ಪುಟ:ದಕ್ಷಕನ್ಯಾ .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 || ಶ್ರೀ | ದ್ವಿತೀಯ ಪರಿಚ್ಛೇದ. (ಒಳಸಂಚು) ಆಉಪ್ಪರಿಗೆಯಿಂದಿಳಿದ ಯಮುನೆಯು, ಮೊದಲು ಅಂಗಳಕ್ಕೆ ಕುಸಿ:ಬಂದಳು, ಅಂಗಳದಲ್ಲಿ ಉಪ್ಪರಿಗೆಗೆ ಹತ್ತುವ ಹಂತದ ದ ಲ ವ ಕ ಈ ಬಾಗಿಲಿಗೆ ಅಡ್ಡವಾಗಿಯೇ ನಿಂತಿದ್ದ ತರುಣಸೇವಕನನ್ನು ಕಂಡಳು. ಆ ವೇಳೆಯಲ್ಲಿ ಆತನ ಮುಖಭಾವ ಮತ್ತು ವರ್ಣಭೇದಗಳಿಂದ ಯಮುನೆಯ ಸಂಶಯವು ಮತ್ತೂ ಹೆಚ್ಚಿತು. ಆದರೂ ಸಂಶಯವನ್ನು ಪ್ರಕಟಮಾಡದೆ, ಅಡಗಿಸಿಕೊಂಡು ಮೆಲ್ಲನೆ ಕೇಳಿದಳು-: ಗೋಪಾಲ ! ಕರೆದವರಾರು? ? ಗೋಪಾಲ--ನೀವು, ಮನೆಯಲ್ಲಿರುವಿರೋ ಇಲ್ಲವೋ ? ಎಂಬುದನ್ನು ತಿಳಿಯಲಿಕ್ಕಾಗಿ ನಾನೇ ಕೂಗಿದೆನು. ಯಮುನೆ-ಏತಕ್ಕಾಗಿ ? ಗೋಪಾಲ-ಯಾರೋ ಬಂದು ನಿಮ್ಮನ್ನು ಕೇಳಿದರು ; ಅದರಿಂದ ಕರೆದೆ. ಯಮುನೆ-ಅವರಾರು ? ಏನೆಂದರು ? ಎಲ್ಲಿರುವರು ? ಗೋಪಾಲ-ಅದಾವುದೂ ನನಗೆ ತಿಳಿಯದು, ಹೇಗೂ ನಿಮ್ಮನ್ನು ನೋಡ ಬೇಕಾಗಿತ್ತೆಂದೂ, ಮತ್ತೆ ಬರುತ್ತೇವೆಂದೂ ಹೇಳಿ ಹೋದರು. ಯಮುನೆ-ಹೋಗಲಿ, ಅಮ್ಮಾಯಿಾಯವರು ಏನುಮಾಡುತ್ತಿರುವರು ? ಗೋಪಾಲ-ಜಪದಲ್ಲಿರಬಹುದು. ಯಮುನೆ--ಕಿರಿಯ ಯಜಮಾನಿಯವರೋ ? ಗೋಪಾಲ--ನಾನು ನೋಡಿಲ್ಲ. ವಿಲಾಸಭವನದಲ್ಲಿಯೇ ಇರಬೇಕು. ಯಮುನೆ-ಇರಲಿ ; ನೀನು ಈಗ ಹೊರಗೆ ಹೋಗಬೇಕಾದುದಿಲ್ಲವಷ್ಟೆ. ಗೋಪಾಲ-ಏಕೆ ?