚೇಕೆ, ದೇಶೋನ್ನತಿಗೂ, ದೇಶೀಯರಿಗೂ ಯಾವುದು ಕರ್ತವ್ಯ ವೆನ್ನಿ ಸಿರುವುದೋ, ದೇಶ ಭಕ್ತರಿಗೆ ಯಾವುದು ಅವಶ್ಯವಾಗಿ ಮಾಡಲ್ಪಡ ಬೇಕೆಂಬ ವಿಧಿಯುಂಟೋ ಅಷ್ಟನ್ನೂ ನಡೆಸುತ್ತಿದ್ದನೆಂದರೆ ಸಾಕು. ಇನ್ನು ಉಳಿದುದೆಂದರೆ, ಜಮಿಾನ್ಯಾರ್ ತಾರಾಪತಿರಾಯನ ವಿಚಾರ ವೊಂದೇ. ತಾರಾಪತಿರಾಯನಿಗೇನು ಕೊರತೆ ? ಸ್ನೇಹಮಯಿ ಸುನಂದಾದೇ ಎಯ, ವಿದ್ಯಾವತೀ ಗಂಗಾದೇವಿಯ, ಸಹಚಾರಿಣೀಸಖಿಯರಾ, ಗಿದ್ದು, ಮೋಹನದತ್ತಕುಮಾರನು ಅಂಕದಲ್ಲಿ ಪರಿಶೋಭಿಸುತ್ತಿರುವಂದು, ಯೋಗಿನೀ ಚಂದ್ರಮತಿಯು ಪುತ್ರವಾತ್ಸಲ್ಯದಿಂದ ಹರಸುವುದೂ, ಯಮು