ಪುಟ:ದಕ್ಷಕನ್ಯಾ .djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೨೫೩ ನೆಯೇ ಮೊದಲಾದ ಪರಿಜನರು ನಲಿದು ಸೇವಿಸುತ್ತಿರುವುದೂ, ಯಾವ ಸ್ವರ್ಗಸುಖಕ್ಕೆ ಕಡಮೆಯಾಗಿರುವುದು ? ಅಷ್ಟೇಅಲ್ಲ, ಕೈತಪ್ಪಿ ಹೋಗಿದ್ದ ಧನಕನಕ ವಸ್ತುಗಳೆಲ್ಲವೂ ದೊರೆದುವು ; ಮನಃಕಾಲುಷ್ಯವೂ ಪರಿಹರವಾ ಯಿತು. ರಾವ್ ಬಹದ್ದೂರ್ ರಾಧಾನಾಧರಾಯನೂ, ಸುಕನ್ಯಾದೇವಿಯ ಸವಿಾಪ ಬಂಧುಗಳಾದರು. ಶ್ರೀದತ್ತ ಕುಮಾರನೇ ಜಾಮಾತನಾದನು. ಉಭಯಕುಲೋದ್ಧಾರಿಣಿಯಾದ ದಕ್ಷ ಕನ್ಯ (ವಿಂದೆ) ಯೇ ಸೀಮಂತ ಪುತ್ರಿ ಯೆಂದು ಪ್ರಸಿದ್ದಿ ಹೊಂದಿದಳು. ಇನ್ನೇನು ಉಳಿದಿರುವುದು ? ಕೀರ್ತಿಭೋಗ-ಸಂಪದ-ಸಮಾಧಾನಗಳೆಂಬ ಚತುರಂಗ ಬಲವೂ ಪರಿಪುಷ್ಟವಾಗಿವೆ ಯಲ್ಲವೆ ? ನಿಜ, ತಾರಾಪತಿರಾಯನು, ಇಂದು ನಿಜವಾಗಿಯೂ, ತಾರಾಪ ತಿಯಾಗಿಯೇ ಪ್ರಕಾಶಿಸುತ್ತಿರುವನು, ಪ್ರಕಾಶಿಸಲಿ ! ಪುತ್ರಪೌತ್ರಾಭಿವೃದ್ಧಿ ಯಿಂದ ಚಿರಕಾಲ ಪ್ರಕಾಶಿಸುತ್ತಿರಲಿ ! ತನ್ನ ಪವಿತ್ರತೆ, ಪ್ರೇಮ, ಕೃತಜ್ಞತೆ, ಸತ್ಯಸಂಕಲ್ಪಗಳನ್ನೇ ತನ್ನ ಇತರ ಭ್ರಾತೃವರ್ಗಕ್ಕೂ ಹಂಚಿ, ಅವರನ್ನೂ ತನ್ನಂತೆಯೇ ಪ್ರಕಾಶಿಸುವಂತೆ ಮಾಡುತ್ತಿರಲಿ !! ನಮ್ಮ ಭಾರತಮಾತೆಯು ಎಂದೆಂದಿಗೂ ಕುಂದದ ಆನಂದಸಾಮ್ರಾಜ್ಯದಲ್ಲಿ ಬಗೆಗೊಳ್ಳುತ್ತಿರುವಂತೆ ಮಾಡಲಿ !! ಇಪ್ಪಾಗಿ ನಮ್ಮ ಲೇಖನಿಯ ಪರಿಶ್ರಮಕ್ಕೂ ಫಲವು ದೊರೆದಂ ತಾಗಲಿ, ಮತ್ತೇನು ನಮ್ಮ ಕೋರಿಕೆ ? ಕರ್ತವ್ಯದಕ್ಷರನ್ನಾಗಿ ಮಾಡುವ ಭಗವತ್ಯವಾರೂಪವು, ನಮ್ಮಲ್ಲಿ ಸಾಕ್ಷಾತ್ಕರಿಸಿರಬೇಕೆಂಬುದೊಂದೇ ! ಹಾಗಾದರೆ, ಹೀಗೆಂದು ಪ್ರಾರ್ಥಿಸುವೆವು (ಅಸ್ತು) “ ರ್ಯ ವಿನ್ಯಸ್ಯಭಾ ರಂ ವಿಜಯಿನಿ ಜಗತಾಂ ಜಂಗಮಸ್ಥಾವರಾಣಾಂ | ಲಕ್ಷ್ಮಿ ನಾರಾಯಣಾಖ್ಯಂ ಮಧುನ ಮನುಭವ ತೃತ್ಯುದಾರಾನ್ ವಿಹಾರ್ರಾ || ಆರೋಗ್ಯಂ ಭೂತಿಮಾಯುಃ ಕೃತಮಿಹ ಬಹುನಾ ಯದ್ಯದಾಸ್ಸಾ ಪದಂ ವ | ಸನ್ನಿತ್ಯಂ ಸಮಸ್ತಂ ದಿಶತುಗಪುರುಷೋ ದಿವ್ಯಹೇತ್ಯಕ್ಷವತಿ೯ ” ||೧೦೦|| (ಸು-ಶ ) || ಶ್ರೀ ಕೃಷ್ಣಾರ್ಪಣಮಸ್ತು || ಲ