ಪುಟ:ದಕ್ಷಕನ್ಯಾ .djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ “ ಓ ಷಿ ಣಿ ಎಂಬ ಬಲವಾದ ಕೂಗೊಂದು ಇವಳ ಕಿವಿಯನ್ನು ಕೊರೆದು, ಮನಸ್ಸನ್ನು ತಿವಿದು, ಪ್ರಜ್ಞೆಗೆ ಆವರಿಸಿದ್ದ ಜಡತೆಯನ್ನು ಕಡಿದುಹಾಕಿಬಿಟ್ಟಿತು. ಕೃಷ್ಣಾಂಗಿಯಾದಾ ಯಮುನಾಬಾಯಿ, ಜಡತೆಯಂಗಿದ ಬಳಿಕಾ ದರೂ ಚಿತ್ತಸ್ವಾಸ್ಥ್ಯವನ್ನು ಹೊಂದಲಾರದೆಯೇ ಇದ್ದಳು. ಏಕೆಂದರೆಜಡತೆಯಿಂಗಿದ ಬಳಿಕ, ಚಂಚಲತೆಯು ಹೊರಹೊಮ್ಮದೆ ಪ್ರಕಾಶವು ಸ್ಥಿರ ವಾಗಲಾರದಷ್ಟೆ, ಹಾಗೆಯೇ ಯಮುನೆಯು ಕೂಡ ತನ್ನಲ್ಲಿತಾನೆಯೇ, c ಇದಾವಸಂಕೇತ ? ಇದರ ನಿಜಾಶಯವೇನು ? ಇಂದು ಮಧ್ಯಾಹ್ನದಿಂದ ಸಂಶಯಗಳೇ ಪರಂಪರೆಯಾಗಿ ಕಂಡುಬರುತ್ತಿರುವುದೇಕೆ ? ಇದರಿಂದ ಈ ಗೃಹಸ್ವಾಮಿಗೇನಾದರೂ ಕೆಡುಕುಂಟಾದೀತೋ ? ತಿಳಿದು ಹೇಳುವವ ರಾರು ? ಓ ನಮ್ಮ ತಾಯಿ | ಗೃಹರಾಜ್ಯಲಕ್ಷ್ಮಿ' ಸುನಂದಾದೇವಿ !!! ನೀನೆಲ್ಲಿರುವೆ ? ಏಕೆ ವಿಳಂಬಿಸುವೆ ? ನೀನು ಮತ್ತೆ ಬಂದೆಯಾದರೆ, ಈ ಪುಂಡಾಟಕ್ಕೆ ಗಂಡುಮದ್ದಾದೀತಲ್ಲವೇ ? ತಾಯಿ : ಮತ್ತೆ ಮೈದೋರ ಲಾರೆಯಾ ?” ಹೀಗೆ ಹೇಳು-ಹೇಳು ಆಕಾಶವನ್ನು ನೋಡಿ, ವಿಕೃತಸ್ವರ ದಿಂದ-: ಭಗವತಿ ! ದುರ್ಗಾಮಾತೆ !! ಕೃಪೆಮಾಡು, ನಮ್ಮ ತಾಯಿ ಯನ್ನು ಮತ್ತೆ ಕರೆಸಿಕೊಡು, ದಯಾಮಯಿ 1 ಈ ದಿನದ ವಿಷಯವಾಸ ನಾರೋಗಕ್ಕೆ ತಕ್ಕ ಮದ್ದು ಕೊಟ್ಟು ಕಾಪಾಡು ' ಎಂದು ಕೂಗಿಯೇ ಳುತ್ತ ಉಪ್ಪರಿಗೆಯಿಂದ ಕೆಳಕ್ಕಿಳಿದುಬಿಟ್ಟಳು. g