ಪುಟ:ದಕ್ಷಕನ್ಯಾ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತ ಷಿ ಣಿ ಯಮುನೆ-ನನಗೆ ಹೊರಗೆ ಕೆಲಸವಿದೆ, ಹೋಗಬೇಕು, ನೀನು ಮನೆಯ ಲ್ಲಿಯೇ ಇರುತ್ತೀಯಷ್ಟೆ ? ಗೋಪಾಲ-ಈಗಲೇ ನಾನು ಹೊರಗೆ ಹೋಗಬೇಕಾದುದೇನೂ ಇಲ್ಲ. ಅಡಿಗೆಗೆ ಬೇಕಾದುವುಗಳನ್ನು ತೆಗೆದಿಟ್ಟು, ಆ ಬಳಿಕ ಹೋಗಬೇ ಕಾಗಿದೆ. ಯಮುನೆ: ಹಾಗೆಯೇ ಮಾಡು, ನಾನೂ ಹೋಗುವೆನು ' ಎಂದು ಬೀದಿಯ ಕಡೆಗೆ ತಿರುಗಿದಳು. ಗೋಪಾಲನೂ ತಲೆದೂಗುತ್ತ ಅಂಗಳ, ತೊಟ್ಟಿ, ನಡುವೆಗಳನ್ನು ದಾಟಿ, ಅಡಿಗೆಮನೆಯ ಹಿಂಗ ಡೆಯ ಕತ್ತಲೆಕೋಣೆಯ ಕಡೆಗೆ ನಡೆದನು, ಬೀದಿಯ ಅಂಗಳದ ವರೆಗೂ ನಡೆದಿದ್ದ ಯಮುನೆಯು, ಏನನ್ನೋ ನೆನೆಯಿಸಿಕೊಂಡು ಧಟ್ಟನೆ ಹಿಂದಿರುಗಿದಳು. ಮನದಲ್ಲಿಯೇ ಯಾವುದನ್ನೋ ಗುಣಿ ಸುತ್ತ ಕಾಲುಸಪ್ಪಳವಾಗದಂತೆ ಗೋಪಾಲನು ನಡೆದ ದಾರಿಯ ಲ್ಲಿಯೇ ನಡೆತಂದಳು. ಗೋಪಾಲನಿಗೆ, ಯಮುನೆಯು ತನ್ನ ಬೆನ್ನಟ್ಟಿ ಬರುತ್ತಿರುವು ದೇನುಗೊತ್ತು ? ಪಾಪ ! ಹಿಂದು-ಮುಂದು ನೋಡದೆ ಮೆಲ್ಲನೆ ಕೋಣೆಯ ಕಿರುಮನೆಯ ಬಳಿಗೆ ಬಂದು ಬಗ್ಗಿ ನೋಡಿದನು. ಕಿರುಮನೆಯೊಳಗೆ ಸಣ್ಣ ದೀಪವೊಂದು ಮಿಣುಗುತ್ತಿತ್ತು, ಕಿರುಮನೆಯಲ್ಲಿ ಮರದ ಮುರುಕುಮಂ ಚದಮೇಲೆ ಕೃಷ್ಣಾಂಗನೊಬ್ಬನು ಒರಗಿಕುಳಿತು, ನಸ್ಯವನ್ನು ಹದಮಾಡು ತಿದ್ದನು. ಗೋಪಾಲನು ಕೃಷ್ಣಾಂಗನ ಮುಂದೆನಿಂತು ಹೇಳಿದನು. c: ದಿವಾನಸಾಹೇಬ್ ! ) ದಿವಾನ-(ಕಯ್ಯಲ್ಲಿ ಹದಮಾಡಿದ್ದ ನಸ್ಯದಿಂದ ಒಂದೆರಡು ಚಿಟಿಕಿ ಯನ್ನು ತೆಗೆದು ಸೊರಸೊರನೆ ಸೇದಿ ಮಿಕ್ಕುದನ್ನು ಬಲಗೈ ಬೆರ ಲುಗಳಿಂದ ಅದಿಮಿಹಿಡಿದು, ನಡು-ನಡುವೆ ಸೀನುತ್ತ- ಏನು ? ಗೋಪಾಲ ! ಇಂದಿನ ವಿಶೇಷವಿನ್ನೇನು ?'