ಪುಟ:ದಕ್ಷಕನ್ಯಾ .djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತ ಷಿ ಣಿ ಗೋಪಾಲನ್ನು, ಹೊರಗೆಹೋಗಿ ನಾಲ್ಕು ಕಡೆಯೂ ಹುಡುಕಿ ಬಂದು... ಹುಡುಕಿದೆ ; ಎಲ್ಲಿಯೂ, ಯಾರಸುಳಿವೂ ಇಲ್ಲ, ಎಲ್ಲೆಲ್ಲಿಯೂ ನಿಶ್ಯಬ್ದವಾಗಿದೆ.' ದಿವಾನ-ಹಾಗಿದ್ದರೆ, ನಮಗೆ ಕಾಲವು ಅನುಕೂಲವಾಗಿದೆಯೆಂದೇ ತಿಳಿ ಯಬೇಕು, ಏಕೆಂದರೆ ಆ ಮಾಟಗಾರ್ತಿಗೇನಾದರೂ ಈ ವಿಚಾರ ದಲ್ಲಿ ಅಲ್ಪ ಸ್ವಲ್ಪ ತಿಳಿದರೂ ಸಾಕು, ನನ್ನೀ ಯಶವಂತನಾಮಕ್ಕೆ ಮಣ್ಣು ಬೀಳುವುದು, ನಮ್ಮ ವರೆಲ್ಲರ ಕಯ್ಯಾಲುಗಳಿಗೂ ಬಿರುದು ಬರಬಹುದು' ಎಚ್ಚರಿಕೆಯಿರಲಿ, ಅಂಚೆಯಮನೆಗೆ ಹೋಗಿದ್ದೆಯಾ? ಗೋಪಾಲ-ಮೊದಲೇ ಹೇಳಲಿಲ್ಲವೇ ? ಹೊರಗೆ ಹೋಗಿಲ್ಲವೆಂದು. ದಿವಾನ-ಖತಿಯಿಂದ ಎಡಗಯ್ಯನ್ನು ಮಂಚಕ್ಕೆ ಹೊಡೆದು-1: ಚಿಃ | ಚಿಃ !! ಎಂತದ ಅವಿವೇಕಿ ನೀನು ? ಏನು ಎಚಾರವಿದು ? ಸ್ವಲ್ಪವಾದರೂ ಮುಂದಾಲೋಚನೆಯೇ ಬೇಡವೇ ? ಕಾಗದಪತ್ರ ಗಳೇನಾದರೂ ಇತರರ ಕೈಸೇರಿದ್ದರೆ, ನಮ್ಮ ಗತೆಯೇನಾದೀ ತೆಂದು ಬಲ್ಲೆ ? ನಮ್ಮೆಲ್ಲರಿಗೂ ದೊಡ್ಡಮನೆಯೇ ಗತಿಯಾದೀತು ! ಹೊರಡು ; ಮುಟ್ಟಾಳ | ಬೇಗಹೊರಡು !! ಒಂಭತ್ತು ವರ್ಷಗಳ ಪ್ರಯತ್ನ ಕಾಧ್ಯವೂ ಕೆಟ್ಟು ಹೋದೀತು, ಈಗಲೇ ಹೋಗಿನೋಡು, ಉಳಿದುದೇನಿದ್ದರೂ ನಾನೇ ವಿಚಾರಿಸಿಕೊಳ್ಳುವೆನು, ಮುಖ್ಯ ವಾಗಿ ನಮ್ಮ ಗುಪ್ತ ಸಂಧಾನವನ್ನು ಭದ್ರವಾಗಿ ನೋಡಿಕೊಳ್ಳುವ ಕೆಲಸವು, ನಿನ್ನ ದೇ ಆಗಿದೆ. ನೆನಪಿರಲಿ!” ಎಂದು ಹೇಳಿ ಕೆಳಗಿಳಿದು ನಿಂತನು. ಗೋಪಾಲನು ತಲೆದೂಗುತ್ತ ಬೀದಿಯ ಕಡೆಗೆ ನಡೆದನು. ದಿವಾನಯಶವಂತನೂ, ಕಿರುಮನೆಯ ಕದವನ್ನು ಮುಚ್ಚಿ, ಹಿತ್ತಲಕಡೆಗೆ ನಡೆ ದನು, ಆದರೆ, ಗೋಪಾಲನ ಬೆನ್ನಟ್ಟಿ ಬಂದ ಯಮುನೆಯು, ಎಲ್ಲಿ ಹೋಗಿರ ಬಹುದು ? ಏನು ಮಾಡಿರಬಹುದು ? ಎಂಬುದು ನಮ್ಮ ಮಹಿಳಾವರ್ಗದ